AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ 

ಬಾಲ್ಯದ ಸುಂದರ ನೆನಪುಗಳು ಹಾಗೂ ಬೇಸಿಗೆ ರಜೆಯ ಸಡಗರದೊಂದಿಗೆ ಭಾವನಾತ್ಮಕವಾಗಿ ಬೆಸೆದಿರುವುದೇ ಈ ಅಜ್ಜಿಮನೆ. ಬೇಸಿಗೆ ರಜೆ ಶುರುವಾಯಿತೆಂದರೆ ಮಕ್ಕಳೆಲ್ಲರೂ ಅಜ್ಜಿ ಮನೆಗೆ ಹೋಗುತ್ತಾರೆ. ಇದೀಗ ರಜೆ ಮುಗಿಯುತ್ತಿದ್ದಂತೆ ಮೊಮ್ಮಗನನ್ನು ಭಾರವಾದ ಮನಸ್ಸಿನಿಂದ ಕಳುಹಿಸಿಕೊಡುವ ಅಜ್ಜಿಯ ಹೃದಯಸ್ಪರ್ಶಿ ಕ್ಷಣ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರ ಹೃದಯ ತುಂಬಿ ಬಂದಿದೆ, ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಬೇಸಿಗೆ ರಜೆ ಮುಗಿಸಿ ಅಜ್ಜಿ ಮನೆಯಿಂದ ಹೊರಟ ಮೊಮ್ಮಗನನ್ನು ಕಂಡು ಭಾವುಕರಾದ ಅಜ್ಜಿ 
ವೈರಲ್‌ ವಿಡಿಯೋImage Credit source: Facebook
ಸಾಯಿನಂದಾ
|

Updated on: May 31, 2026 | 7:03 PM

Share

ಅಜ್ಜಿ ಮನೆ ಎಂದರೆ ಎಲ್ಲಾ ಮೊಮ್ಮಕ್ಕಳಿಗೂ (grandchildren) ಸ್ವರ್ಗ. ಬಾಲ್ಯದ ಸುಂದರ ಬೇಸಿಗೆ ನೆನಪುಗಳು ಬೆಸೆದುಕೊಂಡಿರುವುದು ಅದೇ ಮನೆಯಲ್ಲಿ. ಬೇಸಿಗೆ ರಜೆ (summer vacation) ಶುರುವಾಗುತ್ತಿದ್ದಂತೆ ಯಾವಾಗ ಅಜ್ಜಿ ಮನೆಗೆ ಹೋಗುತ್ತೇನೆ ಎಂದು ಅದೆಷ್ಟೋ ಮಕ್ಕಳು ಕಾಯುತ್ತಾರೆ. ಅಜ್ಜಿಯ ಮಡಿಲಲ್ಲಿ ಮಲಗಿ ಕಥೆಗಳನ್ನು ಕೇಳುವುದು, ಅಜ್ಜನ ಜತೆಗೆ ಊರು ಸುತ್ತುವುದು ಇಂತಹ ನೆನಪುಗಳು ಒಂದೆರಡಲ್ಲ. ಹಳ್ಳಿಗಳಲ್ಲಿನ ಅಜ್ಜಿ ಮನೆಯ ಅನುಭವವು ಇಂದಿಗೂ ಅಷ್ಟೇ ಅಮೂಲ್ಯ. ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಬೇಸಿಗೆ ರಜೆ ಮುಗಿಸಿ ತನ್ನ ಮನೆಗೆ ಹೊರಡು ನಿಂತಿರುವ ಮೊಮ್ಮಗನನ್ನು ತಬ್ಬಿಕೊಂಡು ಅಳುತ್ತಾ ನಿಂತಿರುವ ಹಿರಿಜೀವದ ವಿಡಿಯೋ ವೈರಲ್ ಆಗಿದೆ. ಈ ದೃಶ್ಯ ನೋಡಿದ ನೆಟ್ಟಿಗರು ತಮ್ಮ ಬಾಲ್ಯದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಅಪೋಲೋ ಇಂಗ್ಲಿಷ್ ಸ್ಕೂಲ್ ದೊಂಬರಹಳ್ಳಿ (Apollo English School Dombarahalli) ಹೆಸರಿನ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ಬೇಸಿಗೆ ರಜೆ ತನ್ನ ಅಜ್ಜಿ ಮನೆಗೆ ಬಂದ ಮೊಮ್ಮಗ ಮತ್ತೆ ಮನೆಗೆ ಕಳುಹಿಸಿ ಕೊಡುವ ದೃಶ್ಯ ಕಾಣಬಹುದು. ಕಾರು ಹತ್ತಿ ಕುಳಿತಿರುವ ಮೊಮ್ಮಗನನ್ನು ತಬ್ಬಿಕೊಂಡು ಕಣ್ಣೀರು ಸುರಿಸುತ್ತಿರುವ ಅಜ್ಜಿಯನ್ನು ನೀವಿಲ್ಲಿ ಕಾಣಬಹುದು. ಅಜ್ಜಿಯನ್ನು ಬಿಟ್ಟು ಹೋಗಲು ಮನಸ್ಸಿಲ್ಲದೇ ಮೊಮ್ಮಗನು ಕಣ್ಣೀರು ಹಾಕುತ್ತಿದ್ದಾನೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ನನ್ನ ಅಜ್ಜಿ ಪಿಜ್ಜಾ ಪ್ರಿಯೆ; ಬಾಯಿ ಚಪ್ಪರಿಸಿಕೊಂಡು ಪಿಜ್ಜಾ ತಿಂದ ಅಜ್ಜಿ

ಈ ವಿಡಿಯೋ ಇಪ್ಪತ್ತೆಂಟು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಆ ದಿನಗಳು ಮತ್ತೆ ಮರಳಿ ಕೇಳುವೆ ಎಂದಿದ್ದಾರೆ. ಇನ್ನೊಬ್ಬರು, ನನ್ನ ಅಜ್ಜಿಯ ಮನೆಯ ನೆನಪಾಯಿತು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಅಜ್ಜಿ ತಾತ ಇದ್ರೆ ಅಪ್ಪ ಅಮ್ಮನನ್ನೇ ಮರೆತು ಬಿಡ್ತೇವೆ ಅಂತಹ ಪ್ರೀತಿ ಅದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಬರಿದಾದ ತುಂಗಭದ್ರಾ ನದಿ: ಮಂತ್ರಾಲಯದಲ್ಲಿ ಪುಣ್ಯ ಸ್ನಾನಕ್ಕೂ ಭಕ್ತರ ಪರದಾಟ
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಮೈದುಂಬಿದ ಚಿಕ್ಲಿಹೊಳೆ ಜಲಾಶಯ: ಅರ್ಧ ಚಂದ್ರಾಕೃತಿಯಲ್ಲಿ ಹರಿಯುವ ನೀರು
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಬೀದಿ ದೀಪ ಅಳವಡಿಸದ ಹಿನ್ನೆಲೆ ಅಧಿಕಾರಿಗಳಿಗೆ ಕೃಷ್ಣ ಭೈರೇಗೌಡ ಕ್ಲಾಸ್​​
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
ಶಾಲೆಗೆ ಹೋಗಲು ಪ್ರಾಣ ಪಣಕ್ಕಿಡುತ್ತಿರುವ ಮಕ್ಕಳು! ವಿಡಿಯೋ ವೈರಲ್
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
‘ಅಯೋಗ್ಯ 2’ ತಂಡದ ಭರ್ಜರಿ ಭೋಜನ, ವಿಡಿಯೋ ನೋಡಿ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
ಸಿದ್ದರಾಮಯ್ಯ ಮುನಿಸಿಕೊಂಡಿದ್ದಾರಾ?: ಅಸಲಿ ಸತ್ಯ ಬಿಚ್ಚಿಟ್ಟ ಶಿವಲಿಂಗೇಗೌಡ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
3 ವರ್ಷಗಳಲ್ಲಿ 1,000 ರೋಬೋಟಿಕ್ ಸರ್ಜರಿ ಯಶಸ್ವಿ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ದಿನೇಶ್ ಗುಂಡೂರಾವ್​​ಗೆ ಕೈತಪ್ಪಿದ ಸಚಿವ ಸ್ಥಾನ: ಬೆಂಬಲಿಗರಿಂದ ಪ್ರತಿಭಟನೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ
ಎಒ, ಎಎಒ ನೇಮಕಾತಿ ಸಮಸ್ಯೆ: ವಿದ್ಯಾರ್ಥಿಗಳ ಜೊತೆ ಡಿಕೆಶಿ ಚರ್ಚೆ