AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ವಿಡಿಯೋ ಕಾಲ್ ಮಾಡಿ ಪತ್ನಿಯನ್ನು ತೋರಿಸಲಿಲ್ಲ ಎಂದು ಸಹೋದ್ಯೋಗಿ ಹೊಟ್ಟೆಗೆ ಇರಿದು ಕೊಲೆ

ರಾಜೇಶ್​ ಮಿಶ್ರಾ ತನ್ನ ಪತ್ನಿಯ ಜೊತೆಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ನಿನ್ನ ಪತ್ನಿ ನೋಡ್ತೇನೆ ವಿಡಿಯೋಕಾಲ್​ ಮಾಡು ಎಂದು ಸುರೇಶ್​ ಪಟ್ಟು ಹಿಡಿದಿದ್ದಾನೆ.

ಬೆಂಗಳೂರು: ವಿಡಿಯೋ ಕಾಲ್ ಮಾಡಿ ಪತ್ನಿಯನ್ನು ತೋರಿಸಲಿಲ್ಲ ಎಂದು ಸಹೋದ್ಯೋಗಿ ಹೊಟ್ಟೆಗೆ ಇರಿದು ಕೊಲೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Feb 02, 2023 | 9:51 AM

ಬೆಂಗಳೂರು: ವಿಡಿಯೋಕಾಲ್​ ಮಾಡಿ ಸಹೋದ್ಯೋಗಿ ಆತನ ಪತ್ನಿ ತೋರಿಸದಿದ್ದಕ್ಕೆ ಹೊಟ್ಟೆಗೆ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ HSR ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುರೇಶ್ ಎಂಬಾತ ಸಹೋದ್ಯೋಗಿ ರಾಜೇಶ್​ ಮಿಶ್ರಾಗೆ ಕತ್ತರಿಯಿಂದ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾನೆ.

ಸುರೇಶ್ ಮತ್ತು ರಾಜೇಶ್ ಇಬ್ಬರೂ ಹೆಚ್​​ಎಸ್​​ಆರ್​ ಲೇಔಟ್​​ನಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದರು. ರಾಜೇಶ್​ ಮಿಶ್ರಾ ತನ್ನ ಪತ್ನಿಯ ಜೊತೆಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ನಿನ್ನ ಪತ್ನಿ ನೋಡ್ತೇನೆ ವಿಡಿಯೋಕಾಲ್​ ಮಾಡು ಎಂದು ಸುರೇಶ್​ ಪಟ್ಟು ಹಿಡಿದಿದ್ದಾನೆ. ಆಗ ತನ್ನ ಹೆಂಡತಿಯನ್ನು ನಿನಗ್ಯಾಕೆ ತೋರಿಸಬೇಕೆಂದು ರಾಜೇಶ್ ಗಲಾಟೆ ಶುರು ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದು ರಾಜೇಶ್ ಹೊಟ್ಟೆಗೆ​​ ಕತ್ತರಿಯಿಂದ ಇರಿದು ಸುರೇಶ್​​​ ಕೊಲೆ ಮಾಡಿದ್ದಾನೆ. ಸುರೇಶ್​ನನ್ನು ಹೆಚ್​​​ಎಸ್​​ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ಮೈಸೂರಿನ ದಟ್ಟಗಳ್ಳಿಯಲ್ಲಿ ಎಲೆಕ್ಟ್ರಿಕಲ್ ಅಂಗಡಿಯ ಶೆಲ್ಟರ್ ಮುರಿದು ಕಳ್ಳತನ

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ವಿಜಯಪುರ ಪಟ್ಟಣದ ಒಕ್ಕಲಿಗರ ಬೀದಿಯ ಮನೆಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸೀರೆಯಿಂದ ಫ್ಯಾನಿಗೇ ನೇಣು ಬಿಗಿದುಕೊಂಡು ಆನಂದ್ (38) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತ ವ್ಯಕ್ತಿ ಆನಂದ್ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದರು. ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರ್ಥಿಕ ಸಂಕಷ್ಟದಿಂದ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದ್ದು ಮನೆ ಒಡೆಯನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ತುಮಕೂರು ಬಳಿ ಅಪಘಾತ; ಐವರಿಗೆ ಗಾಯ

ತುಮಕೂರಿನ ಗೂಳೂರು ಸಮೀಪದ ಶೂಲದ ಆಂಜನೇಯ ದೇವಸ್ಥಾನ ಬಳಿ  ಕಾರು ಮತ್ತು ಕ್ಯಾಂಟರ್ ಲಾರಿ ನಡುವೆ ಡಿಕ್ಕಿ ಸಂಭವಿಸಿದ್ದು ಡ್ರೈವಿಂಗ್ ಸ್ಕೂಲ್ ಕಾರಿನಲ್ಲಿದ್ದ ಐವರಿಗೆ ಗಂಭೀರ ಗಾಯಗಳಾಗಿವೆ. ಕುಣಿಗಲ್ ಕಡೆಯಿಂದ ಬರುತ್ತಿದ್ದ ಹಾಲಿನ ಕ್ಯಾಂಟರ್ ವಾಹನ ತುಮಕೂರಿನಿಂದ ಕುಣಿಗಲ್ ಕಡೆಗೆ ಹೋಗುತ್ತಿದ್ದ ಡ್ರೈವಿಂಗ್ ತರಬೇತಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಹೋಂಡಾ ಆಕ್ಟಿವಾ ಅಡ್ಡ ಬಂದ ಕಾರಣ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಡ್ರೈವಿಂಗ್ ತರಬೇತಿ ವಾಹನದಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತುಮಕೂರಿನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:37 am, Thu, 2 February 23