ಕೊವಿಡ್​ ವಿರುದ್ಧ ಹೋರಾಟಕ್ಕಿಳಿದ ಬೆಂಗಳೂರು ಬಾಲಕಿಯರು; ಸ್ಲಮ್​ ನಿವಾಸಿಗಳಿಗೆ ಉಚಿತ ಆಕ್ಸಿಮೀಟರ್​ ನೀಡುತ್ತಿದ್ದಾರೆ ಸ್ನೇಹಾ, ಶ್ಲೋಕಾ

200 ಆಕ್ಸಿಮೀಟರ್ ಕೊಡಬೇಕು ನಿಜ..ಆದರೆ ಅದಕ್ಕೆ ಹಣ ಹೊಂದಿಸಬೇಕಲ್ಲ? ಕೂಡಲೇ ಕಾರ್ಯ ಶುರು ಮಾಡಿದ ಸ್ನೇಹಾ ಮತ್ತು ಶ್ಲೋಕಾ, ವಿವಿಧ ಆಕ್ಸಿಮೀಟರ್​ ಉತ್ಪಾದಕರು, ಮಾರಾಟಗಾರರನ್ನು ಸಂಪರ್ಕಿಸಿದರು. ಆರ್ಥಿಕ ಸಹಾಯ ಮಾಡುವಂತೆ ಕೋರಿ ಪೋಸ್ಟರ್​ನ್ನು ತಯಾರಿಸಿದರು.

ಕೊವಿಡ್​ ವಿರುದ್ಧ ಹೋರಾಟಕ್ಕಿಳಿದ ಬೆಂಗಳೂರು ಬಾಲಕಿಯರು; ಸ್ಲಮ್​ ನಿವಾಸಿಗಳಿಗೆ ಉಚಿತ ಆಕ್ಸಿಮೀಟರ್​ ನೀಡುತ್ತಿದ್ದಾರೆ ಸ್ನೇಹಾ, ಶ್ಲೋಕಾ
ಸ್ನೇಹಾ ಮತ್ತು ಶ್ಲೋಕಾ
Follow us
Lakshmi Hegde
|

Updated on:Apr 25, 2021 | 11:07 AM

ಬೆಂಗಳೂರು: ಕೊರೊನಾ ಸೋಂಕಿನ ಮೊದಲ ಅಲೆಗಿಂತ, ಎರಡನೇ ಅಲೆ ಭೀಕರವಾಗಿದೆ. ಬಡವರಿಗಂತೂ ಚಿಕಿತ್ಸೆ ಪಡೆಯುವುದು ಕಷ್ಟವಾಗಿದೆ. ಇನ್ನು ಕೊರೊನಾ ಸೋಂಕಿನ ಲಕ್ಷಣ ಇಲ್ಲದವರು ಮನೆಯಲ್ಲೇ ಇದ್ದರೂ ಆಕ್ಸಿಮೀಟರ್​ ಮೂಲಕ ನಾಡಿ ಮತ್ತು ರಕ್ತದಲ್ಲಿ ಆಮ್ಲಜನಕ ಮಟ್ಟವನ್ನು ಪರೀಕ್ಷಿಸಿಕೊಳ್ಳಲು ಆರೋಗ್ಯ ಸಿಬ್ಬಂದಿ, ವೈದ್ಯರು ಸಲಹೆ ನೀಡಿದ್ದಾರೆ. ಆದರೆ ಬಡವರಿಗೆ, ಹಿಂದುಳಿದವರಿಗೆ ಈ ಆಕ್ಸಿಮೀಟರ್​ ಕೊಳ್ಳುವುದಾಗಲಿ, ಅದನ್ನು ಬಳಕೆ ಮಾಡುವುದಾಗಿ ದೂರದ ಮಾತಾಗಿದೆ. ಇದೀಗ ಅಂಥ ಬಡವರ ಸಹಾಯಕ್ಕೆ ನಿಂತವರು ಬೆಂಗಳೂರಿನ ಸ್ನೇಹಾ ರಾಘವನ್​ ಮತ್ತು ಶ್ಲೋಕಾ ಅಶೋಕ್​.

ಸ್ನೇಹಾ ಹಾಗೂ ಶ್ಲೋಕಾ ಇಬ್ಬರೂ 10ನೇ ತರಗತಿಯಲ್ಲಿ ಓದುತ್ತಿದ್ದಾರೆ. ಬೆಂಗಳೂರು ನಗರ ಹೊರವಲಯದ ಸರ್ಜಾಪುರದ ನಿವಾಸಿಗಳು. ಇವರಿಬ್ಬರೂ ಈಗ ಸುಮಾರು 200 ಕೊಳೆಗೇರಿ ನಿವಾಸಿಗಳಿಗೆ ಆಕ್ಸಿಮೀಟರ್​ ನೀಡುವ ಮಹಾತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಸಿದ್ಧರಾಗುತ್ತಿದ್ದಾರೆ. ಸ್ಲಮ್ ನಿವಾಸಿಗಳಿಗೆ ಆಕ್ಸಿಮೀಟರ್ ಒದಗಿಸುವ ಯೋಜನೆಯನ್ನು ಈ ಬಾಲಕಿಯರ ಎದುರು ಇಟ್ಟಿದ್ದು, ಸಾಮಾಜಿಕ ಕಾರ್ಯಕರ್ತೆ ಅನುಪಮಾ ಪರೇಖ್​. ಅನುಪಮಾ ಅವರು ಹೀಗೊಂದು ವಿಚಾರ ಮುಂದಿಡುತ್ತಿದ್ದಂತೆ ಸ್ನೇಹಾ-ಶ್ಲೋಕಾ ಥಟ್​ ಎಂದು ಒಪ್ಪಿಕೊಂಡರು ಹಾಗೂ ಕಾರ್ಯಪ್ರವೃತ್ತರಾದರು.

200 ಆಕ್ಸಿಮೀಟರ್ ಕೊಡಬೇಕು ನಿಜ..ಆದರೆ ಅದಕ್ಕೆ ಹಣ ಹೊಂದಿಸಬೇಕಲ್ಲ? ಕೂಡಲೇ ಕಾರ್ಯ ಶುರು ಮಾಡಿದ ಸ್ನೇಹಾ ಮತ್ತು ಶ್ಲೋಕಾ, ವಿವಿಧ ಆಕ್ಸಿಮೀಟರ್​ ಉತ್ಪಾದಕರು, ಮಾರಾಟಗಾರರನ್ನು ಸಂಪರ್ಕಿಸಿದರು. ಆರ್ಥಿಕ ಸಹಾಯ ಮಾಡುವಂತೆ ಕೋರಿ ಪೋಸ್ಟರ್​ನ್ನು ತಯಾರಿಸಿದರು. ಹಾಗೇ, GiveIndia ವೆಬ್​​ಸೈಟ್​​ನಲ್ಲೂ ಕೂಡ ದೇಣಿಗೆ ಕೋರಿ ಪೇಜ್​ ಕ್ರಿಯೇಟ್​ ಮಾಡಿದರು. ತಮ್ಮ ಉದ್ದೇಶವನ್ನು ವಿವರಿಸಿದರು. ಈ ವೆಬ್​​ಸೈಟ್​ನಲ್ಲಿ ಅದ್ಭುತವಾಗಿ ಪ್ರತಿಕ್ರಿಯೆ ಬಂತು. ಬಡವರಿಗಾಗಿ ಆಕ್ಸಿಮೀಟರ್ ದೇಣಿಗೆ ನೀಡುವ ಉದ್ದೇಶದಿಂದ ದೇಣಿಗೆ ಸಂಗ್ರಹ ಮಾಡುತ್ತಿರುವ ಸ್ನೇಹಾ ಹಾಗೂ ಶ್ಲೋಕಾ ಬಳಿ ಕೇವಲ 24 ಗಂಟೆಯಲ್ಲಿ 2 ಲಕ್ಷ ರೂ. ಸಂಗ್ರಹವಾಯಿತು.

ಈ ಹಣವನ್ನು ಬಳಸಿ ಆಕ್ಸಿಮೀಟರ್​ ಖರೀದಿಸಿದ ನಂತ ಅದನ್ನು ಬೆಂಗಳೂರು ಮೂಲದ ಎನ್​ಜಿಒ ಸಂಪರ್ಕ​ ಮೂಲಕ ಬಡಜನರಿಗೆ ವಿತರಿಸಲಿ ಬಾಲಕಿಯರು ನಿರ್ಧರಿಸಿದ್ದಾರೆ. ಈ ಎನ್​ಜಿಒ ಹಿಂದುಳಿದ, ದುರ್ಬಲ, ಬಡಜನರಿಗಾಗಿ ಕೆಲಸ ಮಾಡುತ್ತಿದೆ. ಇದೀಗ ಸ್ನೇಹಾ ಮತ್ತು ಶ್ಲೋಕಾ ಕೂಡ ಇದೇ ಎನ್​ಜಿಒ ಮೂಲಕ ಬೆಂಗಳೂರಿನ ಸ್ಲಮ್ ಏರಿಯಾ ನಿವಾಸಿಗಳು, ಕೊಪ್ಪಳದ ಗ್ರಾಮಾಂತರ ಪ್ರದೇಶದ ಮಹಿಳೆಯರಿಗೆ ಆಕ್ಸಿಮೀಟರ್ ವಿತರಿಸಲಿದ್ದಾರೆ. ಸಂಪರ್ಕ ಎಂಬ ಎನ್​ಜಿಒ ಮೂಲಕ ಕೊಳೆಗೇರಿ ಜನರಿಗೆ ಆಕ್ಸಿಮೀಟರ್​ ವಿತರಿಸಲಾಗುತ್ತದೆ. ಅದನ್ನು ಬಳಸುವುದು ಹೇಗೆ ಎಂಬ ತರಬೇತಿಯನ್ನೂ ನೀಡಲಾಗುವುದು ಎಂದು ಟಿವಿ 9 ಕನ್ನಡ ಡಿಜಿಟಲ್​ಗೆ ಶ್ಲೋಕಾ ತಿಳಿಸಿದ್ದಾರೆ.

ಬಾಲಕಿಯರ ಕೃತಜ್ಞತೆ ಈ ಆಕ್ಸಿಮೀಟರ್ ಖರೀದಿಸಿ, ಬಡವರಿಗೆ ನೀಡುವ ಯೋಜನೆಯಲ್ಲಿ ಸಹಕಾರ ನೀಡಿದ ಎಲ್ಲರಿಗೂ ಸ್ನೇಹಾ ಮತ್ತು ಶ್ಲೋಕಾ ಕೃತಜ್ಞತೆ ಸಲ್ಲಿಸಿದ್ದಾರೆ. ದೇಣಿಗೆ ನೀಡಿದವರಿಗೂ ವಿಶೇಷ ಧನ್ಯವಾದ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇವಲ 24 ದಿನಗಳಲ್ಲಿ 1,093 ಮಂದಿ ಕೊರೊನಾ ಸೋಂಕಿಗೆ ಬಲಿ

ಸಾರಿಗೆ ನೌಕರರ ಮುಷ್ಕರದಿಂದ ಹುಬ್ಬಳ್ಳಿ ಗ್ರಾಮಾಂತರ ವಿಭಾಗಕ್ಕೆ 6 ಕೋಟಿ ನಷ್ಟ

Published On - 11:06 am, Sun, 25 April 21

ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ