ಬೆಂಗಳೂರು, ಡಿಸೆಂಬರ್ 08: ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ವಿವಿಧ ಸ್ಪರ್ಧಾತ್ಮಕ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿತ್ತು. ಇದೀಗ 108 ಆ್ಯಂಬುಲೆನ್ಸ್ (108 Ambulance) ಚಾಲಕರ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿಬಂದಿದೆ. ಜಿವಿಕೆ ಸಂಸ್ಥೆ ವಿರುದ್ಧ ರಾಜ್ಯ ಆ್ಯಂಬುಲೆನ್ಸ್ ಚಾಲಕರ ಸಂಘ ಗಂಭೀರ ಆರೋಪ ಮಾಡಿದೆ. 250ಕ್ಕೂ ಹೆಚ್ಚು ಅಹರ್ತೆ ಇಲ್ಲದ ಚಾಲಕರನ್ನ ನೇಮಕ ಮಾಡಿಕೊಂಡ GVK ಕಂಪನಿ ಕೋಟ್ಯಾಂತರ ರೂ. ಭ್ರಷ್ಟಾಚಾರ ಮಾಡಿದೆ. ಸರ್ಕಾರದ ಆದೇಶ ಧಿಕ್ಕರಿಸಿ, ಒಬ್ಬರಿಂದ 3 ಲಕ್ಷ ರೂ. ಹಣ ಪಡೆದು ನೇಮಕ ಮಾಡಿರುವ ಆರೋಪ ಮಾಡಲಾಗಿದೆ.
ಅನರ್ಹತೆ ಚಾಲಕರ ನೇಮಕ ಹಿನ್ನೆಲೆ ಆ್ಯಂಬುಲೆನ್ಸ್ ಅಪಘಾತದಲ್ಲಿ ಏರಿಕೆ ಆಗುತ್ತಿದೆ. ಮಾನದಂಡ ಹಾಗೂ ಅರ್ಹತೆ, ಅನುಭವದ ಕೊರತೆ ಕಾರಣ ಒಂದೇ ತಿಂಗಳಲ್ಲಿ 10ಕ್ಕೂ ಹೆಚ್ಚು ಆ್ಯಂಬುಲೆನ್ಸ್ ಅಪಘಾತ ಉಂಟಾಗಿವೆ.
ರಾಜ್ಯದ ಆರೋಗ್ಯ ಇಲಾಖೆಯ ನೂತನ 262 ಆ್ಯಂಬುಲೆನ್ಸ್ಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ಚಾಲನೆ ನೀಡಿದ್ದರು. ಕರ್ನಾಟಕದಲ್ಲಿ 108 ಆ್ಯಂಬುಲೆನ್ಸ್ ಸೇವೆಗೆ ಮತ್ತಷ್ಟು ಬಲ ನೀಡಲು 262 ಹೊಸ ಆ್ಯಂಬುಲೆನ್ಸ್ ಮತ್ತು ವೈದ್ಯಕೀಯ ಉಪಕರಣ ಖರೀದಿಸಲು ನಿರ್ಧರಿಸಲಾಗಿತ್ತು. ಅದರಂತೆ ಹೊಸ ಆ್ಯಂಬುಲೆನ್ಸ್ ಸೇವೆ ಚಾಲನೆ ನೀಡಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.