Bengaluru: ವಿವಿಧ ಭೇಡಿಕೆಗಳನ್ನ ಈಡೇರಿಸುವಂತೆ ಫೆ.6ರಿಂದ ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 05, 2023 | 8:00 AM

ಬಜೆಟ್​ಗೂ ಮುನ್ನ ಸರ್ಕಾರಕ್ಕೆ ಶುರುವಾಯ್ತು ಬೇಡಿಕೆಗಳ ಸುರಿಮಳೆ, ವಿವಿಧ ಭೇಡಿಕೆಗಳನ್ನ ಈಡೇರಿಸುವಂತೆ ನಾಳೆ (ಫೆ.6) ಫ್ರೀಡಂ ಪಾರ್ಕ್​ನಲ್ಲಿ 4 ನಿಗಮದ ಸಾರಿಗೆ ನೌಕರರು, ಕುಟುಂಬ ಸಮೇತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ.

Bengaluru: ವಿವಿಧ ಭೇಡಿಕೆಗಳನ್ನ ಈಡೇರಿಸುವಂತೆ ಫೆ.6ರಿಂದ ಸಾರಿಗೆ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಪ್ರತಿಭಟನೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಇತ್ತೀಚೆಗಷ್ಟೇ ಅಂಗನವಾಡಿ ಕಾರ್ಯಕರ್ತೆಯರು ಗ್ರಾಚ್ಯೂಟಿ ಸೇರಿದಂತೆ ವಿವಿಧ ಭೇಡಿಕೆಗಳನ್ನ ಈಡೇರಿಸಲು ಫ್ರೀಡಂ ಪಾರ್ಕ್​ನಲ್ಲಿ ಕಳೆದ 10 ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ನಡೆಸುತ್ತಿದ್ದು, ಸರ್ಕಾರದ ಭರವಸೆ ಮೇರೆಗೆ ಮೊನ್ನೆಯಷ್ಟೆ ತಮ್ಮ ಪ್ರತಿಭಟನೆಯನ್ನ ನಿಲ್ಲಿಸಿದ್ದರು. ಇದರ ಬೆನ್ನಲ್ಲೆ ಇದೀಗ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಸಾರಿಗೆ ಇಲಾಖೆಯ 4 ನಿಗಮಗಳ ನೌಕರರು ಸೇರಿದಂತೆ ತಮ್ಮ ಕುಟುಂಬ ಸಮೇತ ನಾಳೆ(ಫೆ.6) ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ.

ಹಾಗಿದ್ರೆ ಸಾರಿಗೆ ನೌಕರರ ಬೇಡಿಕೆಗಳೇನು?

* ಜನವರಿ 1 2020 ರಿಂದ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಬಾಕಿ ಇದ್ದು, ಕೂಡಲೆ ವೇತನ ಹೆಚ್ಚಳ ಮಾಡುವುದು.

* ಮುಷ್ಕರದ ಸಮಯದಲ್ಲಿ ವಜಾಗೊಂಡಿರುವ ನಾಲ್ಕು ನಿಗಮಗಳ ನೌಕರರನ್ನು ಯಾವುದೇ ಷರತ್ತುಗಳಿಲ್ಲದೆ ಮರು ನೇಮಕಾತಿ ಮಾಡಿಕೊಳ್ಳುವುದು.

* ಮುಷ್ಕರದ ಸಮಯದಲ್ಲಿ ಸಾರಿಗೆ ನೌಕರರು ಮತ್ತು ಅವರ ಕುಟುಂಬಸ್ಥರ ಮೇಲೆ ದಾಖಲಾಗಿರುವ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದು.

* ಸಾರಿಗೆ ಸಂಸ್ಥೆಯಲ್ಲಿ ನಿವೃತ್ತಿಗೊಂಡಿರುವ ನೌಕರರಿಗೆ ನೀಡಬೇಕಾಗಿರುವ ಬಾಕಿ ಹಣವನ್ನು ಕೂಡಲೇ ನೀಡುವುದು,
ಅವರಿಗೆ ಸರಿಯಾದ ರೀತಿ ಪಿಂಚಣಿ ಸೌಲಭ್ಯವನ್ನು ಒದಗಿಸುವುದು.

* ಸಾರಿಗೆ ಸಂಸ್ಥೆಯ ನೌಕರರಿಗೆ ನಗದುರಹಿತ ಉತ್ತಮವಾದ ಆರೋಗ್ಯ ಯೋಜನೆಗಳನ್ನು ಒದಗಿಸುವುದು.

ಇವಿಷ್ಟು ಭೇಡಿಕೆಗಳನ್ನ ಈಡೇರಿಸುವಂತೆ ನಾಳೆ ಫ್ರೀಡಂಪಾರ್ಕ್​ನಲ್ಲಿ 4 ನಿಗಮದ ಸಾರಿಗೆ ನೌಕರರು ಕುಟುಂಬ ಸಮೇತ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ