AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಿಯನ್ನು ರಕ್ಷಿಸಲು ಹೋದ ವ್ಯಕ್ತಿಗೆ ಜಾಡಿಸಿ ಒದ್ದ ಕಾಂಗರೂ: ವಿಡಿಯೋ ವೈರಲ್

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ature27_12 ಎನ್ನುವ ಖಾತೆ ಹಂಚಿಕೊಂಡಿದೆ. ವಿಡಿಯೋಕ್ಕೆ ಕಾಂಗರೂವಿನಿಂದ ನಾಯಿಯನ್ನು ರಕ್ಷಿಸಲು ಹೋದಾಗ ನಡೆದ ಘಟನೆ ಎಂದು ಕ್ಯಾಪ್ಷನ್​ ನೀಡಲಾಗಿದೆ.

ನಾಯಿಯನ್ನು ರಕ್ಷಿಸಲು ಹೋದ ವ್ಯಕ್ತಿಗೆ ಜಾಡಿಸಿ ಒದ್ದ ಕಾಂಗರೂ: ವಿಡಿಯೋ ವೈರಲ್
ಕಾಂಗರೂ
TV9 Web
| Edited By: |

Updated on:Feb 25, 2022 | 3:48 PM

Share

ಪ್ರಾಣಿಗಳ (Animals) ಪ್ರಪಂಚ ಎಲ್ಲದಕ್ಕಿಂತ ಭಿನ್ನ. ತಮ್ಮದೇ ಭಾಷೆಯಲ್ಲಿ ಸನ್ನೆಗಳನ್ನು ಮಾಡಿಕೊಂಡು, ಆಟ ತುಂಟಾಟ, ಹೊಡೆದಾಟ ಮಾಡಿಕೊಂಡು ಒಂದೇ ಪ್ರದೇಶದಲ್ಲಿ ಎಲ್ಲ ಜಾತಿಯ ಪ್ರಾಣಿಗಳೂ ಕೂಡ ಹೊಂದಿಕೊಂಡು ಬದುಕುತ್ತವೆ. ಅಲ್ಲಿಗೆ ಮಾನವನ ಎಂಟ್ರಿಯಾದರೆ ಅವುಗಳಿಗೂ ಕಿರಿಕಿರಿ ಉಂಟಾಗುತ್ತದೆ. ಇದೀಗ ಕಾಂಗರೂವೊಂದು (Kangaroo) ನಾಯಿಯನ್ನುರಕ್ಷಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬನನ್ನು ಕಾಲಿನಲ್ಲಿ ಜಾಡಿಸಿ ಒದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್ ​(Instagram) ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ನೋಡಿ ನೆಟ್ಟಿಗರು ನಕ್ಕು ನಕ್ಕು ಸುಸ್ತಾಗಿದ್ದಾರೆ.

View this post on Instagram

A post shared by طبیعت (@nature27_12)

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ತನ್ನ ಸಾಕು ನಾಯಿಗಳನ್ನು ಕರೆದುಕೊಂಡು ವಾಕಿಂಗ್​ಗೆ ಹೋಗಿರುತ್ತಾನೆ. ಈ ವೇಳೆ ಅಲ್ಲೇ ಇದ್ದ ಕಾಂಗರೂ ನೊಡಿ ಒಂದು ನಾಯಿ ಕೂಗಿದೆ. ಆಗ ಕೋಪಗೊಂಡ ಕಾಂಗರೂ ಅಟ್ಟಿಸಿಕೊಂಡು ಬಂದಿದೆ. ಆಗ ವ್ಯಕ್ತಿ ನಾಯಿಯನ್ನು ರಕ್ಷಿಸಲು ಮುಂದಾಗಿದ್ದಾನೆ. ಈ ವೇಳೆ ಕಾಂಗರೂ ವ್ಯಕ್ತಿಗೆ ಕಾಲಿನಿಂದ ಜಾಡಿಸಿ ಒದ್ದಿದೆ. ಇದರಿಂದ ಆಯತಪ್ಪಿ ವ್ಯಕ್ತಿ ನೆಲಕ್ಕೆ ಬಿದ್ದಿದ್ದಾನೆ. ದೃಶ್ಯದಲ್ಲಿ ಒಂದು ಕಪ್ಪು ಮತ್ತು ಇನ್ನೊಂದು ಪುಟ್ಟ ಬಿಳಿ ನಾಯಿಮರಿಯನ್ನು ಕಾಣಬಹುದು.  ವ್ಯಕ್ತಿ ಕಾಂಗರೂವಿನಿಂದ ಒದೆಸಿಕೊಂಡು ನೆಲಕ್ಕೆ ಬಿದ್ದ ವಿಡಿಯೋವನ್ನು ಆತನೊಂದಿಗಿದ್ದ ಕುಟುಂಬ ಸೆರೆಹಿಡಿದಿದೆ. ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗಿದೆ.

ಈ ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ature27_12 ಎನ್ನುವ ಖಾತೆ ಹಂಚಿಕೊಂಡಿದೆ. ವಿಡಿಯೋಕ್ಕೆ ಕಾಂಗರೂವಿನಿಂದ ನಾಯಿಯನ್ನು ರಕ್ಷಿಸಲು ಹೋದಾಗ ನಡೆದ ಘಟನೆ ಎಂದು ಕ್ಯಾಪ್ಷನ್​ ನೀಡಲಾಗಿದೆ. 3 ಸಾವಿರಕ್ಕೂ ಹೆಚ್ಚು ಲೈಕ್ಸ್​ಗಳನ್ನು ಈ ವಿಡಿಯೋ ಪಡೆದಿದೆ.

ಇದನ್ನೂ ಓದಿ:

Viral Video: ಪಾಂಡಾ ಮರಿಗೆ ಬಾಟೆಲ್​ನಲ್ಲಿ ಹಾಲುಣಿಸಿದ ಝೂ ಕೀಪರ್​​

Published On - 3:45 pm, Fri, 25 February 22

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು