Facebook ಮೂಲಕ ಪರಿಚಯವಾಗಿದ್ದ ಯುವತಿ, ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿ 35 ಲಕ್ಷ ದೋಖಾ- ಕಂಬಾಳು ಪೀಠಾಧಿಪತಿ ಆರೋಪ

| Updated By: Digi Tech Desk

Updated on: Jun 06, 2023 | 2:28 PM

2020ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ವರ್ಷ ಎನ್ನುವ ಯುವತಿ ತಮ್ಮ ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿದ 35 ಲಕ್ಷ ರೂ ವಂಚನೆ ಎಸಗಿದ್ದಾರೆ ಎಂದು ಚನ್ನವೀರ ಶಿವಾಚಾರ್ಯ ಸ್ವಾಮೀಜಿಗೆ ಆರೋಪಿಸಿದ್ದಾರೆ.

Facebook ಮೂಲಕ ಪರಿಚಯವಾಗಿದ್ದ ಯುವತಿ, ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿ 35 ಲಕ್ಷ ದೋಖಾ- ಕಂಬಾಳು ಪೀಠಾಧಿಪತಿ ಆರೋಪ
ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದ ಯುವತಿಯಿಂದ ಕಂಬಾಳು ಮಠ ಪೀಠಾಧಿಪತಿಗೆ ಮೋಸ
Follow us on

ನೆಲಮಂಗಲ: ತಮ್ಮ ಮಠಕ್ಕೆ ಜಮೀನು ಕೊಡುವುದಾಗಿ ನಂಬಿಸಿದ ವರ್ಷ ಎಂಬ ಹೆಸರಿನ ಮಹಿಳೆಯೊಬ್ಬರು ಹಂತಹಂತವಾಗಿ 35 ಲಕ್ಷ ರೂಪಾಯಿಗಳನ್ನು ತಮ್ಮ ಖಾತೆಗೆ ಹಾಕಿಸಿಕೊಂಡು, ವಂಚನೆ (cheat) ಎಸಗಿದ್ದಾರೆ ಎಂದು ಚನ್ನವೀರ ಶಿವಾಚಾರ್ಯ ಸ್ವಾಮೀಜಿಗೆ ಆರೋಪಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕಂಬಾಳು ಮಠದ ಪೀಠಾಧಿಪತಿ ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಅವರಿಂದ ಈ ಆರೋಪ ಕೇಳಿಬಂದಿದ್ದು ವರ್ಷ ಎನ್ನುವ ಯುವತಿ 2020ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದರು. ಕಷ್ಟಗಳನ್ನ ಹೇಳಿಕೊಂಡು ಸ್ವಾಮೀಜಿಯನ್ನ ಪರಿಚಯ ಮಾಡಿಕೊಂಡಿದ್ದರು. ಆರಂಭದಲ್ಲಿ ವರ್ಷ 500 ರೂಪಾಯಿಗಳನ್ನು ಹಾಕಿಸಿಕೊಂಡಿದ್ದರು. ಮಂಜುಳ ಎನ್ನುವ ಮಹಿಳೆಯೊಬ್ಬರ ಅಕೌಂಟ್‌ಗೆ ತಾವು ಹಣ ಪಾವತಿಸಿದ್ದೆವು.

ಬಳಿಕ ನನ್ನ ಬಳಿ 10 ಎಕರೆ ಜಮೀನು ಇದೆ ಎಂದು ವರ್ಷ ನಂಬಿಸಿದ್ದರು. ಇದಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ತಂದು ಕೊಡುತ್ತೇನೆ ಎಂದೂ ಮಹಿಳೆ ಹೇಳಿದ್ದರು. ಅದಾದ ಮೇಲೆ ನನ್ನ ಮೇಲೆ ಹಲ್ಲೆಯಾಗಿದೆ, ಎಂ‌ಎಸ್‌ ರಾಮಯ್ಯ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದಳು. ಈ ವೇಳೆ ತಾವು ಆಸ್ಪತ್ರೆಯಲ್ಲಿದ್ದ ಬೇರೆ ಮಹಿಳೆಯರಿಂದ ಇದರ ನಿಜಾಂಶವನ್ನು ಪರಿಶೀಲಿಸಲಾಗಿತ್ತು.

ಇದನ್ನೂ ಓದಿ: ಬಿಟ್ಟಿ ವಿದ್ಯುತ್ ಯೋಜನೆ ‘ಉಚಿತವಾಗಿ‘ ಬಳಸಿಕೊಳ್ಳಲು ಜನರ ನಾನಾ ಲೆಕ್ಕಾಚಾರ: ಹೆಚ್ಚು ವಿದ್ಯುತ್ ಬಳಕೆ ಪಕ್ಕ

ಪರಿಶೀಲನೆಯ ವೇಳೆ ಎಂ‌ಎಸ್‌ ರಾಮಯ್ಯ ಆಸ್ಪತ್ರೆಯಲ್ಲಿ ಆ ಹೆಸರಿನವರು ಯಾರೂ ದಾಖಲಾಗಿಲ್ಲ ಅನ್ನೋದು ಬೆಳಕಿಗೆ ಬಂತು. ಈ ವೇಳೆ ಮೋಸ ಹೋಗಿರೋದು ಗೋಚರವಾಯ್ತು. ಹಾಗಾಗಿ, ಡಾಬಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ ಎಂದು ಚನ್ನವೀರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:12 pm, Tue, 6 June 23