ಬೆಂಗಳೂರು: ಆರ್ಕಿಡ್ ಶಾಲೆಯ ಕಳ್ಳಾಟ ಬಯಲು ಮಾಡಲು ಮೂರು ಜನರ ಕಮೀಟಿ ರಚನೆ ಮಾಡಿದ ಶಿಕ್ಷಣ ಇಲಾಖೆ

ಅಕ್ರಮ ಆರ್ಕಿಡ್​ ಶಾಲೆಯ ಕಳ್ಳಾಟ ಬಯಲು ಮಾಡಲು ಇದೀಗ ಶಿಕ್ಷಣ ಇಲಾಖೆ ಮೂರು ಜನರ ಕಮೀಟಿಯನ್ನ ರಚಿಸಿದ್ದು, ಆರ್ಕಿಡ್​ ಶಾಲೆಯ ವಿರುದ್ದ ಕ್ರಿಮಿನಲ್​ ಪ್ರಕರಣ ದಾಖಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಬೆಂಗಳೂರು: ಆರ್ಕಿಡ್ ಶಾಲೆಯ ಕಳ್ಳಾಟ ಬಯಲು ಮಾಡಲು ಮೂರು ಜನರ ಕಮೀಟಿ ರಚನೆ ಮಾಡಿದ ಶಿಕ್ಷಣ ಇಲಾಖೆ
ಆರ್ಕಿಡ್ ಶಾಲೆಯ ಕಳ್ಳಾಟ ಬಯಲು ಮಾಡಲು ಮುಂದಾದ ಶಿಕ್ಷಣ ಇಲಾಖೆ
Follow us
TV9 Web
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 02, 2023 | 11:29 AM

ಬೆಂಗಳೂರು: ಆರ್ಕಿಡ್ ಶಾಲೆಯ ಕಳ್ಳಾಟ ಬಯಲು ಮಾಡಲು ಶಿಕ್ಷಣ ಇಲಾಖೆ ಮುಂದಾಗಿದೆ , ಈಗಾಗಲೇ ಮೂರು ಜನರ ಕಮೀಟಿ ರಚಿಸಿದ್ದು, ಬಿಇಎಗಳು ಹಾಗೂ ಸಿಆರ್​ಪಿಗಳಿಂದ ಶಾಲೆಗೆ ಭೇಟಿ ನೀಡಿ ಮಾಹಿತಿಯನ್ನ ಕಲೆ ಹಾಕಿ ಆಯುಕ್ತರಿಗೆ ವರದಿ ನೀಡುವಂತೆ ಬೆಂಗಳೂರು ದಕ್ಷಿಣ ಹಾಗೂ ಉತ್ತರ ಉಪನೀರ್ದೇಶಕರುಗಳಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ತಲೆ ಎತ್ತಿರುವ ಫೇಕ್ ಆರ್ಕಿಡ್​ ಶಾಲೆ(Orchid International School)ಗಳ ಇಂಚಿಚೂ ಮಾಹಿತಿ ಕಲೆ ಹಾಕಿ, ಅಕ್ರಮ ಆರ್ಕಿಡ್ ಶಾಲೆಗಳ ಮೇಲೆ ಬಿಇಎ ನೇತೃತ್ವದಲ್ಲಿ ವಂಚನೆ ಹಾಗೂ ಕ್ರಿಮಿನಲ್ ಪ್ರಕರಣ ದಾಖಲಿಸಲು ಶಿಕ್ಷಣ ಇಲಾಖೆ ಮುಂದಾಗಿದೆ.

ಆರ್ಕಿಡ್ ಶಿಕ್ಷಣ ಸಂಸ್ಥೆಯನ್ನ ಕಪ್ಪು ಪಟ್ಟಿಗೆ ಹಾಕಲು ಶಿಕ್ಷಣ ಇಲಾಖೆ ಚಿಂತನೆ

ಈಗಾಗಲೇ ಬೆಂಗಳೂರು ದಕ್ಷಿಣ ವಿಭಾಗದ ಉಪನಿರ್ದೇಶಕರ ಸಲ್ಲಿಸಿರುವ ವರದಿಯಲ್ಲಿ ಆರ್ಕಿಡ್ ಬಣ್ಣ ಬಯಲಾಗಿದ್ದು, ದಕ್ಷಿಣ ಬೆಂಗಳೂರಿನಲ್ಲಿ 11 ಆರ್ಕಿಡ್ ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು ಅದರಲ್ಲಿ 11 ಆರ್ಕಿಡ್ ಶಾಲೆಗಳಲ್ಲಿ 4ಕ್ಕೆ ಮಾತ್ರ ಸಿಬಿಎಸ್​ಇ ಮಾನ್ಯತೆ ಇದೆ. ಉಳಿದ 7 ಆರ್ಕಿಡ್ ಶಾಲೆಗಳು ಸ್ಟೇಟ್​ ಸಿಲೆಬಸ್ ನಲ್ಲಿ ನಡೆಸಲಾಗುತ್ತಿರುವುದು ಮಾಹಿತಿ ಸಿಕ್ಕಿದೆ. ಶಿಕ್ಷಣ ಇಲಾಖೆಯ ಸ್ಟ್ಯಾಟ್ಸ್ ನಲ್ಲಿ ಕೂಡಾ ಈ ಮಾಹಿತಿ ಉಲ್ಲೇಖ ಮಾಡಿದೆ. ಬೆಂಗಳೂರು ಉತ್ತರದಲ್ಲಿಯೂ ಆರ್ಕಿಡ್ ಈ ಕಳ್ಳಾಟವಾಡಿದ್ದು ಅದರ ಮಾಹಿತಿ ಪಡೆಯಲು ಇಲಾಖೆ ಮುಂದಾಗಿದೆ.

ಇದನ್ನೂ ಓದಿ:ಸಿಬಿಎಸ್​ಸಿ ಸಿಲೆಬಸ್ ಪಾಠ ಮಾಡಿ, ಈಗ ರಾಜ್ಯ ಪಠ್ಯಕ್ರಮಕ್ಕೆ ಎಕ್ಸಾಂ: ಆರ್ಕಿಡ್ ಶಾಲೆ ವಿರುದ್ಧ ಪೋಷಕರ ಆಕ್ರೋಶ

ಆರ್ಕಿಡ್ ಶಾಲೆ ವಿರುದ್ಧ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ. ಸಿಬಿಎಸ್​ಇ ಸಿಲೆಬಸ್​ ಹೆಸರಿನಲ್ಲಿ ವಂಚಿಸಿದ್ದ ಆರ್ಕಿಡ್ ಇಂಟರ್​ನ್ಯಾಷನಲ್​ ಶಾಲೆಯ ವಿರುದ್ಧ ಪೋಷಕರು ಪ್ರತಿಭಟನೆ(Parents Protest) ನಡೆಸಿದ್ದರು. ಸಿಬಿಎಸ್​ಇ ಅನುಮೋದನೆ ಪಡೆಯದಿದ್ದರೂ ಪೋಷಕರಿಂದ ಹಣ ಸುಲಿಗೆ ಮಾಡಲಾಗುತ್ತಿತ್ತು. ಮಕ್ಕಳ ಪ್ರವೇಶಾತಿ ವೇಳೆ CBSE ಪಠ್ಯಕ್ರಮವೆಂದು ಹೆಚ್ಚಿನ ಶುಲ್ಕ ಸಂಗ್ರಹಿಸಿದ್ದಾರೆ. ಈಗ ಸ್ಟೇಟ್ ಸಿಲಬಸ್​​ನಲ್ಲೇ ಪರೀಕ್ಷೆ ಬರೆಸಲು ಶಾಲೆ ಮುಂದಾಗಿದೆ. ಸ್ಟೇಟ್ ಸಿಲಬಸ್​ನಲ್ಲೇ ಪರೀಕ್ಷೆ ಬರೆಯುವಂತಿದ್ದರೆ ಯಾಕೆ ಫೀಸ್​ ಕಟ್ಬೇಕು. ನಾವ್ಯಾಕೆ ಲಕ್ಷ ಲಕ್ಷ ಫೀಸ್​ ಕಟ್ಟಬೇಕೆಂದು ಶಾಲೆ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದರು. ದಿನದಿಂದ ದಿನಕ್ಕೆ ಆರ್ಕಿಡ್ ಇಂಟರ್​ನ್ಯಾಷನಲ್ ಶಾಲೆ​ಯ ಕಳ್ಳಾಟ ಬಯಲಾಗುತ್ತಿದೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ