ಹೊಸಕೋಟೆಯ ಕಲ್ಕುಂಟೆ ಅಗ್ರಹಾರದ ಬಳಿ ಒಂದೂವರೆ ವರ್ಷದ ಮಗು ಜತೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ

| Updated By: ಆಯೇಷಾ ಬಾನು

Updated on: Dec 20, 2022 | 10:16 AM

ಅಕ್ರಮ ಸಂಬಂಧ, ಪತಿಯಿಂದ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಒಂದೂವರೆ ವರ್ಷದ ಯಕ್ಷಿತ್ ಜತೆ ಶ್ವೇತಾ(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಸಕೋಟೆಯ ಕಲ್ಕುಂಟೆ ಅಗ್ರಹಾರದ ಬಳಿ ಒಂದೂವರೆ ವರ್ಷದ ಮಗು ಜತೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Follow us on

ದೇವನಹಳ್ಳಿ: ಒಂದೂವರೆ ವರ್ಷದ ಮಗು ಜತೆ ಕೆರೆಗೆ ಹಾರಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೊಸಕೋಟೆ ತಾಲೂಕಿನ ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ನಡೆದಿದೆ. ಅಕ್ರಮ ಸಂಬಂಧ, ಪತಿಯಿಂದ ವರದಕ್ಷಿಣೆ ಕಿರುಕುಳಕ್ಕೆ ಮನನೊಂದು ಒಂದೂವರೆ ವರ್ಷದ ಯಕ್ಷಿತ್ ಜತೆ ಶ್ವೇತಾ(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

2 ವರ್ಷದ ಹಿಂದೆ ರಾಕೇಶ್ ಎಂಬಾತನನ್ನು ಶ್ವೇತಾ ಮದುವೆಯಾಗಿದ್ದರು. ಮದುವೆ ನಂತರವೂ ಪತಿ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೇಳಿ ಬಂದಿದೆ. ಅಲ್ಲದೆ ಪತಿ ರಾಕೇಶ್​​ ಹಾಗೂ ಮನೆಯವರಿಂದ ಕಿರುಕುಳ ಆರೋಪವಿದ್ದು ಇದೇ ವಿಚಾರವಾಗಿ ಕುಟುಂಬಸ್ಥರು ಅನೇಕ ಬಾರಿ ರಾಜಿ ಪಂಚಾಯಿತಿ ಮಾಡಿದ್ದಾರೆ. ಆದ್ರೆ ಇನ್ನಷ್ಟು ಕಿರುಕುಳದ ತಾಳದ ಪರಿಸ್ಥಿತಿಯಲ್ಲಿದ್ದ ಶ್ವಾತ ತನ್ನ ಪುಟ್ಟ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಆರೋಪಿ‌ ರಾಕೇಶ್​​ನನ್ನು ಅನುಗೊಂಡನಹಳ್ಳಿ ಪೊಲೀಸರು‌ ವಶಕ್ಕೆ‌ ಪಡೆದಿದ್ದಾರೆ. ಅನುಗೊಂಡನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಕ್ಷ ಲಕ್ಷ ಹಣ ಆಭರಣಗಳನ್ನು ಕೊಟ್ಟು ಮದುವೆ ಮಾಡಿಕೊಟ್ಟಿದ್ರು ಕಿರುಕುಳದಿಂದ ಮಗಳು ಮೃತಪಟ್ಟಿದ್ದಾಳೆ ಎಂದು ಮೃತ ಶ್ವೇತಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ತಾಯಿ, ಮಗಳು ಹಾಗೂ ಮಗ ಸೇರಿ ಒಂದೇ ಕುಟುಂಬದ ಮೂವರು ಆತ್ಮಹತ್ಯೆ

ಗುಡಿಸಲು ತೆರವುಗೊಳಿಸಿದಕ್ಕೆ ಯುವಕನಿಂದ ಆತ್ಮಹತ್ಯೆ ಯತ್ನ

ತುಮಕೂರು ತಾಲೂಕಿನ ರಾಮಗೊಂಡನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಗುಡಿಸಲು ತೆರವಿಗೆ ಯತ್ನಿಸಿದರೆಂದು ಯುವಕ ಆತ್ಮಹತ್ಯೆಗೆ ಮುಂದಾಗಿದ್ದು ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಯುವಕನಿಗೆ ಚಿಕಿತ್ಸೆ ಮುಂದುವರೆದಿದೆ. ಯುವಕ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅರಣ್ಯ ಪ್ರದೇಶದಲ್ಲಿರುವ ಗುಡಿಸಲು ತೆರವಿಗೆ ಅಧಿಕಾರಿಗಳು ಬಂದಾಗ ನಾಗೇಶ್ ಎಂಬ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದ.

ನಾಗೇಶ್ ಕುಟುಂಬ, ಇದೇ ಜಾಗದಲ್ಲಿ ಸುಮಾರು 40 ವರ್ಷದಿಂದ ಸಾಗುವಳಿ ಮಾಡಿಕೊಂಡು ಬಂದಿದ್ದರಂತೆ. ಆದ್ರೆ ಜಾಗಬಿಡಿ ಎಂದು ಪದೇ ಪದೇ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಕುಟುಂಬಸ್ಥರು ತುಮಕೂರು ವಲಯ ಅರಣ್ಯಾಧಿಕಾರಿಗಳ ವಿರುದ್ಧ ಆರೋಪ ಮಾಡಿದ್ದಾರೆ. ಆರ್​ಎಫ್ ಈ ಪವಿತ್ರ ಹಾಗೂ ಸಿಬ್ಬಂದಿ ವಿರುದ್ಧ ಕಿರುಕುಳ ಆರೋಪ‌ ಕೇಳಿ ಬಂದಿದೆ. ಮೂರುವರೆ ಎಕರೆ ಸರ್ಕಾರದ ವತಿಯಿಂದ ಮಂಜೂರು ಆಗಿರುವ ಜಮೀನು ಸೇರಿದಂತೆ ಗುಡಿಸಲು ತೆರವುಗೊಳಿಸಲು ಭೇಟಿ ನೀಡಿದ್ದ ವೇಳೆ ಘಟನೆ ‌ನಡೆದಿದೆ. ಜಮೀನು ಲಕ್ಷ್ಮೀ ದೇವಮ್ಮ ಎಂಬುವರ ಹೆಸರಿನಲ್ಲಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 10:16 am, Tue, 20 December 22