ಬೆಂಗಳೂರಿನ ಒಂದೇ ಕುಟುಂಬದ 13 ಸದಸ್ಯರಿಗೆ ಕೊರೊನಾ, 10 ಲಕ್ಷ ಖರ್ಚು ಮಾಡಿದರೂ ಇಬ್ಬರು ಉಳಿಯಲಿಲ್ಲ

Covid Death in Bengaluru: ಹೆಲ್ಪ್​ಲೈನ್ 108, 1912 ಕಥೆ ಹೇಳೋದೆ ಬೇಡ. ಯಾವಾಗ ಕರೆ ಮಾಡಿದರೂ ಸ್ವಲ್ಪ ಹೊತ್ತು ಇರಿ ಅಂತಾರೆ. ಚಿತಾಗಾರಕ್ಕೆ ಕೊಂಡೊಯ್ದ ಮೇಲೆ ಬೆಡ್​ ಸಿಕ್ಕಿದೆ ಅಂತಾರೆ’ ಎಂದು ತೀವ್ರ ಹತಾಶೆ ಮತ್ತು ಆಕ್ರೋಶ ವ್ಯಕ್ತಪಡಿಸಿದರು.

ಬೆಂಗಳೂರಿನ ಒಂದೇ ಕುಟುಂಬದ 13 ಸದಸ್ಯರಿಗೆ ಕೊರೊನಾ, 10 ಲಕ್ಷ ಖರ್ಚು ಮಾಡಿದರೂ ಇಬ್ಬರು ಉಳಿಯಲಿಲ್ಲ
ಸಾಂಕೇತಿಕ ಚಿತ್ರ
Follow us
guruganesh bhat
|

Updated on: May 21, 2021 | 5:10 PM

ಬೆಂಗಳೂರು: ನಗರದ ಒಂದೇ ಕುಟುಂಬದ 13 ಜನರಿಗೆ ಕೊವಿಡ್ ಸೋಂಕು ತಗುಲಿದ್ದು, ಸೋಂಕಿನಿಂದ 2 ದಿನದಲ್ಲಿ ಇಬ್ಬರು ಅಸು ನೀಗಿದ ಘಟನೆ ನಡೆದಿದೆ. ಬೆಂಗಳೂರಿನ ಯಲಹಂಕ ಬಳಿಯಿರುವ ಲಕ್ಷ್ಮೀಪುರದ ಮೇಡಿ ಅಗ್ರಹಾರದ ಈ ಕುಟುಂಬ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಣ್ಣೀರು ಹಾಕುತ್ತಿದೆ. 13 ಜನರಿಗೆ ಕೊವಿಡ್ ಬಂದು ಕುಟುಂಬದ ಕವಿತಾ(40), ಸುರೇಶ್(45) ಬಲಿಯಾಗಿದ್ದಾರೆ.

‘ಅವರಿವರ ಬಳಿ ಸಾಲಸೋಲ ಮಾಡಿ ಆಸ್ಪತ್ರೆಗೆ ಸುರಿದಿದ್ದೆವು. 10 ಲಕ್ಷ ಹಣ ಖರ್ಚು ಮಾಡಿದ್ರೂ ಉಳಿಸಿಕೊಳ್ಳಲು ಆಗಿಲ್ಲ. ಸೋಂಕಿತರ ಚಿಕಿತ್ಸೆಗೆ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದು ಸರ್ಕಾರದವರು ಹೇಳುತ್ತಾರೆ. ಸಂಸದ ತೇಜಸ್ವಿ ಸೂರ್ಯ ಹೇಳುವುದೆಲ್ಲವೂ ಶುದ್ಧ ಸುಳ್ಳು. ತೇಜಸ್ವಿ ಹೇಳಿದ ನಂಬರ್​ಗೆ ಕಾಲ್ ಮಾಡಿದ್ರೆ ಬೆಡ್​ ಸಿಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕುಟುಂಬಸ್ಥರು, ಹೆಲ್ಪ್​ಲೈನ್ 108, 1912 ಕಥೆ ಹೇಳೋದೆ ಬೇಡ. ಯಾವಾಗ ಕರೆ ಮಾಡಿದರೂ ಸ್ವಲ್ಪ ಹೊತ್ತು ಇರಿ ಅಂತಾರೆ. ಚಿತಾಗಾರಕ್ಕೆ ಕೊಂಡೊಯ್ದ ಮೇಲೆ ಬೆಡ್​ ಸಿಕ್ಕಿದೆ ಅಂತಾರೆ’ ಎಂದು ತೀವ್ರ ಹತಾಶೆ ಮತ್ತು ಆಕ್ರೋಶ ವ್ಯಕ್ತಪಡಿಸಿದರು.

ಚಿಪ್ಕೊ ಚಳವಳಿಯ ರೂವಾರಿ ಸುಂದರ್​ಲಾಲ್ ಬಹುಗುಣ ಕೊವಿಡ್​ಗೆ ಬಲಿ ಚಿಪ್ಕೊ ಚಳುವಳಿಯ ರೂವಾರಿ, ಖ್ಯಾತ ಪರಿಸರ ಹೋರಾಟಗಾರ ಸುಂದರ್​ಲಾಲ್ ಬಹುಗುಣ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷವಾಗಿತ್ತು. ಕೊವಿಡ್ ಬಾಧಿಸಿದ್ದ ಅವರು ಮೇ8ರಿಂದ ರಿಷಿಕೇಶದ ಏಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸ್ಥಳೀಯ ಪತ್ರಿಕೆಗಳ ವರದಿ ಪ್ರಕಾರ ಬಹುಗುಣ ಅವರು ನ್ಯುಮೊನಿಯಾ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದರು.

ದೈನಿಕ್ ಜಾಗರಣ್ ವರದಿಯ ಪ್ರಕಾರ, ಬಹುಗುಣ ಅವರು ಮಧ್ಯಾಹ್ನ ಸುಮಾರಿಗೆ ಕೊನೆಯುಸಿರೆಳೆದರು. ಇವರ ಅಂತ್ಯಕ್ರಿಯೆ ಗಂಗೆಯಲ್ಲಿ ನಡೆಯಲಿದೆ.

ಸುಂದರ್‌ಲಾಲ್ ಬಹುಗುಣ ಚಿಪ್ಕೊ ಚಳವಳಿ ಮೂಲಕ ಅರಣ್ಯ ನಾಶದ ವಿರುದ್ಧ ದನಿಯೆತ್ತಿದ್ದರು.2009 ರಲ್ಲಿ ಪದ್ಮವಿಭೂಷಣದಿಂದ ಗೌರವಿಸಲ್ಪಟ್ಟ ಭಾರತದ ಮೊದಲ ಪರಿಸರ ಕಾರ್ಯಕರ್ತರಾಗಿದ್ದಾರೆ ಇವರು. ಅರಣ್ಯನಾಶ, ದೊಡ್ಡ ಅಣೆಕಟ್ಟುಗಳು ಮತ್ತು ಗಣಿಗಾರಿಕೆಯಂತಹ ಹಲವಾರು ಪರಿಸರ ಸಮಸ್ಯೆಗಳ ವಿರುದ್ಧ ಇವರು ದೇಶಾದ್ಯಂತ ಆಂದೋಲನಗಳನ್ನು ನಡೆಸಿದ್ದಾರೆ.

ಇದನ್ನೂ ಓದಿ: 18-44 Vaccination in Karnataka: ಮೇ 22ರಿಂದಲೇ 18 ರಿಂದ 44 ವರ್ಷದವರಿಗೆ ಕೊವಿಡ್ ಲಸಿಕೆ; ಕೊವಿಡ್ ಸೇನಾನಿಗಳಿಗೆ ಮೊದಲ ಆದ್ಯತೆ

ಚಾಮರಾಜನಗರ ಆಕ್ಸಿಜನ್​ ದುರಂತದಲ್ಲಿ ಸತ್ತವರ ಕುಟುಂಬಕ್ಕೆ ತಕ್ಷಣ 2 ಲಕ್ಷ ರೂಪಾಯಿ ಪರಿಹಾರ ಕೊಡಿ: ಹೈಕೋರ್ಟ್ ವಿಭಾಗೀಯ ಪೀಠ

(13 people of one family got Covid positive 2 people died in Bengaluru)