ಬೆಂಗಳೂರಿನಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡ ಸಂಗ್ರಹ; ಇದುವರೆಗೂ ಪಾವತಿಯಾದ ದಂಡವೆಷ್ಟು ಗೊತ್ತಾ?
ಕರ್ನಾಟಕ ಸರ್ಕಾರವು ಸಂಚಾರ ದಂಡದ ಮೇಲೆ 50% ರಿಯಾಯಿತಿ ಘೋಷಿಸಿದ್ದು, ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಈ ಆಫರ್ ಲಭ್ಯವಿದೆ. ಇದುವರೆಗೆ 2.25 ಲಕ್ಷಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗಿ, 5.98 ಕೋಟಿ ರೂ. ಸಂಗ್ರಹವಾಗಿದೆ ಎಂದು ಸಂಚಾರಿ ಪೊಲೀಸರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನಾಗರಿಕರ ಪ್ರತಿಕ್ರಿಯೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ನವೆಂಬರ್ 28: ಕರ್ನಾಟಕ ಸರ್ಕಾರವು ವಾಹನ ಸವಾರರಿಗೆ ಬಾಕಿ ಇರುವ ಸಂಚಾರ ದಂಡದ (traffic violation fines discount) ಮೇಲೆ 50% ರಿಯಾಯಿತಿ ಘೋಷಿಸಿ, ನವೆಂಬರ್ 20 ರಂದು ಅಧಿಕೃತ ಆದೇಶ ಹೊರಡಿಸಲಾಗಿತ್ತು. ಈ ಪ್ರಕ್ರಿಯೆಯೀಗ 7 ನೇ ದಿನ ತಲುಪಿದ್ದು, ನಾಗರಿಕರಿಂದ ಅದ್ಭುತವಾದ ಪ್ರತಿಕ್ರಿಯೆ ಲಭಿಸದೆ ಎಂದು ಸಂಚಾರಿ ಪೊಲೀಸರು (Bengaluru Traffic Police) ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಒಂದೇ ದಿನದಲ್ಲಿ ರೂ.68 ಲಕ್ಷಕ್ಕೂ ಹೆಚ್ಚು ದಂಡ ಸಂಗ್ರಹ
ನವೆಂಬರ್ 21 ರಿಂದ ಡಿಸೆಂಬರ್ 12 ರವರೆಗೆ ಈ ರಿಯಾಯಿತಿ ಜಾರಿಯಲ್ಲಿರಲಿದ್ದು, ಈ ಅವಧಿಯಲ್ಲಿ ಚಾಲಕರು ತಮ್ಮ ಬಾಕಿ ದಂಡವನ್ನು ಅರ್ಧ ಮೊತ್ತಕ್ಕೆ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಹೇಳಲಾಗಿದೆ. ಈ 7 ದಿನಗಳಲ್ಲಿ ಒಟ್ಟೂ 2,25,511 ಪ್ರಕರಣಗಳು ಇತ್ಯರ್ಥಗೊಂಡಿದ್ದು,ರೂ. 5,98,28,800 ಮೊತ್ತ ಸಂಗ್ರಹವಾಗಿದೆ. 7 ನೇ ದಿನವಾದ ಇಂದು 24,272 ಪ್ರಕರಣಗಳು ಇತ್ಯರ್ಥಗೊಂಡಿದ್ದು, 68,57,350 ರೂ. ದಂಡ ಪಾವತಿಯಾಗಿದೆ ಎಂದು ಇಲಾಖೆ ತನ್ನ ಪೋಸ್ಟ್ನಲ್ಲಿ ತಿಳಿಸಿದೆ.
ಸಂಚಾರಿ ಪೊಲೀಸರ ಎಕ್ಸ್ ಪೋಸ್ಟ್ ಇಲ್ಲಿದೆ
7ನೇ ದಿನ, ಮತ್ತು ನಗರದ ಪ್ರತಿಕ್ರಿಯೆ ಅದ್ಭುತವಾಗಿದೆ! ಬೆಂಗಳೂರಿನಾದ್ಯಂತ ನಾಗರಿಕರು ಶೇ. 50 ರಷ್ಟು ರಿಯಾಯಿತಿಯೊಂದಿಗೆ ತಮ್ಮ ಬಾಕಿ ಇರುವ ಸಂಚಾರ ದಂಡಗಳನ್ನು ಜವಾಬ್ದಾರಿಯುತವಾಗಿ ಪಾವತಿಸುತ್ತಿದ್ದಾರೆ – ಮತ್ತು ಅಂಕಿ-ಅಂಶಗಳೇ ಎಲ್ಲವನ್ನೂ ಹೇಳುತ್ತಿವೆ!#TrafficFineDiscount #ClearYourDues #50PercentChallan #RoadSafety… pic.twitter.com/BctTwYkQDE
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) November 27, 2025
ಇದನ್ನೂ ಓದಿ ವಾಹನ ಸವಾರರಿಗೆ ಭರ್ಜರಿ ಆಫರ್, ಮತ್ತೊಮ್ಮೆ ಟ್ರಾಫಿಕ್ ಫೈನ್ 50% ರಿಯಾಯಿತಿ ಘೋಷಣೆ
ದಂಡ ಪಾವತಿಸುವ ವಿಧಾನ
ಬಾಕಿ ದಂಡವನ್ನು ರಿಯಾಯಿತಿಯೊಂದಿಗೆ ಪಾವತಿ ಮಾಡುವ ವಿಧಾನವನ್ನೂ ಇಲಾಖೆ ಹಂಚಿಕೊಂಡಿದೆ.
- ಈ ಕೆಳಗಿನ ಮೊಬೈಲ್ ಆಪ್‌ಗಳನ್ನು ಬಳಸಿ (ಪ್ಲೇ ಸ್ಟೋರ್ ಮತ್ತು ಆಪಲ್ ಸ್ಟೋರ್‌ನಲ್ಲಿ ಲಭ್ಯ): ಕರ್ನಾಟಕ ರಾಜ್ಯ ಪೊಲೀಸ್ ಆಪ್, ಆಸ್ಟ್ರಿಮ್ (BTP/ಟ್ರಾಫಿಕ್ ಉಲ್ಲಂಘನೆ ವ್ಯವಸ್ಥೆ)
- ಪ್ರಕ್ರಿಯೆ:
- ನಿಮ್ಮ ವಾಹನದ ಸಂಖ್ಯೆಯನ್ನು ನಮೂದಿಸಿ.
- ನಿಮ್ಮ ವಾಹನದ ಫೋಟೋ/ವಿವರಗಳನ್ನು ಪರಿಶೀಲಿಸಿ.
- ರಿಯಾಯಿತಿಯೊಂದಿಗೆ ದಂಡವನ್ನು ಪಾವತಿಸಿ.
- ಯಾವುದೇ ಸಂಚಾರ ಪೊಲೀಸ್ ಠಾಣೆಗೆ ಭೇಟಿ ನೀಡಿ ಮುಖೇನ ಪಾವತಿಸುವಿಕೆ.
- ಸಂಚಾರ ನಿರ್ವಹಣಾ ಕೇಂದ್ರ (TMC)ಗೆ ಭೇಟಿ ನೀಡಿ: ಮೊದಲನೇ ಮಹಡಿ, ಇನ್ಸಾಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ಹತ್ತಿರ, ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:35 am, Fri, 28 November 25




