ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುತ್ತೇನೆಂದು 1 ಲಕ್ಷ ರೂ. ವಂಚನೆ: ಇಬ್ಬರು ಆರೋಪಿಗಳ ಬಂಧನ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 27, 2022 | 12:10 PM

ಸಿನಿಮಾ ಸ್ಟೈಲ್​​ನಲ್ಲಿ 1 ಲಕ್ಷ ರೂ. ಖದೀಮರು ವಂಚಿಸಿದ್ದಾರೆ. ಬಿಜೆಪಿ ಯೂತ್ ಲೀಡರ್, ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಗೌಡಗೆ ಆರೋಪಿಗಳು ವಂಚಿಸಿದ್ದಾರೆ. ರಾಜಭವನಕ್ಕೆ ಕರೆದುಕೊಂಡು ಹೋಗಿ ಅಧಿಕಾರಿ ಎನ್ನುವಂತೆ ನಟಿಸಿದ್ದಾರೆ.

ರಾಜ್ಯಪಾಲರಿಂದ ಪ್ರಶಸ್ತಿ ಕೊಡಿಸುತ್ತೇನೆಂದು 1 ಲಕ್ಷ ರೂ. ವಂಚನೆ: ಇಬ್ಬರು ಆರೋಪಿಗಳ ಬಂಧನ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ರಾಜಭವನದ ಅಧಿಕಾರಿಯೆಂದು ಹೇಳಿ ಪ್ರಶಸ್ತಿ ಹೆಸರಲ್ಲಿ ವ್ಯಕ್ತಿಗೆ ವಂಚನೆ ಮಾಡಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗ್ಯಾನ್ ಪ್ರಕಾಶ್, ಗಿರಿಧರ್​ ಬಂಧಿತರು. ಸ್ವಾತಂತ್ರ್ಯ ಮಹೋತ್ಸವಕ್ಕೆ ಪ್ರಶಸ್ತಿ ಕೊಡಿಸುವುದಾಗಿ ಹೇಳಿ, ಸಿನಿಮಾ ಸ್ಟೈಲ್​​ನಲ್ಲಿ 1 ಲಕ್ಷ ರೂ. ಖದೀಮರು ವಂಚಿಸಿದ್ದಾರೆ. ಬಿಜೆಪಿ ಯೂತ್ ಲೀಡರ್, ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಗೌಡಗೆ ಆರೋಪಿಗಳು ವಂಚಿಸಿದ್ದಾರೆ. ರಾಜಭವನಕ್ಕೆ ಕರೆದುಕೊಂಡು ಹೋಗಿ ಅಧಿಕಾರಿ ಎನ್ನುವಂತೆ ನಟಿಸಿದ್ದಾರೆ. ರಾಜ್ಯಪಾಲರ ಚೇಂಬರ್ ಒಳಗೆ ಹೋಗಿ ಅರ್ಧಗಂಟೆಗಳ ಕಾಲ ಮಾತನಾಡಿ ಆರೋಪಿ ಹೊರಬಂದಿದ್ದಾನೆ. ಈ ಕುರಿತಾಗಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ವೆಂಕಟೇಶ್ ಗೌಡ ಎಂಬುವವರಿಗೆ ಸುರೇಶ್ ಎಂಬುವವರು ಕರೆ ಮಾಡಿದ್ದು, ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್​ರಿಂದ ಪ್ರಶಸ್ತಿ ಕೊಡಿಸುತ್ತೇನೆ. ಹೀಗಾಗಿ ದೇಣಿಗೆ ರೂಪದಲ್ಲಿ ಒಂದು ಲಕ್ಷ ರೂ.  ಹಣ ನೀಡಬೇಕೆಂದು ಸುರೇಶ್ ಬಾಬು ಕರೆ ಮಾಡಿದ್ದ.
ಹೀಗಾಗಿ ಸುರೇಶ್ ಬಾಬು ಅವರ ಅಕೌಂಟ್​​ಗೆ ವೆಂಕಟೇಶ್ ಗೌಡ ಹಣ ಹಾಕಿದ್ದಾರೆ. ಆ ಹಣವನ್ನ ಗ್ಯಾನ ಪ್ರಕಾಶ್ ಹಾಗೂ ಗಿರಿಧರ್ ಎಂಬುವವರಿಗೆ ಟ್ರಾನ್ಸ್ ಫರ್ ಮಾಡಿರುದಾಗಿ ಸುರೇಶ್ ಬಾಬು ಹೇಳಿದ್ದಾರೆ.

ಇದನ್ನೂ ಓದಿ: ಮಠದ ಹಾಸ್ಟೇಲ್​​​​​​ ವಿದ್ಯಾರ್ಥಿನಿಯರ ಮೇಲೆ ನಿರಂತರ ಲೈಂಗಿಕ ಕಿರುಕುಳ: ಸ್ವಾಮೀಜಿ ವಿರುದ್ಧ ದೂರು ದಾಖಲು

ನಂತರ ರಾಜಭವನದಲ್ಲಿ ರಾಜ್ಯಪಾಲರನ್ನ ಭೇಟಿ ಮಾಡಿದಲ್ಲಿ ಇದೊಂದು ಸಹಜ ಭೇಟಿ ಎಂದು ತಿಳಿದು ಬಂದಿತ್ತು. ಅಷ್ಟೆ ಅಲ್ಲದೆ ನಕಲಿ ಪುರಸ್ಕಾರದ ಪತ್ರವನ್ನೂ ನೀಡಿ ಆರೋಪಿಗಳು ವಂಚಿಸಿದ್ದಾರೆ. ಹೀಗಾಗಿ ಸುಳ್ಳು ಹೇಳಿ ಹಣ ಪಡೆದು ಸಹಜ ಭೇಟಿಗೆ ಪ್ರಶಸ್ತಿ ಪುರಸ್ಕಾರ ಎಂದು ಹೇಳಿ ವಂಚಿಸಿದ ಹಿನ್ನಲೆ ವಿಧಾನಸೌಧ ಪೊಲೀಸರಿಗೆ ವೆಂಕಟೇಶ್ ಗೌಡ ದೂರು ನೀಡಿದ್ದರು. ವಂಚನೆ ಪ್ರಕರಣ ಹಿನ್ನಲೆ ಆರೋಪಿಗಳಿಬ್ಬರನ್ನು  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:09 pm, Sat, 27 August 22