ದೇವನಹಳ್ಳಿ: ಲಕ್ಷ ಲಕ್ಷ ಹಣ ಕಟ್ಟಿದ್ರು ಸಮರ್ಪಕವಾಗಿ ಹಂಚಿಕೆಯಾಗದ ಪ್ಲಾಟ್; ನೂತನ ವಸತಿ ಗೃಹಗಳ ಬಳಿ ಫಲಾನುಭವಿಗಳಿಂದ ಪ್ರತಿಭಟನೆ

ಕಳೆದ ಹಲವು ವರ್ಷಗಳಿಂದ ಸ್ವಂತ ಸೂರಿಗಾಗಿ ಹಲವು ಕನಸುಗಳನ್ನ ಕಂಡಿದ್ದ ಫಲಾನುಭವಿಗಳು ಇಂದು(ಫೆ.2) ಕನಸು ನನಸಾಗುವ ಆಸೆಯಿಂದ ಬೆಳಿಗ್ಗೆಯೇ ನೂತನವಾಗಿ ನಿರ್ಮಾಣವಾದ ಮನೆಗಳ ಬಳಿ ಬಂದಿದ್ದರು. ಆದರೆ ಸೂರ್ಯ ನೆತ್ತಿಮೇಲೆ ಬಂದರು ಪ್ಲಾಟ್​ ನೀಡಿಲ್ಲ. ಇದರಿಂದ ತಾಳ್ಮೆ ಕಳೆದುಕೊಂಡು ಫಲಾನುಭವಿಗಳು ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

ದೇವನಹಳ್ಳಿ: ಲಕ್ಷ ಲಕ್ಷ ಹಣ ಕಟ್ಟಿದ್ರು ಸಮರ್ಪಕವಾಗಿ ಹಂಚಿಕೆಯಾಗದ ಪ್ಲಾಟ್; ನೂತನ ವಸತಿ ಗೃಹಗಳ ಬಳಿ ಫಲಾನುಭವಿಗಳಿಂದ ಪ್ರತಿಭಟನೆ
ಸ್ವಂತ ಸೂರಿನ ಆಸೆಯಿಂದ ಬಂದಿದ್ದ ಫಲಾನುಭವಿಗಳಿಂದ ಪ್ರತಿಭಟನೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 05, 2023 | 7:02 AM

ಬೆಂಗಳೂರು ಗ್ರಾಮಾಂತರ: ಸಿಲಿಕಾನ್ ಸಿಟಿಯಲ್ಲಿ ಬಡ ಜನರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸರ್ಕಾರ ರಾಜೀವ್ ಗಾಂಧೀ ವಸತಿ ಯೋಜನೆಯಡಿಲ್ಲಿ ಒಂದು ಲಕ್ಷ ಮನೆಗಳ ಬಹು ಮಹಡಿ ಕಟ್ಟಡಗಳನ್ನ ನಿರ್ಮಾಣ ಮಾಡಿದೆ. ಜೊತೆಗೆ ಕಳೆದ ಎರಡು ದಿನಗಳಿಂದಷ್ಟೆ ಮುಖ್ಯಮಂತ್ರಿಗಳು ಯಲಹಂಕ ಭಾಗದಲ್ಲಿ ಮನೆಗಳ ಉದ್ಘಾಟನೆ ಮಾಡುವ ಮೂಲಕ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದ್ರು. ಆದರೂ ಬೆಂಗಳೂರು ಉತ್ತರ ತಾಲೂಕಿನ ನವರತ್ನ ಅಗ್ರಹಾರ ಬಳಿ ನಿರ್ಮಾಣ ಮಾಡಿರುವ ಬಹು ಮಹಡಿ ಕಟ್ಟಡದಲ್ಲಿ ಮಾತ್ರ ಸಾಕಷ್ಟು ಜನ ಅರ್ಹ ಫಲಾನುಭವಿಗಳಿಗೆ ಮನೆಗಳನ್ನ ಹಂಚಿಕೆ ಮಾಡಿಲ್ವಂತೆ. ಜೊತೆಗೆ ಕೆಲವರಿಗೆ ಒಂದು ಮನೆ ತೋರಿಸಿ ಇದೀಗ ಮತ್ತೋಂದು ಪ್ಲಾಟ್​ನ ಹಕ್ಕುಪತ್ರವನ್ನ ಅಧಿಕಾರಿಗಳು ನೀಡಿದ್ದಾರೆ. ಹೀಗಾಗಿ ಸ್ವಂತ ಸೂರಿನ ಕನಸು ಕಂಡಿದ್ದ ಸಾಕಷ್ಟು ಜನ ಬಡ ಜನರು ನೂತನವಾಗಿ ನಿರ್ಮಾಣ ಮಾಡಿರುವ ಬಹು ಮಹಡಿ ಕಟ್ಟಡದ ಬಳಿ ಆಗಮಿಸಿ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸುವ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ.

ಇನ್ನು ನವರತ್ನ ಅಗ್ರಹಾರ ಸೇರಿದಂತೆ ಸುತ್ತಾಮುತ್ತಲಿನ ಹತ್ತಾರು ಗ್ರಾಮಗಳಲ್ಲಿ ಸಾಕಷ್ಟು ಜನ ಬಡ ಜನರು ವಾಸ ಮಾಡ್ತಿದ್ದು ಎಲ್ಲರೂ ಸ್ವಂತ ಸೂರು ಸಿಗುತ್ತೆ ಅಂತ ಒಂದೊಂದು ಲಕ್ಷ ಹಣ ಡಿಡಿ ಕಟ್ಟಿ ಅರ್ಜಿಯನ್ನ ಹಾಕಿದ್ರಂತೆ. ಆದರೆ ಸ್ಥಳಿಯರಿಗೆ ಬಹು ಮಹಡಿ ಕಟ್ಟಡದಲ್ಲಿ ಮನೆಗಳನ್ನ ನೀಡದೆ ಹೊರಗಡೆ ಜನರಿಗೆ ನೀಡಿ ಸ್ಥಳಿಯರಿಗೆ ಸರ್ಕಾರ ವಂಚಿಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಸ್ಥಳಿಯ ಶಾಸಕರಿಗೆ ಬೇರೆಡೆ ಅರ್ಹ ಫಲಾನುಭವಿಗಳಿಗೆ ನೀಡಲು 50 ರಷ್ಟು ಮನೆಗಳನ್ನ ನೀಡಿದ್ದು ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ನೀಡಿಲ್ಲ. ಹೀಗಾಗಿ ಸ್ಥಳಿಯ ಬಡ ಜನರಿಗೆ ಮನೆಗಳು ಸಿಕ್ಕಿಲ್ಲ ಅಂತ ಶಾಸಕರ ಬೆಂಬಲಿಗರು ಸಹ ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ:ಬೆಂಗಳೂರು: ಆರ್ಕಿಡ್ ಶಾಲೆಯ ಕಳ್ಳಾಟ ಬಯಲು ಮಾಡಲು ಮೂರು ಜನರ ಕಮೀಟಿ ರಚನೆ ಮಾಡಿದ ಶಿಕ್ಷಣ ಇಲಾಖೆ

ಒಟ್ಟಾರೆ ಸಾಲಸೂಲ ಮಾಡಿ ಸ್ವಂತ ಸೂರು ಸಿಗುತ್ತೆ ಅಂತ ಒಂದು ಲಕ್ಷ ಹಣ ಡಿಡಿ ಕಟ್ಟಿ ಅರ್ಜಿ ಸಲ್ಲಿಸಿದ್ರು ಮನೆಗಳು ಹಂಚಿಕೆ ಮಾಡದಿರುವುದು ಸ್ಥಳಿಯರನ್ನ ಕೆರಳಿಸಿದೆ. ಇನ್ನು ಈ ಕುರಿತು ಸ್ಥಳಿಯರು ರಾಜೀವ್ ಗಾಂಧೀ ವಸತಿ ನಿಗಮದ ಅಧಿಕಾರಿಗಳಿಗೂ ದೂರು ನೀಡಿದ್ದು ಹೋರಾಟದ ಹಾದಿ ಹಿಡಿದಿದ್ದಾರೆ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ