AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Budget 2023: ಬಜೆಟ್​ನಲ್ಲಿ ಘೋಷಿಸಿದ ಎಲ್ಲಾ ಯೋಜನೆಗಳಲ್ಲೂ ಕರ್ನಾಟಕಕ್ಕೆ ಪಾಲು; ಸಿಎಂ ಬಸವರಾಜ ಬೊಮ್ಮಾಯಿ

ವಿತ್ತ ಸಚಿವ ನಿರ್ಮಲ ಸೀತಾರಾಮನ್ ಅವರು ಫೆವ್ರವರಿ 1ರಂದು ಬಜೆಟ್ ಮಂಡಿಸಿದರು. ಈ ಬಗ್ಗೆ ಪ್ರತಿಪಕ್ಷಗಳು ನಿರಾಸದಾಯಕ ಎಂದು ಹೇಳಿದರೆ, ಆಡಳಿತ ಮತ್ತು ಮಿತ್ರಪಕ್ಷಗಳು ಉತ್ತಮ ಬಜೆಟ್ ಎಂದು ಹೇಳುತ್ತಿದ್ದಾರೆ. ಭಾರತದ ಆರ್ಥಿಕತೆ ಸದೃಢ ಅಡಿಪಾಯದ ಮೇಲಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಬಣ್ಣಿಸಿದ್ದಾರೆ.

Budget 2023: ಬಜೆಟ್​ನಲ್ಲಿ ಘೋಷಿಸಿದ ಎಲ್ಲಾ ಯೋಜನೆಗಳಲ್ಲೂ ಕರ್ನಾಟಕಕ್ಕೆ ಪಾಲು; ಸಿಎಂ ಬಸವರಾಜ ಬೊಮ್ಮಾಯಿ
ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
TV9 Web
| Updated By: Digi Tech Desk|

Updated on:Feb 10, 2023 | 8:51 AM

Share

ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitaraman) ಅವರು ನಿನ್ನೆ (ಫೆ.1) ಬಜೆಟ್ (Union Budget 2023) ಮಂಡನೆ ಮಾಡಿದ್ದಾರೆ. ದೇಶದ ಆರ್ಥಿಕತೆ ಸದೃಢ ಅಡಿಪಾಯದ ಮೇಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಹೇಳಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೃಷಿ, ಉತ್ಪಾದನಾ ಮತ್ತು ಸೇವಾ ವಲಯದಲ್ಲಿ ಬೆಳವಣಿಗೆ ನೋಡುತ್ತಿದ್ದೇವೆ. ದೇಶದ ಒಟ್ಟಾರೆ ಜಿಡಿಪಿ ಆರೋಗ್ಯಕರವಾಗಿದೆ. ಈ ಬಜೆಟ್ ಪ್ರಭಾವ ಏನೇನಾಗಬಹುದು ಅಂತಾ ನೋಡಬಹುದು. 10 ಲಕ್ಷ ಕೋಟಿ ಕ್ಯಾಪಿಟಲ್ ಔಟ್ ಹೆಚ್ಚಾಗಿದೆ. ಇದು ಬೆಳವಣಿಗೆ ದರ, ಉದ್ಯೋಗವನ್ನು ಹೆಚ್ಚಳ ಮಾಡುತ್ತದೆ. ಮುಂದಿನ ದಿನಗಳಲ್ಲಿ ಇದರ ದೊಡ್ಡ ಸಕಾರಾತ್ಮಕ ಪರಿಣಾಮ ನೋಡಬಹುದಾಗಿದೆ. ಬಜೆಟ್​ನಲ್ಲಿ ಗ್ರಾಮೀಣ ಮೂಲ ಸೌಕರ್ಯಕ್ಕೆ ಹೆಚ್ಚು ಒತ್ತು‌ ಕೊಟ್ಟಿದ್ದಾರೆ ಎಂದರು.

ಬಜೆಟ್​ನಲ್ಲಿ ಪ್ರತಿ ಮನೆಗೆ ಕುಡಿಯುವ ನೀರಿನ ಯೋಜನೆಗೆ ಅನುದಾನ ಇಟ್ಟಿದ್ದಾರೆ. ಸಣ್ಣ ಕೈಗಾರಿಕೆಗೆ ಮಿತಿಯನ್ನು 75 ಲಕ್ಷದಿಂದ 3 ಕೋಟಿಗೆ ಹೆಚ್ಚಳ ಮಾಡಿದ್ದಾರೆ. ಆರೋಗ್ಯ ಶಿಕ್ಷಣಕ್ಕೂ ಅನುದಾನ ಹೆಚ್ಚಳ ಮಾಡಲಾಗಿದೆ, ಉದ್ಯೋಗ, ಕೌಶಲ್ಯಾಭಿವೃದ್ದಿ, ಕೃಷಿಗೆ ಅನುದಾನ ಹೆಚ್ಚಳ ಮಾಡಿದ್ದಾರೆ. ಕೃಷಿ ರಾಜ್ಯ ವಿಷಯ ಆಗಿದ್ದರೂ ಇದು ರಾಜ್ಯಗಳಿಗೆ ಲಾಭ ಆಗಲಿದೆ ಎಂದರು.

ಇದನ್ನೂ ಓದಿ: Budget 2023: ವಿದೇಶಿ ಮಾರುಕಟ್ಟೆಗಳಲ್ಲಿ ಹೂಡಿಕೆ, ವಿದೇಶ ಪ್ರವಾಸ ಕೈಗೊಳ್ಳುವವರಿಗೂ ತಟ್ಟಲಿದೆ ತೆರಿಗೆ ಬಿಸಿ; ಇಲ್ಲಿದೆ ವಿವರ

ನಿಜಲಿಂಗಪ್ಪ ಕಾಲದಿಂದ ಭದ್ರಾ ಮೇಲ್ದಂಡೆ ಯೋಜನೆ ಮಾಡಬೇಕು ಅಂತ ಇತ್ತು. ಆದರೆ ಈ ಯೋಜನೆ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಪ್ರಾರಂಭವಾಯಿತು. ಆದರೆ 2008 ರವರೆಗೆ ಯಾವುದೇ ನಿರ್ದಿಷ್ಟ ಕ್ರಮ ತೆಗೆದುಕೊಂಡಿರಲಿಲ್ಲ. ರಾಷ್ಟ್ರೀಯ ಯೋಜನೆ ಆಗಿಲ್ಲ ಎಂದು ವಿಪಕ್ಷಗಳು ಟೀಕೆ ಮಾಡುತ್ತಿದ್ದಾರೆ. ಯುಪಿಎ ಸರ್ಕಾರ 2012 ರಲ್ಲಿ ಎಐಬಿಪಿ ಯೋಜನೆಯಡಿ ಅಡ್ಡ ಹಾಕಿತ್ತು. ಹಾಗಾಗಿ ಕರ್ನಾಟಕದ ಹಲವು ಯೋಜನೆಗಳಿಗೆ ಹಣ ಬಿಡುಗಡೆ ಆಗಿರಲಿಲ್ಲ. ಅದಾಗ್ಯೂ, ಮೋದಿ ನೇತೃತ್ವದ ಎನ್​​ಡಿಎ ಸರ್ಕಾರ ಯಾವುದೇ ಷರತ್ತು ಇಲ್ಲದೇ ಹಣ ಕೊಟ್ಟಿದೆ. ವಿಪಕ್ಷಗಳಿಗೆ ಇದರಿಂದ ನಿರಾಶೆ ಆಗಿದೆ. ಹಾಗಾಗಿ ನಿರಾಶೆಯಿಂದ ವ್ಯಾಖ್ಯಾನ ಮಾಡುತ್ತಿದ್ದಾರೆ ಎಂದರು.

ಬಜೆಟ್​ನಲ್ಲಿ ಪ್ರಧಾನ ಮಂತ್ರಿಗಳ ದೂರದೃಷ್ಟಿ ಇದೆ. ನಗರ ಮೂಲಸೌಕರ್ಯಕ್ಕೆ ಕೂಡಾ ಒತ್ತು ಕೊಟ್ಟಿದ್ದಾರೆ. ಘನ ತ್ಯಾಜ್ಯ ನಿರ್ವಹಣೆಗೂ ಅನುದಾನ ಕೊಡುತ್ತಿದ್ದಾರೆ. ಎಲ್ಲಾ ಯೋಜನೆಗಳಲ್ಲೂ ಕರ್ನಾಟಕಕ್ಕೆ ಪಾಲು ಬರುತ್ತದೆ. ಕೇವಲ 5300 ಕೋಟಿ ಮಾತ್ರ ಅಂತಾ ಕೆಲವರು ಹೇಳಿದ್ದಾರೆ. ಬಜೆಟ್ ಬಗ್ಗೆ ತಿಳಿದುಕೊಂಡವರು ಯಾರೂ ಈ ರೀತಿ ಮಾತನಾಡಲ್ಲ ಎಂದರು.

ಇದನ್ನೂ ಓದಿ: Budget 2023: ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಅನುದಾನ ನೀಡಿದ ಕೇಂದ್ರ ಸಚಿವರಿಗೆ ಧನ್ಯವಾದ ಅರ್ಪಿಸಿದ ಪ್ರಲ್ಹಾದ್ ಜೋಶಿ

ಸರ್ವ ಸ್ಪರ್ಶಿ ಮತ್ತು ಸರ್ವ ವ್ಯಾಪಿ ಬಜೆಟ್ ಇದಾಗಿದೆ. ಮೈಕ್ರೋ ಮತ್ತು ಮ್ಯಾಕ್ರೋ ಲೆವೆಲ್ ಸಮತೋಲನ ಮಾಡಲಾಗಿದೆ. ಕೃಷಿ ಫೈನಾನ್ಸ್, ಗ್ರಾಮೀಣ ಮೂಲ ಸೌಕರ್ಯಗಳ ಹೆಚ್ಚಳಕ್ಕೆ ರಾಜ್ಯದ ಬೇಡಿಕೆ ಇತ್ತು. ಅದರಂತೆ ಕೃಷಿ ಫೈನಾನ್ಸ್ ಅನುದಾನ ಹೆಚ್ಚು ಮಾಡಿದ್ದಾರೆ. ಅದರ ಲಾಭ ರಾಜ್ಯಕ್ಕೆ ಆಗಲಿದೆ. ಮ್ಯಾಚಿಂಗ್ ಗ್ರ್ಯಾಂಟ್​ಗಳನ್ನು ರಾಜ್ಯ ಕೊಡಬೇಕು, ಅದು ಸವಾಲಿನದ್ದಾಗಿರಲಿದೆ ಎಂದರು. ನೀರಾವರಿ ಯೋಜನೆಗಳನ್ನು ಅರ್ಥ ಮಾಡಿಕೊಂಡವರು ಯಾರೂ ಅನುದಾನದ ಬಗ್ಗೆ ಟೀಕೆ ಮಾಡಲ್ಲ. ಅಂತಿಮ ಹೇಳಿಕೆ ಬಂದಾಗ ಯಾವ ಯಾವ ರಾಜ್ಯಕ್ಕೆ ಎಷ್ಟು, ಯಾವ ಯೋಜನೆಗಳಿಗೆ ಎಷ್ಟು ಎಂಬುದು ತಿಳಿಯುತ್ತದೆ ಎಂದರು.

ಇನ್ನು ವಿಪಕ್ಷಗಳ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಿಎಂ ಬೊಮ್ಮಾಯಿ, ರಾಜಕೀಯವಾಗಿ ಏನು ಬೇಕಾದರೂ ಹೇಳಬಹುದು. ಕನ್ನಡಿಯೊಳಗಿನ ಗಂಟು, ಮೂಗಿಗೆ ತುಪ್ಪ ಇದೆಲ್ಲಾ ನಾನೂ ಮೂರು ದಶಕದಿಂದ ಕೇಳಿದ್ದೇನೆ. ಸಿದ್ದರಾಮಯ್ಯ ಬಜೆಟ್ ಮೂಲಕ ಎಷ್ಟು ಜನರಿಗೆ ತುಪ್ಪ ಸವರಿದ್ದರು ಅಂತ ಗೊತ್ತಾಗಿಯೇ 2018ರಲ್ಲಿ ಅವರ ಪಕ್ಷವನ್ನು ಮನೆಗೆ ಕಳಿಸಿದರು ಎಂದರು. ಮೇಕೆದಾಟು ಬಗ್ಗೆ ಮಾತನಾಡಿದ ಅವರು, ಮೇಕೆದಾಟು ಹಿಂದಿನ ಸರ್ಕಾರ ಮಾಡಿದ ಎಡವಟ್ಟಿನಿಂದಾಗಿ ಸುಪ್ರೀಂ ಕೋರ್ಟ್​​​​ನಲ್ಲಿ ಡಿಪಿಆರ್ ಸಿಕ್ಕಿಹಾಕಿಕೊಂಡಿದೆ. ಯೋಜನೆ ಪ್ರಾರಂಭ ಮಾಡುವಾಗಲೇ ಅಂದಿನ ಸರ್ಕಾರ ತಪ್ಪು ಮಾಡಿದೆ ಎಂದು ಆರೋಪಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Thu, 2 February 23