ಸಿದ್ದರಾಮಯ್ಯ ಮೊಬೈಲ್ ಬಳಸುತ್ತಾರಾ? ಲೋಕಸಭೆಗೆ ಸ್ಪರ್ಧಿಸುತ್ತಾರಾ? ಸಿದ್ದರಾಮಯ್ಯ ವಾಚಿಸಿದ ಭಾಮಿನಿ ಷಟ್ಪದಿ ಯಾವುದು?

‘ನೀವೂ ಮೊಬೈಲ್ ಬಳಕೆಯನ್ನು ಬಿಟ್ಟುನೋಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಸಿದ್ದರಾಮಯ್ಯ ಸಲಹೆ ನೀಡಿದರು.

ಸಿದ್ದರಾಮಯ್ಯ ಮೊಬೈಲ್ ಬಳಸುತ್ತಾರಾ? ಲೋಕಸಭೆಗೆ ಸ್ಪರ್ಧಿಸುತ್ತಾರಾ? ಸಿದ್ದರಾಮಯ್ಯ ವಾಚಿಸಿದ ಭಾಮಿನಿ ಷಟ್ಪದಿ ಯಾವುದು?
ಸಿದ್ದರಾಮಯ್ಯ
Follow us
TV9 Web
| Updated By: guruganesh bhat

Updated on:Sep 15, 2021 | 5:48 PM

ವಿಧಾನಸಭೆಯ ಕಲಾಪದಲ್ಲಿ ಆಡಳಿತ ಪಕ್ಷ ಮತ್ತು ವಿಪಕ್ಷಗಳ ನಡುವೆ ಗಂಭೀರ ವಿಚಾರಗಳ ಚರ್ಚೆಯ ನಡುವೆಯೇ ತಿಳಿಹಾಸ್ಯದ ಪ್ರಸಂಗವೂ ಸೃಷ್ಟಿಯಾಗುತ್ತದೆ. ಟೀಕೆ ಟಿಪ್ಪಣಿಗಳ ನಡುವೆಯೇ ಹಾಸ್ಯ, ಕಾಲೆಳೆತ ಮತ್ತು ಕುತೂಹಲಕರ ಸಂಗತಿಗಳಿಗೂ ಕಲಾಪ ಸಾಕ್ಷಿಯಾಗುತ್ತದೆ. ಹಾಗೆಯೇ ಇಂದೂ ಆಯಿತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದಿನ ಕಲಾಪದ ಕೇಂದ್ರಬಿಂದುವಾಗಿದ್ದರು. ಆಡಳಿತ ಪಕ್ಷ ಬಿಜೆಪಿಗೆ ಬೆಲೆ ಏರಿಕೆಯ ಚಾಟಿ ಬೀಸುತ್ತಲೇ ಸಾಮಾಜಿಕ ಜಾಲತಾಣಗಳಲ್ಲಿನ ಆಗಿಹೋಗುಗಳ ಪ್ರಸ್ತಾಪ ಬಂತು. ಸಾಮಾಜಿಕ ಜಾಲತಾಣಗಳಲ್ಲಿ ಯಾರ್ಯಾರೋ ಏನೇನೋ ಪೋಸ್ಟ್ ಮಾಡುತ್ತಿರುತ್ತಾರೆ. ಸಿದ್ದರಾಮಯ್ಯ ಅವರೂ ತಮ್ಮ ಫೇಸ್ಬುಕ್, ಟ್ವಿಟರ್ ಖಾತೆಗಳಲ್ಲಿ ಸದಾ ಸಕ್ರಿಯವಾಗಿರುತ್ತಾರೆ. ಆದರೆ ಸಿದ್ದರಾಮಯ್ಯ ಅವರೇ ನಿಜಕ್ಕೂ ಮೊಬೈಲ್- ಸ್ಮಾರ್ಟ್ಫೋನ್ ಬಳಸುತ್ತಾರಾ? ಈಕುರಿತು ಸಿದ್ದರಾಮಯ್ಯ ಅವರೇ ವಿಧಾನಸಭೆಯಲ್ಲಿ ಉತ್ತರಿಸಿದ್ದಾರೆ.

ಬೆಲೆ ಏರಿಕೆ ಬಗ್ಗೆ ಮಾತನಾಡುತ್ತಿದ್ದ ಸಿದ್ದರಾಮಯ್ಯ, ಸಾಮಾಜಿಕ ಜಾಲತಾಣಗಳಲ್ಲಿ ಯಾರ್ಯಾರೋ ಏನೇನನ್ನೋ ಹಾಕುತ್ತಿರುತ್ತಾರೆ. ನಾನು‌ ಮೊಬೈಲ್ ಇಟ್ಟುಕೊಂಡಿಲ್ಲ. ಸೋಷಿಯಲ್ ಮೀಡಿಯಾದಗಳಲ್ಲಿ‌ ಬಂದಿರುವುದನ್ನು‌ ನಮ್ಮ ಹುಡುಗ ತೋರಿಸುತ್ತಾನೆ. ಈ ಹಿಂದೆ ಮೊಬೈಲ್ ಬಳಸುತ್ತಿದ್ದೆ. ಆದರೆ ಆಗ ರಾತ್ರಿಯ ಸಮಯದಲ್ಲೂ ಫೋನ್ ಕರೆಗಳು ಬರುತ್ತಿದ್ದವು. ಅದು ನನಗೆ ಕಿರಿಕಿರಿ ಅನಿಸಿ ಮೊಬೈಲ್ ಬಳಕೆಯನ್ನೇ ಬಿಟ್ಟುಬಿಟ್ಟೆ. ಮುಖ್ಯಮಂತ್ರಿಯಾಗಿ 5 ವರ್ಷ ಕೆಲಸ ಮಾಡಿದಾಗಲೂ ಕೂಡಾ ಮೊಬೈಲ್‌ ಬಳಸಿರಲಿಲ್ಲ ಎಂದು ಸಿದ್ದರಾಮಯ್ಯ ಗುಟ್ಟು ಬಿಟ್ಟುಕೊಟ್ಟರು. ಜತೆಗೆ ‘ನೀವೂ ಮೊಬೈಲ್ ಬಳಕೆಯನ್ನು ಬಿಟ್ಟುನೋಡಿ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಸಲಹೆ ನೀಡಿದರು.

ಚರ್ಚೆಯ ವೇಳೆ ನಾವು ಉತ್ತರ ಕೊಡುವಂತಹ ಪ್ರಶ್ನೆಯನ್ನು ಕೇಳಬೇಕು ಎಂದು ಸಿದ್ದರಾಮಯ್ಯಗೆ ಸಚಿವ ಜೆ.ಸಿ.ಮಾಧುಸ್ವಾಮಿ ವಿನಂತಿಸಿದರು. ಇದೇ ವೇಳೆ ಚುರುಕಾದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಏನಪ್ಪ.. ಸಿದ್ದರಾಮಯ್ಯರನ್ನು ಸಂಸತ್ತಿಗೆ ಕಳುಹಿಸುತ್ತೀರಾ? ಎಂದು ಸಚಿವ ಜೆ.ಸಿ.ಮಾಧುಸ್ವಾಮಿಗೆ ಕೇಳಿದರು.

‘ಇಲ್ಲ..ಇಲ್ಲ, ಸಿದ್ದರಾಮಯ್ಯನವರು ಇಲ್ಲೇ ಇರಬೇಕು’ ಎಂದು ಚಕ್ಕನೆ ಸಚಿವ ಮಾಧುಸ್ವಾಮಿ ಉತ್ತರಿಸಿದರು. ಇದೇ ವೇಳೆ ಸಿದ್ದರಾಮಯ್ಯ ಅವರು ಮಾತನಾಡಿ, ‘ನಾನು, ಜೆ.ಸಿ.ಮಾಧುಸ್ವಾಮಿ ಮತ್ತು ಆರ್.ಅಶೋಕ್ ಬಹಳ ಒಳ್ಳೆಯ ಸ್ನೇಹಿತರು. ಆದರೆ ಈಶ್ವರಪ್ಪ ಇದಾರಲ್ಲಾ.. ಅವರು ಇಲ್ಲೂ ಬೇಡವೆಂದು ಹೇಳ್ತಾರೆ’ ಎಂದು ಉತ್ತರಿಸುತ್ತಲೇ, ಸಚಿವ ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯನವರೇ, ನೀವು ಹೇಳಿದ್ದು ಸರಿಯೇ ಎಂದು ಹೃದಯ ಮುಟ್ಟಿಕೊಂಡು ಹೇಳಿ, ದೆಹಲಿಯಲ್ಲಿ ಕನ್ನಡ ಮೊಳಗಿಸಿ ಎಂದರು.

ಸಿದ್ದರಾಮಯ್ಯ: ಈಶ್ವರಪ್ಪ ಅಂತರಾಳದಲ್ಲಿ ಇಂಥ ಮಾತನ್ನು ಹೇಳುವುದಿಲ್ಲ. ಬಹಿರಂಗವಾಗಿ ಹೇಳುತ್ತಾರೆ. ಯಾರೂ ನೂರಕ್ಕೆ ನೂರರಷ್ಟು ಇಲ್ಲಿ ಸತ್ಯವನ್ನು ಹೇಳುವುದಿಲ್ಲ. ಸತ್ಯ ಹೇಳುತ್ತೇವೆ ಅಂದರೆ ಅದು ಆತ್ಮವಂಚನೆ ಆಗುತ್ತದೆ. ನಾನು ಸಂಸತ್‌ಗೆ ಹೋಗುವುದಕ್ಕೆ ಪ್ರಯತ್ನ ಮಾಡಿದ್ದೆ. 1980 ಮತ್ತು 1991ರಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ಆದರೆ ಎರಡೂ ಬಾರಿಯೂ ಸೋತುಹೋದೆ. ಆಮೇಲೆ ದೆಹಲಿಗೆ ಹೋಗುವ ಪ್ರಯತ್ನ ಮಾಡಲಿಲ್ಲ’ ಎಂದು ತಾವು ರಾಷ್ಟ್ರ ರಾಜಕಾರಣ ಪ್ರವೇಶಿಸಲು ನಡೆಸಿದ ಪ್ರಯತ್ನಗಳನ್ನೂ ವಿವರಿಸಿದರು.

ಕೆ.ಎಸ್.ಈಶ್ವರಪ್ಪ: ದೆಹಲಿಗೆ ಈಗ ಹೋಗುವುದಕ್ಕೆ ಪ್ರಯತ್ನಿಸಬೇಡಿ. ಈಗಾಗಲೇ ದೆಹಲಿಗೆ ಹೋದವರ ಹೃದಯ ಒಡೆದುಹೋಗುತ್ತೆ! ಸಿದ್ದರಾಮಯ್ಯ: ಇನ್ನು ಮತ್ತೆ ಸಂಸತ್‌ಗೆ ಹೋಗುವ ಆಲೋಚನೆ ಇಲ್ಲ. ಇನ್ನೊಮ್ಮೆ ನಾನು ಚುನಾವಣೆಗೆ ಸ್ಪರ್ಧಿಸಬಹುದಷ್ಟೇ.. ನಾನು ಈಶ್ವರಪ್ಪ ಮಾತನಾಡಿಕೊಂಡಿದ್ದೇವೆ. ನಾವು ಒಬ್ಬರನ್ನು ಬಿಟ್ಟು ಒಬ್ಬರು ಎಲ್ಲೂ ಹೋಗಲ್ಲ ಎಂದು ಚಟಾಕಿ ಹಾರಿಸಿದರು.

ಹೀಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸದನದಲ್ಲಿ ಬೆಲೆ ಏರಿಕೆ ಕುರಿತ ಪ್ರಸ್ತಾಪಿಸುತ್ತಲೇ ಹಲವು ಕುತೂಹಲಕರ ಅಂಶಗಳನ್ನು ಬಿಚ್ಚಿಟ್ಟರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಇಷ್ಟೆಲ್ಲ ಚರ್ಚೆಗೆ ಕಿವಿಗೊಡುತ್ತಿದ್ದರು. ಸಿದ್ದರಾಮಯ್ಯ ಅವರ ಪ್ರಶ್ನೆ ಉತ್ತರಿಸಿ, ಬೆಲೆ ಏರಿಕೆಯ ಕುರಿತು ನಾನು ನಾಳೆ ಸದನದಲ್ಲಿ ಉತ್ತರ ನೀಡುತ್ತೇನೆ ಎಂದು ತಿಳಿಸಿದರು. ಜತೆಗೆ ಸಿದ್ದರಾಮಯ್ಯ ಅವರ ಕಾಲೆಳೆಯುವ ಪ್ರಯತ್ನವನ್ನೂ ನಡೆಸಿದ ಅವರು, ಸಿದ್ದರಾಮಯ್ಯ ತಾವು ದೆಹಲಿಗೆ ಆಯ್ಕೆಯಾಗುವ ಬಗ್ಗೆ ಹೇಳಿಕೊಂಡಿದ್ದಾರೆ. ಆ ಬಗ್ಗೆ ಸಿದ್ದರಾಮಯ್ಯನವರು ಎಚ್ಚರಿಕೆಯಿಂದ ಇರಬೇಕು. ನಿಮ್ಮನ್ನು ಸೆಂಟ್ರಲ್‌ಗೆ ಕಳುಹಿಸಲು ಹಿಂದೆ ಷಡ್ಯಂತ್ರ ಇದೆ. ಇದನ್ನು ನೀವು ಒಪ್ಪಿಕೊಳ್ಳಲ್ಲ, ಖಾಸಗಿಯಾಗಿ ಒಪ್ಪಿಕೊಳ್ತೀರಿ’ ಎಂದು ಚಟಾಕಿ ಹಾರಿಸಿದರು. ಆಗ ಉತ್ತರಿಸಿದ ಸಿದ್ದರಾಮಯ್ಯ, ನನ್ನನ್ನು ಯಾರೂ ಏನು ಮಾಡುವುದಕ್ಕೆ ಆಗುವುದಿಲ್ಲ. ಸಿಎಂ ಬೊಮ್ಮಾಯಿಯವರೇ ನೀವು ಹುಷಾರಾಗಿ ಇರಿ. ನೀವು ಪೂರ್ಣಾವಧಿಗೆ ಸಿಎಂ ಆಗಿ ಮುಂದುವರಿಯಬೇಕು’ ಎಂದು ಸಿದ್ದರಾಮಯ್ಯ ಮುಖ್ಯಮಂತ್ರಿಗಳಿಗೆ ಎಚ್ಚರಿಕೆಯ ಕಾಳಜಿ ಮಾಡಿದರು. ಸದನದಲ್ಲಿ ಕುಮಾರವ್ಯಾಸ ವಿರಚಿತ ಭಾಮಿನಿ ಷಟ್ಪದಿ ವಾಚಿಸಿದ ಸಿದ್ದರಾಮಯ್ಯ ಅರಸು ರಾಕ್ಷಸ, ಮಂತ್ರಿಯೆಂಬುವ ಹೊರೆವ ಹುಲಿ ಪರಿವಾರ ಹದ್ದಿನ ನೆರವಿ, ಬಡವರ ಭಿನ್ನಪವ ಇನ್ಯಾರು ಕೇಳುವರು ಉರಿ ಉರಿಯುತ್ತಿದೆ, ದೇಶ ಉಳಿಯುವುದೆಂತು ಎಂಬ ಷಟ್ಪದಿಯನ್ನು ಹೇಳಿದ ಸಿದ್ದರಾಮಯ್ಯ, ಇದು ಭಾಮಿನಿ ಷಟ್ಪದಿಯಲ್ಲಿ ಬರುತ್ತದೆ. ವ್ಯಾಕರಣದ ಲಘು, ಗುರು ಬಗ್ಗೆ ನಿಮಗೆ ತಿಳಿದಿದೆಯಾ? ಎಂದು ಪ್ರಶ್ನಿಸಿದರು.

ಕುಮಾರವ್ಯಾಸ ವಿರಚಿತ ಷಟ್ಪದಿಯೊಂದರಲ್ಲಿ ನಾರದ ಮಹರ್ಷಿ ಧರ್ಮರಾಯರಿಗೆ ಹೇಳಿದ್ದ ಮಾತು ಪ್ರಸ್ತಾಪ ಮಾಡಿದ ಸಿದ್ದರಾಮಯ್ಯ, ಇಂದಿನ ಕಷ್ಟದ ಬಗ್ಗೆ ಕುಮಾರವ್ಯಾಸರು ಆ ಕಾಲದಲ್ಲೇ ಹೇಳಿದ್ದಾರೆ. ಬೆಲೆ ಇಳಿಕೆಗೆ ರಾಜ್ಯದಲ್ಲಿ ಏನು ಕ್ರಮಕೈಗೊಳ್ಳಬೇಕು ಕೈಗೊಳ್ಳಿ. ತಮಿಳುನಾಡಿನಲ್ಲಿ ಪೆಟ್ರೋಲ್ ಬೆಲೆ ಇಳಿಕೆ ಮಾಡಿದ್ದಾರೆ. ನಮ್ಮಲ್ಲಿಯೂ ಪೆಟ್ರೋಲ್ ಬೆಲೆ ಕಡಿಮೆ ಮಾಡಬೇಕು. ತಮಿಳುನಾಡಿಗಿಂತ ನಾವು ಕಡಿಮೆ ಇರಬಾರದು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಇದನ್ನೂ ಓದಿ: 

ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪಿಸಿದ ಸಿದ್ದರಾಮಯ್ಯ; ಕಲಾಪದಲ್ಲಿ ಕಲಹ ಕೋಲಾಹಲ

ಸದನದಲ್ಲೂ ಚರ್ಚೆ ಆಯ್ತು ಸಂಚಾರಿ ವಿಜಯ್​ ಸಾಧನೆ; ಹಾಡಿ ಹೊಗಳಿದ ಸಿದ್ದರಾಮಯ್ಯ

(Karnataka Assembly Session 2021 Opposition Leader Siddaramaiah spoke about his mobile use Lok Sabha election Contest and Kumara Vyasas Bhamini Shatpadi)

Published On - 5:48 pm, Wed, 15 September 21

‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು