ಬೆಂಗಳೂರು: ಪ್ರಸಕ್ತ ರೈಲ್ವೆ ಇಲಾಖೆಯ ಪೊಲೀಸ್ ಎಡಿಜಿಪಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೆ ಭಾಸ್ಕರ್ ರಾವ್ ಅವರು ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಇವರು 1990ನೇ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿ.
ಪ್ರಸಕ್ತ ರೈಲ್ವೆ ಇಲಾಖೆಯ ಪೊಲೀಸ್ ಎಡಿಜಿಪಿಯಾಗಿರುವ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಅವರು (IPS Bhaskar Rao) ಸ್ವಯಂ ನಿವೃತ್ತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತಿಗೆ ಇನ್ನೂ ಮೂರು ವರ್ಷ ಬಾಕಿ ಇರುವಾಗಲೆ ಭಾಸ್ಕರ್ ರಾವ್ ಅವರು ನಿವೃತ್ತಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರೆ ಹಿರಿಯ ಅಧಿಕಾರಿ ಭಾಸ್ಕರ್ ರಾವ್ ಅವರ (1990 batch IPS officer) ಈ ದಿಢೀರ್ ನಿರ್ಧಾರಕ್ಕೆ (VRS) ತಕ್ಷಣಕ್ಕೆ ಕಾರಣ ತಿಳಿದುಬಂದಿಲ್ಲ.
ನಿವೃತ್ತಿಗೆ 3 ವರ್ಷ ಬಾಕಿ ಇರುವಾಗಲೇ ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿರುವ ಭಾಸ್ಕರ್ ರಾವ್ ಸ್ವಯಂ ನಿವೃತ್ತಿಗೆ ವೈಯಕ್ತಿಕ ಕಾರಣ ನೀಡಿದ್ದಾರೆ. ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿ & ಐಜಿಪಿಗೆ ರಾಜೀನಾಮೆ ಪತ್ರ ಬರೆದಿದ್ದಾರೆ. ಭಾಸ್ಕರ್ ರಾವ್ ಮನವಿಗೆ ಸರ್ಕಾರ ಒಪ್ಪಿಗೆ ನೀಡಬೇಕು. ಅಲ್ಲಿಯವರೆಗೆ ಭಾಸ್ಕರ್ ರಾವ್ ಅವರು ಎಡಿಜಿಪಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಇತ್ತೀಚೆಗೆ ಗಣೇಶನ ಹಬ್ಬದ ಅಂಗವಾಗಿ ಗಣೇಶನ ವಿಸರ್ಜನೆ ನೆರವೇರಿಸಿದ ಭಾಸ್ಕರ್ ರಾವ್ ಅವರ ಟ್ವೀಟ್ ಸಂದೇಶ ಇಲ್ಲಿದೆ:
Was fortunate to do Ganesha visarjan myself, a rare opportunity, thanks #bbmp pic.twitter.com/XK9toQ7IN5
— Bhaskar Rao (@deepolice12) September 11, 2021
(1990 batch IPS officer Senior IPS Bhaskar Rao applies for vrs)
Published On - 1:38 pm, Thu, 16 September 21