Illicit Relationship: ವಿವಾಹಿತ ಮಹಿಳೆ ಜತೆ 27ರ ಯುವಕ ಲವ್ವಿಡವ್ವಿ: ಬಳಿಕ ನಡೆದಿದ್ದು ಘನಘೋರ ದುರಂತ

| Updated By: ಡಾ. ಭಾಸ್ಕರ ಹೆಗಡೆ

Updated on: May 25, 2023 | 10:52 AM

ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಯುವಕ ಬರ್ಬರ ಹತ್ಯೆಯಾಗಿದ್ದಾನೆ. ರಾಜೀ ಸಂಧಾನ ಮಾಡಿದರೂ ಚಾಳಿ ಮುಂದುವರಿಸಿದ್ದಕ್ಕೆ ಯುವಕನ ಜೀವ ತೆಗೆದಿದ್ದಾರೆ.

Illicit Relationship: ವಿವಾಹಿತ ಮಹಿಳೆ ಜತೆ 27ರ ಯುವಕ ಲವ್ವಿಡವ್ವಿ: ಬಳಿಕ ನಡೆದಿದ್ದು ಘನಘೋರ ದುರಂತ
ಪ್ರದೀಪ್, ಕೊಲೆಯಾದ ಯುವಕ
Follow us on

ಬೆಂಗಳೂರು: ಮಹಿಳೆ ಜತೆ ಅಕ್ರಮ ಸಂಬಂಧ (illicit relationship)ಹೊಂದಿದ್ದ ಯುವಕನೋರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ(Bengaluru rural district) ದೇವನಹಳ್ಳಿ ತಾಲೂಕಿನ ಸಿಂಗ್ರಹಳ್ಳಿ ಗ್ರಾಮದಲ್ಲಿ ನಡೆದಿದೆ. ಪ್ರದೀಪ್(27) ಕೊಲೆಯಾದ ಯುವಕ. ಈತ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಷಯ ಮಹಿಳೆಯ ಗಂಡನಿಗೆ ತಿಳಿದಿದ್ದು, ಬಳಿಕ ಇದೇ ವಿಚಾರವಾಗಿ ಪೊಲೀಸರ ಸಮುನ್ನಖದಲ್ಲಿ ರಾಜೀ ಪಂಚಾಯಿತಿ ಮಾಡಲಾಗಿತ್ತು ಬುದ್ಧಿವಾದ ಹೇಳಿದ ನಂತರವೂ ಇಬ್ಬರ ಅಕ್ರಮ ಸಂಬಂಧ ಮುಂದುವರಿಸಿದ್ದರು. ಇದೇ ಸಿಟ್ಟಿನಿಂದ ಪ್ರದೀಪ್​ನನ್ನು ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ನಿನ್ನೆ (ಮೇ 25) ತಡರಾತ್ರಿ ಮಾತುಕತೆ ನಡೆಸುವುದಕ್ಕೆ ಕರೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಮಹಿಳೆ ಪತಿ ವೆಂಕಟೇಶ್ ಹಾಗೂ ಕೋಳಿ ನಾಗೇಶ್​ ಕೊಲೆ ಮಾಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಮಾತುಕತೆಗೆಂದು ಕರೆದು ಕೊಚ್ಚಿ ಕೊಲೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ದಾಳಿ ಮಾಡಿದ ಬಳಿಕ ರಕ್ತದ ಮಡುವಿನಲ್ಲೇ ಯುವಕ ಪ್ರದೀಪ್ ಒಂದು ಕಿಲೋ ಮೀಟರ್ ವರೆಗೂ ಓಡಿ ಹೊಗಿದ್ದಾನೆ. ಆದರೂ ಬಿಡದೇ ಆತನನ್ನು ಹಿಂಬಾಲಿಸಿ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈ ಬಗ್ಗೆ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಕೆ ಕೈಗೊಂಡಿದ್ದಾರೆ.

Published On - 10:00 am, Thu, 25 May 23