ಬೆಂಗಳೂರಿನ ಖ್ಯಾತ ಸರ್ಕಾರಿ ಆಸ್ಪತ್ರೆಗಳಿಗೆ ಬೆಸ್ಕಾಂ ನೋಟಿಸ್, ಬಾಕಿ ಪಾವತಿಸದಿದ್ದರೆ ವಿದ್ಯುತ್ ಕಟ್ ಮಾಡುವ ಎಚ್ಚರಿಕೆ
ಕೆಸಿ ಜನರಲ್ ಸರ್ಕಾರಿ ಆಸ್ಪತ್ರೆ ಬರೋಬ್ಬರಿ 48 ಲಕ್ಷ ರೂ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಬಾಕಿ ಉಳಿಸಿಕೊಂಡ ಬಿಲ್ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರು: ನಗರದ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಗಳಿಗೆ ಬಾಕಿ ವಿದ್ಯತ್ ಬಿಲ್ ಪಾವತಿಸುವಂತೆ ಬೆಸ್ಕಾಂ(BESCOM) ನೋಟಿಸ್ ನೀಡಿದೆ. ಮಲ್ಲೇಶ್ವರಂನ ಕೆ.ಸಿ.ಜನರಲ್ ಆಸ್ಪತ್ರೆ(KC General Hospital), ಜಯನಗರದ ಸಾರ್ವಜನಿಕ ಆಸ್ಪತ್ರೆ(Jayanagara Generala Hospital) ಸೇರಿ ಹಲವು ಸರ್ಕಾರಿ ಆಸ್ಪತ್ರೆಗಳು ಹಾಗೂ ಪೊಲೀಸ್ ಠಾಣೆಗಳಿಗೆ ಬೆಸ್ಕಾಂ ನೋಟಿಸ್ ಜಾರಿ ಮಾಡಿದೆ.
ಕೆಸಿ ಜನರಲ್ ಸರ್ಕಾರಿ ಆಸ್ಪತ್ರೆ ಬರೋಬ್ಬರಿ 48 ಲಕ್ಷ ರೂ ಮೊತ್ತದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಈ ಹಿನ್ನೆಲೆ ಬೆಂಗಳೂರು ವಿದ್ಯುತ್ ಸರಬರಾಜು ನಿಗಮ ನಿಯಮಿತ (ಬೆಸ್ಕಾಂ) ಬಾಕಿ ಉಳಿಸಿಕೊಂಡ ಬಿಲ್ ಪಾವತಿಸುವಂತೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಕಾಲಮಿತಿಯಲ್ಲಿ ವಿದ್ಯುತ್ ಬಿಲ್ ಪಾವತಿ ಮಾಡದೆ ಇದ್ದರೆ, ವಿದ್ಯುತ್ ಕಡಿತ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ. ಹಾಗೂ ಜಯನಗರದ ಆಸ್ಪತ್ರೆ 24,49,453 ರೂ. ಬಾಕಿ ಉಳಿಸಿಕೊಂಡಿದ್ದು ವಿದ್ಯುತ್ ಬಿಲ್ ಪಾವತಿಸದಿದ್ದರೆ ಸ್ಥಗಿತಗೊಳಿಸುಂತೆ ಬೆಸ್ಕಾಂ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: ಮಂಡ್ಯ: ತಡರಾತ್ರಿ ರಸ್ತೆಯಲ್ಲಿ ಕಾರನ್ನ ಅಡ್ಡಗಟ್ಟಿ ಲಾಂಗ್ ಝಳಪಿಸಿದ ದುಷ್ಕರ್ಮಿಗಳು! ದರೋಡೆಗೆ ವಿಫಲ ಯತ್ನ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಾರಿ ಕೆಸಿ ಜನರಲ್ ಆಸ್ಪತ್ರೆ ಹಾಗೂ ಜಯನಗರದ ಸಾರ್ವಜನಿಕ ಆಸ್ಪತ್ರೆಗೆ ನಿತ್ಯವು ಸಾವಿರಾರು ಸಂಖ್ಯೆಯಲ್ಲಿ ಹೊರ ರೋಗಿಗಳು ಬರುತ್ತಾರೆ. ಜೊತೆಗೆ ಒಳರೋಗಿಗಳ ಸಂಖ್ಯೆಯೂ ಹೆಚ್ಚಿದೆ. ಈ ಸಂರ್ಭದಲ್ಲಿ ಆಸ್ಪತ್ರೆಯ ವಿದ್ಯುತ್ ಕಡಿತ ಮಾಡುವುದು ತೀವ್ರವಾದ ಚರ್ಚೆಗೆ ಗ್ರಾಸವಾಗಿದೆ.
ಕೆ.ಸಿ ಜನರಲ್ ಆಸ್ಪತ್ರೆಯೂ ಮಾಸಿಕ ಆಧಾರದ ಮೇಲೆ ಆಸ್ಪತ್ರೆ ಬಿಲ್‌ಗಳನ್ನು ತೆರವುಗೊಳಿಸಿಲ್ಲ. ಲಕ್ಷಗಟ್ಟಲೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಹೀಗಾಗಿ, ನೋಟಿಸ್ ಜಾರಿ ಮಾಡಿದ್ದೇವೆ. ಎರಡು ತಿಂಗಳ ಹಿಂದೆಯೇ ಆಸ್ಪತ್ರೆಗೆ ಮೊದಲ ನೋಟಿಸ್ ನೀಡಲಾಗಿತ್ತು. ಜ.17ರಂದು ಮತ್ತೊಮ್ಮೆ ನೋಟಿಸ್ ನೀಡಲಾಗಿದೆ. ಜ.30ರಂದು ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ ಎಂದು ಬೆಸ್ಕಾಂನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ