Bangalore Traffic Advisory: 21 ದಿನಗಳ ಕಾಲ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಪರ್ಯಾಯ ಮಾರ್ಗ ವಿವರ ಇಲ್ಲಿದೆ

ಹೆಚ್.ಎ.ಎಲ್ ಏ‌ರ್ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಣತ್ತೂರು ಮುಖ್ಯ ರಸ್ತೆಯಲ್ಲಿ ಬಿ.ಬಿ.ಎಂ.ಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ 10.10.2025 ರಿಂದ 21 ದಿನಗಳ ಕಾಲ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಿಳಿಸಿದೆ

Bangalore Traffic Advisory: 21 ದಿನಗಳ ಕಾಲ ಬೆಂಗಳೂರಿನ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ; ಪರ್ಯಾಯ ಮಾರ್ಗ ವಿವರ ಇಲ್ಲಿದೆ
ಮುಂದಿನ ಕೆಲ ದಿನಗಳ ವರೆಗೆ ಪಣತ್ತೂರು ರಸ್ತೆ ನಿರ್ಬಂಧ

Updated on: Oct 24, 2025 | 2:52 PM

ಬೆಂಗಳೂರು, ಅಕ್ಟೋಬರ್ 24: ಹೆಚ್.ಎ.ಎಲ್ ಏ‌ರ್ಪೋರ್ಟ್ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಪಣತ್ತೂರು ಮುಖ್ಯ ರಸ್ತೆಯಲ್ಲಿ ಬಿ.ಬಿ.ಎಂ.ಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳುವ ಹಿನ್ನೆಲೆ 10.10.2025 ರಿಂದ 21 ದಿನಗಳ ಕಾಲ ಸಾರ್ವಜನಿಕರ ಮತ್ತು ವಾಹನ ಸವಾರರ ಹಿತದೃಷ್ಟಿಯಿಂದ ಸಂಚಾರ ಮಾರ್ಪಾಡು ಮಾಡಲಾಗಿದೆ ಎಂದು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಹೇಳಿದೆ.

ವಾಹನ ಸಂಚಾರ ನಿರ್ಬಂಧಿಸಿರುವ ರಸ್ತೆ

ಪಣತ್ತೂರು ಮುಖ್ಯ ರಸ್ತೆಯ ಪಣತ್ತೂರು ರೈಲ್ವೇ ಬ್ರಿಡ್ಜ್ ಜಂಕ್ಷನ್ ನಿಂದ ಬೋಗನಹಳ್ಳಿ ಜಂಕ್ಷನ್ ವರಗೆ ಎರಡು ಬದಿಯ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.

ಹೆಚ್.ಎ.ಎಲ್. ವಿಮಾನ ನಿಲ್ದಾಣ ಸಂಚಾರ ಪೊಲೀಸರ ಟ್ವಿಟರ್ ಪೋಸ್ಟ್ ಇಲ್ಲಿದೆ

ನಿರ್ಬಂಧಿಸಲಾದ ಸಂಚಾರಕ್ಕೆ ಪರ್ಯಾಯ ಮಾರ್ಗ :

ವೈಟ್ ಫೀಲ್ಡ್ ಮತ್ತು ವರ್ತೂರು ಕಡೆಯಿಂದ ಪಣತ್ತೂರು ಮುಖ್ಯ ರಸ್ತೆಯ ಮುಖಾಂತರ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಚಲಿಸುವ ವಾಹನಗಳು ಬಳಗೆರೆ ಟಿ ಜಂಕ್ಷನ್ ಹತ್ತಿರ ಬಲ ತಿರುವು ಪಡೆದು ವಿಬ್ ಗಯಾರ್ ರಸ್ತೆಯ ಮುಖಾಂತರ ವರ್ತೂರು ಮುಖ್ಯ ರಸ್ತೆ ಕಡೆಗೆ ಸಂಚರಿಸಿ ಮಾರತ್ತಹಳ್ಳಿ ಬ್ರಿಡ್ಜ್ ಹತ್ತಿರ ಎಡ ತಿರುವು ಪಡೆದು ಹೊರ ವರ್ತುಲ ರಸ್ತೆ ತಲುಪಿ ಕಾಡುಬೀಸನಹಳ್ಳಿ ಮತ್ತು ದೇವರಬೀಸನಹಳ್ಳಿ ಕಡೆಗೆ ಸಂಚರಿಸಬಹುದಾಗಿದೆ.

ದೇವರಬೀಸನಹಳ್ಳಿ ಮತ್ತು ಬೆಳ್ಳಂದೂರು ಕಡೆಯಿಂದ ಪಣತ್ತೂರು ಮುಖ್ಯ ರಸ್ತೆಯ ಮುಖಾಂತರ ವರ್ತೂರು ಮತ್ತು ವೈಟ್ ಫೀಲ್ಡ್ ಕಡೆಗೆ ಸಂಚರಿಸುವ ವಾಹನಗಳು ಹೊರ ವರ್ತುಲ ರಸ್ತೆಯ ಮುಖಾಂತರ ಮಾರತ್ತಹಳ್ಳಿ ಬ್ರಿಡ್ಜ್ ಕಡೆ ಸಂಚರಿಸಿ ವರ್ತೂರು ಮುಖ್ಯರಸ್ತೆ ತಲುಪಿ ವರ್ತೂರು ಮತ್ತು ವೈಟ್ ಫೀಲ್ಡ್ ಕಡೆಗೆ ಸಂಚರಿಸಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Published On - 1:55 pm, Fri, 24 October 25