ಬೆಂಗಳೂರಿನಲ್ಲಿ ಮನೆ ಕಟ್ಟಿಸುವವರು ಗಮನಿಸಿ: ಇನ್ಮುಂದೆ 30*40 ಸೈಟಿನಲ್ಲಿ ಮನೆ ಕಟ್ಟಲು ಮಳೆನೀರು ಕೊಯ್ಲು ಕಡ್ಡಾಯ

30*40 ಸೈಟ್ ಗಳಲ್ಲಿ ಈಗಾಗಲೇ ಮನೆಗಳನ್ನು ಕಟ್ಟಿರುವವರಿಗೆ ಈ ನಿಯಮದಿಂದ ವಿನಾಯಿತಿಯಿದೆ.

ಬೆಂಗಳೂರಿನಲ್ಲಿ ಮನೆ ಕಟ್ಟಿಸುವವರು ಗಮನಿಸಿ: ಇನ್ಮುಂದೆ 30*40 ಸೈಟಿನಲ್ಲಿ ಮನೆ ಕಟ್ಟಲು ಮಳೆನೀರು ಕೊಯ್ಲು ಕಡ್ಡಾಯ
ವಿಧಾನಸೌಧ

ವಿಧಾನಸಭೆ: ಬೆಂಗಳೂರಿನಲ್ಲಿ 30*40 ಸೈಟಿನಲ್ಲಿ ಮನೆ ಕಟ್ಟುವವರಿಗೆ ಇನ್ನು ಮುಂದೆ ಹೊಸ ಷರತ್ತು ಅನ್ವಯಗೊಳ್ಳಲಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಗ್ರಾಮಸಾರ ಚರಂಡಿ ವ್ಯವಸ್ಥೆ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರಗೊಡಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ 30*40 ಚದರಡಿ ಮೇಲ್ಪಟ್ಟ ನಿವೇಶನದಲ್ಲಿ ಮನೆ ಕಟ್ಟುವವರಿಗೆ ಮಳೆನೀರು ಕೊಯ್ಲು ಕಡ್ಡಾಯವಾಗಲಿದೆ. 30*40 ಸೈಟ್ ಗಳಲ್ಲಿ ಈಗಾಗಲೇ ಮನೆಗಳನ್ನು ಕಟ್ಟಿರುವವರಿಗೆ ಈ ನಿಯಮದಿಂದ ವಿನಾಯಿತಿಯಿದೆ.

ಈ ವಿಧೇಯಕದ ಜತೆಗೆ  ಗುರುವಾರ (ಸೆಪ್ಟೆಂಬರ್ 16) ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ತಿದ್ದುಪಡಿ ವಿಧೇಯಕಕ್ಕೆ  ಸಹ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

ಈ ಬಾರಿಯ ಕಲಾಪದಲ್ಲಿ ಮಂಡಿಸಲಾದ ಕೆಲವು ವಿಧೇಯಕಗಳು
ವಿಧಾನಸಭೆಯಲ್ಲಿ ಸೆಪ್ಟೆಂಬರ್ 14ರಂದು ಒಟ್ಟು 10 ವಿಧೇಯಕಗಳನ್ನು ಮಂಡಿಸಲಾಗಿದೆ. ಬೆಂಗಳೂರು ನೀರು‌ ಸರಬರಾಜು ಮತ್ತು ಗ್ರಾಮಸಾರ ವ್ಯವಸ್ಥೆ ತಿದ್ದುಪಡಿ ವಿಧೇಯಕ, ಬಂಧಿಗಳ ಗುರುತಿಸುವಿಕೆ ವಿಧೇಯಕ, ದಂಡ ಪ್ರಕ್ರಿಯಾ ಸಂಹಿತೆ ವಿಧೇಯಕ, ಬಂಧೀಖಾನೆ ಅಭಿವೃದ್ಧಿ ಮಂಡಳಿ ವಿಧೇಯಕ, ಕೃಷಿ ಸಂಬಂಧಿ ಕೀಟಗಳು ಮತ್ತು ರೋಗಗಳ ತಿದ್ದುಪಡಿ ವಿಧೇಯಕ, ಸ್ಟ್ಯಾಂಪ್ ತಿದ್ದುಪಡಿ ವಿಧೇಯಕ, ಖಾದಿ ಮತ್ತು ಗ್ರಾಮೋದ್ಯೋಗಗಳ ತಿದ್ದುಪಡಿ ವಿಧೇಯಕ, ಪೌರಸಭೆಗಳ ಮತ್ತು ಇತರೆ ಕೆಲವು ಕಾನೂನು ತಿದ್ದುಪಡಿ ವಿಧೇಯಕ, ಸ್ಥಳೀಯ ನಿಧಿ ಪ್ರಾಧಿಕಾರಗಳ ಆರ್ಥಿಕ ಹೊಣೆಗಾರಿಕೆ ವಿಧೇಯಕ, ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಗಳನ್ನು ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಲಾಗಿದೆ.

ಇದನ್ನೂ ಓದಿ: 

ವಿಧಾನಸಭೆಯಲ್ಲಿ ಜಿಪಂ, ತಾಪಂ ಚುನಾವಣೆ ಮುಂದೂಡಿಕೆ, ಮಳೆನೀರು ಕೊಯ್ಲು ಕಡ್ಡಾಯ ಪ್ರಸ್ತಾಪವಿರುವ ವಿಧೇಯಕಗಳ ಮಂಡನೆ

ಸಿದ್ದರಾಮಯ್ಯ ಮೊಬೈಲ್ ಬಳಸುತ್ತಾರಾ? ಲೋಕಸಭೆಗೆ ಸ್ಪರ್ಧಿಸುತ್ತಾರಾ? ಸಿದ್ದರಾಮಯ್ಯ ವಾಚಿಸಿದ ಭಾಮಿನಿ ಷಟ್ಪದಿ ಯಾವುದು?

(Rain Water Harvesting is Mandatory for the building of 30-40 homes in Bengaluru)

Read Full Article

Click on your DTH Provider to Add TV9 Kannada