Viral Video: ಪಾಂಡಾ ಮರಿಗೆ ಬಾಟೆಲ್​ನಲ್ಲಿ ಹಾಲುಣಿಸಿದ ಝೂ ಕೀಪರ್​​

ಝೂಕೀಪರ್​ ಒಬ್ಬರು ಪಾಂಡಾ ಮರಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಬಾಡಲ್​ನಲ್ಲಿ ಹಾಲನ್ನು ಕುಡಿಸುತ್ತಿರುವುದನ್ನು ಕಾಣಬಹುದು. ಅದೇ ವಿಡಿಯೋದಲ್ಲಿ ಇನ್ನೊಂದು ಪಾಂಡಾ ಮರಿ ಝೂ ಕೀಪರ್​ ಕಾಲಿನ ಬಳಿ ಅಂಟಿಕೊಂಡು ಓಡಾಡುತ್ತಿರುವುದನ್ನು ಕಾಣಬಹುದು.

Viral Video: ಪಾಂಡಾ ಮರಿಗೆ ಬಾಟೆಲ್​ನಲ್ಲಿ ಹಾಲುಣಿಸಿದ ಝೂ ಕೀಪರ್​​
ಝೂ ಕೀಪರ್​, ಪಾಂಡಾ ಮರಿ
Follow us
TV9 Web
| Updated By: Pavitra Bhat Jigalemane

Updated on:Feb 25, 2022 | 10:28 AM

ಸಾಮಾಜಿಕ ಜಾಲತಾಣದಲ್ಲಿ ಕೆಲವೊಮ್ಮೆ ಕಾಣಿಸಿಕೊಳ್ಳುವ ಪ್ರಾಣಿಗಳ ವಿಡಿಯೋಗಳು ನೆಟ್ಟಿಗರ ಗಮನ ಸೆಳೆಯುತ್ತವೆ. ಅವುಗಳ ತುಂಟಾಟ, ಅವರದೇ ಆದ ಸಂಭಾಷಣೆ ನೋಡುಗರನ್ನು ಸೆಳೆಯುತ್ತದೆ. ಇದೀಗ ಪಾಂಡಾ (Panda) ಮರಿಯೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.  ಮೃಗಾಲಯದಲ್ಲಿರುವ ಪಾಂಡಾ ಮರಿಯೊಂದಕ್ಕೆ ಝೂಕೀಪರ್(Zookeeper)​ ಒನ್ನರು ಬಾಟಲ್​ನಲ್ಲಿ ಹಾಲನ್ನು ಕುಡಿಸುತ್ತಿರುವ ವಿಡಿಯೋ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಬಳಕೆದಾರರನ್ನು ಸೆಳೆದಿದೆ.  Buitengebieden ಎನ್ನುವ ಟ್ವಿಟರ್ ಖಾತೆಯಲ್ಲಿ (Twitter)​ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ವಿಡಿಯೋದಲ್ಲಿ ನೀಲಿ ಬಣ್ಣದ ಸೇಪ್ಟಿ ಡ್ರೆಸ್​ ಧರಿಸಿರುವ ಝೂಕೀಪರ್​ ಒಬ್ಬರು ಪಾಂಡಾ ಮರಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಬಾಡಲ್​ನಲ್ಲಿ ಹಾಲನ್ನು ಕುಡಿಸುತ್ತಿರುವುದನ್ನು ಕಾಣಬಹುದು. ಅದೇ ವಿಡಿಯೋದಲ್ಲಿ  ಇನ್ನೊಂದು ಪಾಂಡಾ ಮರಿ ಝೂ ಕೀಪರ್​ ಕಾಲಿನ ಬಳಿ ಅಂಟಿಕೊಂಡು ಓಡಾಡುತ್ತಿರುವುದನ್ನು ಕಾಣಬಹುದು. ಯಾವುದೇ ಪ್ರಾಣಿಗಳಾಗಲಿ ನಾವು ಪ್ರೀತಿ, ಅಕ್ಕರೆ ತೋರಿಸಿದರೆ, ಅವುಗಳೂ ನಮ್ಮೊಂದಿಗೆ ಅದೇ ರಿತಿ ನಡೆದುಕೊಳ್ಳುತ್ತವೆ ಎನ್ನುವುದನ್ನು ಈ ವಿಡಿಯೋ ವಿವರಿಸಿದೆ.

ಈ ಕ್ಯೂಟ್​ ವಿಡಿಯೋ ನೋಡಿ ನೆಟ್ಟಿಗರು ಮೆಚ್ಚಿಕೊಂಡಿದ್ದು, 2 ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ವಿಡಿಯೋ ಪಡೆದುಕೊಂಡಿದೆ. ವಿಡಿಯೋ ನೋಡಿದ ಬಳಕೆದಾರರು ವಿವಿಧ ರೀತಿಯ ಕಾಮೆಂಟ್​ಗಳನ್ನು ಹಂಚಿಕೊಂಡಿದ್ದಾರೆ. ನನ್ನ ಮುಂದಿನ ಕೆಲಸ ಅದೇ ಇರಬಹುದು ಎಂದು ಕಾಮೆಂಟ್​ ಮಾಡಿದರೆ ಈ ಕೆಲಸವನ್ನು ನಾನು ಪಡೆದುಕೊಳ್ಳುವುದು ಹೇಗೆ ಎಂದು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ರಷ್ಯಾ-ಉಕ್ರೇನ್​ ಯುದ್ಧ: ದೇಶದ ಪರವಾಗಿ ನಿಂತು ಮಗಳಿಗೆ ಕಣ್ಣೀರಿನ ವಿದಾಯ ಹೇಳಿದ ತಂದೆ: ವಿಡಿಯೋ ವೈರಲ್​

Published On - 10:28 am, Fri, 25 February 22

Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ