ಆಹಾರ ಪದಾರ್ಥಗಳ ರಫ್ತಿನಲ್ಲಿ ಟಾಪ್​ 10 ಪಟ್ಟಿಯಲ್ಲಿರುವ ಪುಟ್ಟ ರಾಷ್ಟ್ರ ಉಕ್ರೇನ್​

ಉಕ್ರೇನ್​ ದೇಶವು ಜಗತ್ತಿನ ಪುಟ್ಟ ರಾಷ್ಟ್ರಗಳಲ್ಲಿ ಒಂದಾಗಿದ್ದರೂ ವಿವಿಧ ದೇಶಗಳಿಗೆ ಗೋದಿ, ಜೋಳ, ಸೂರ್ಯಕಾಂತಿ ಬೀಜ, ಬಾರ್ಲಿ, ಸಾಸಿವೆ  ಹಾಗೂ ಸೋಯಾಬೀನ್​ಗಳ ರಪ್ತಿನಲ್ಲಿ ಟಾಪ್​ 10ನಲ್ಲಿದೆ.

ಆಹಾರ ಪದಾರ್ಥಗಳ ರಫ್ತಿನಲ್ಲಿ ಟಾಪ್​ 10 ಪಟ್ಟಿಯಲ್ಲಿರುವ ಪುಟ್ಟ ರಾಷ್ಟ್ರ ಉಕ್ರೇನ್​
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Pavitra Bhat Jigalemane

Updated on:Feb 26, 2022 | 11:53 AM

ರಷ್ಯಾ (Russia)  ಪಡೆಯ ದಾಳಿಯ ಅಬ್ಬರಕ್ಕೆ ಉಕ್ರೇನ್ (Ukraine)​ ನಲುಗಿಹೋಗಿದೆ. ನಾಗರಿಕರು ದೇಶವನ್ನು ತೊರೆದು ಹೊರಡಲು ತಯಾರಾಗಿದ್ದಾರೆ. ಈಗಾಗಲೇ ನೂರಾರು, ಸೈನಿಕರು, ನಾಗರಿಕರು ಜೀವ ಕಳೆದುಕೊಂಡಿದ್ದಾರೆ. ಹಗಲು ರಾತ್ರಿ ಜೀವಭಯದಲ್ಲಿ ಬದುಕುತ್ತಿದ್ದಾರೆ. ಉಕ್ರೇನ್​ ರಷ್ಯಾ ಯುದ್ಧದಿಂದ (Russia-Ukraine War) ಕೇವಲ ಅವರೆಡು ರಾಷ್ಟ್ರಗಳಿಗೆ ಮಾತ್ರವಲ್ಲ ಇಡೀ ಜಗತ್ತಿಗೆ ಹೊಡೆತ ಬಿದ್ದಿದೆ. ಉಕ್ರೇನ್​ ದೇಶವು ಜಗತ್ತಿನ ಪುಟ್ಟ ರಾಷ್ಟರಗಳಲ್ಲಿ ಒಂದಾಗಿದ್ದರೂ ವಿವಿಧ ದೇಶಗಳಿಗೆ ಗೋದಿ, ಜೋಳ, ಸೂರ್ಯಕಾಂತಿ ಬೀಜ, ಬಾರ್ಲಿ, ಸಾಸಿವೆ  ಹಾಗೂ ಸೋಯಾಬೀನ್​ಗಳ ರಪ್ತಿನಲ್ಲಿ ಟಾಪ್​ 10ನಲ್ಲಿದೆ. ಈಗ ಉಂಟಾಗುತ್ತಿರುವ ಬಿಕ್ಕಟ್ಟಿನಿಂದಾಗಿ ಉಕ್ರೇನ್​ನಿಂದ ರಪ್ತಾಗುವ ಈ ಎಲ್ಲಾ ಪದಾರ್ಥಗಳಲ್ಲಿ ವ್ಯತ್ಯವಾಗುತ್ತದೆ. ಇದರಿಂದ ಭಾರತ ಸೇರಿದಂತೆ ಹಲವು ದೇಶಗಳಿ ಆರ್ಥಿಕತೆಗೂ ದೊಡ್ಡ ಪೆಟ್ಟು ಬೀಳಲಿದೆ. ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ.

ಉಕ್ರೇನ್ ​ ಸೂರ್ಯಕಾಂತಿ ಬೀಜಗಳನ್ನು ರಫ್ತು ಮಾಡುವ ಜಗತ್ತಿನ ಅತಿದೊಡ್ಡ ದೇಶವಾಗಿದೆ. ಇನ್ನು ಜೋಳ ಮತ್ತು ಬಾರ್ಲಿಯನ್ನು ರಫ್ತು ಮಾಡುವುದರಲ್ಲಿ 6 ನೇ ಅತಿದೊಡ್ಡ ದೇಶವಾಗಿದ್ದು, ಸಾಸಿವೆಯನ್ನು ಪೂರೈಸುವ 7 ನೇ ಅತಿದೊಡ್ಡ ಮತ್ತು ಗೋದಿ ಮತ್ತು ಸೋಯಾಬಿನ್​ಪದಾರ್ಥಗಳನ್ನು ಪೂರೈಕೆ ಮಾಡುವ  9 ನೇ ಅತಿದೊಡ್ಡ ರಾಷ್ಟ್ರವಾಗಿದೆ. ವರದಿಯ ಪ್ರಕಾರ ರಷ್ಯಾ ಸುಮಾರು 170 ಲಕ್ಷ ಟನ್​ಗಳಷ್ಟು ಸೂರ್ಯಕಾಂತಿ ಉತ್ಪನ್ನವನ್ನು ವಿವಿಧ ದೇಶಗಳಿಗೆ ಪೂರೈಕೆ ಮಾಡುತ್ತದೆ. ರಷ್ಯಾ ದಾಳಿಯಿಂದ ಉಕ್ರೇನ್​ನ ವಿದೇಶಿ ರಫ್ತು ಸಂಪೂರ್ಣ ಹದಗೆಟ್ಟಿದೆ. ಈಗಾಗಲೇ ಹಲವು ಪದಾರ್ಥಗಳ ಬೆಲೆ ಏರಿಕೆಯಾಗಿದೆ. ಮುಂದಿನ ದಿನಗಳಲ್ಲಿ ಉಕ್ರೇನ್​ನಿಂದ ರಫ್ತಾಗುತ್ತಿದ್ದ ಪದಾರ್ಥಗಳ ಬೆಲೆ ಗಗನಕ್ಕೇರುವುದರಲ್ಲಿ ಅನುಮಾನವಿಲ್ಲ ಎನ್ನುವಂತಾಗಿದೆ.

ಮುಖ್ಯವಾಗಿ ಸೂರ್ಯಕಾಂತಿ ಬೀಜ ಮತ್ತು ಸೂರ್ಯಕಾಂತಿ ಎಣ್ಣೆಗೆ ಭಾರತ ಉಕ್ರೇನ್​ ದೇಶವನ್ನೇ ಅವಲಂಭಿಸಿದೆ. ಒಂದು ವರದಿಯ ಪ್ರಕಾರ ಶೆ.70ರಷ್ಟು ಸೂರ್ಯಕಾಂತಿ ಉತ್ಪನ್ನಗಳನ್ನು ಭಾರತಕ್ಕೆ ಉಕ್ರೇನ್​ನಿಂದಲೇ ಪೂರೈಕೆಯಾಗುತ್ತದೆ. ರಷ್ಯಾ ಕೂಡ ಸೂರ್ಯಕಾಂತಿಯನ್ನು ಬೆಳೆಯುತ್ತದೆ. ಆದರೆ  ಶೇ. 10ರಷ್ಟು ಮಾತ್ರ ಭಾರತಕ್ಕೆ ಪೂರೈಕೆಯಾಗುತ್ತದೆ. ಭಾರತಕ್ಕೆ ಪ್ರತೀ ತಿಂಗಳಿಗೆ ಸುಮಾರು 2ಲಕ್ಷ ಟನ್​ಗಳಷ್ಟು ಸೂರ್ಯಕಾಂತಿ ಎಣ್ಣೆ ಉಕ್ರೇನ್​ನಿಂದ ಫೂರೈಕೆಯಾಗುತ್ತದೆ. ಆದರೆ ಈಗ ಆ ಪೂರೈಕೆಗೆ ಬಹುದೊಡ್ಟ ಪೆಟ್ಟು ಬಿದ್ದಿದೆ. ಭಾರತೀಯ ಮಾರುಕಟ್ಟೆಗೆ ಇದರ ಬಿಸಿ ನೇರವಾಗಿ ತಟ್ಟಿದೆ. ಈ ಬಗ್ಗೆ ವಿಶ್ವ ಆಹಾರ ಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ. ಉಕ್ರೇನ್​ನ ಬಿಕ್ಕಟ್ಟಿನಿಂದಾಗಿ ನೇರವಾಗಿ ಆಹಾರ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಾಸವಾಗುತ್ತದೆ. ಇದನ್ನು ಸರಿ ಪಡಿಸುವ ಬಗೆಯ ಬಗ್ಗೆ ಆತಂಕವ್ಯಕ್ತಪಡಿಸಿ ಟ್ವೀಟ್​ ಮಾಡಿದೆ.

ಉಕ್ರೇನ್​​​ ವಿದ್ಯಾಭ್ಯಾಸಕ್ಕೂ ಹೆಸರುವಾಸಿ: ಉಕ್ರೇನ್​ ಪುಟ್ಟ ದೇಶವಾದರೂ ಸಮೃದ್ಧ ದೇಶವಾಗಿದೆ. ಆಹಾರ ಪದಾರ್ಥಗಳ ಪೂರೈಕೆಯಲ್ಲಿ ಮಾತ್ರವಲ್ಲದೆ ಶಿಕ್ಷಣದಲ್ಲಿಯೂ ಮುಂದೆವರೆದ ರಾಷ್ಟ್ರ. ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನಗಳ ಆಧುನಿಕತೆಯನ್ನು ಅಳವಡಿಸಿಕೊಂಡಿರುವ ದೇಶ. ಹೀಗಾಗಿಯೇ ಭಾರತ ಸೇರಿದಂತೆ ಹಲವು ರಾಷ್ಟರಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಅರಸಿಕೊಂಡು ಉಕ್ರೇನ್​ಗೆ ತೆರಳುತ್ತಾರೆ. ರಾಜಧಾನಿ ಕೈವ್‌ನಿಂದ ಸುಮಾರು 480 ಕಿಮೀ ದೂರದಲ್ಲಿರುವ ಖಾರ್ಕಿವ್ ರಾಷ್ಟ್ರೀಯ ವೈದ್ಯಕೀಯ ವಿಶ್ವವಿದ್ಯಾಲಯವು ದೇಶದಲ್ಲಿ ಹೆಚ್ಚು ಬೇಡಿಕೆಯಿರುವ ವೈದ್ಯಕೀಯ ಶಾಲೆಯಾಗಿದೆ.

Published On - 11:21 am, Sat, 26 February 22