ನವೆಂಬರ್​ನಲ್ಲಿ 25ನೇ ಬೆಂಗಳೂರು ಟೆಕ್​ ಸಮ್ಮಿಟ್​-2022 ಆಯೋಜನೆ; 50 ದೇಶಗಳು, 500ಕ್ಕೂ ಸ್ಟಾರ್ಟಪ್​​​ಗಳು ಭಾಗಿ

| Updated By: ವಿವೇಕ ಬಿರಾದಾರ

Updated on: Jun 08, 2022 | 6:46 PM

ನವೆಂಬರ್​ನಲ್ಲಿ ನಡೆಯಲಿರುವ 25ನೇ ಬೆಂಗಳೂರು ಟೆಕ್​ ಸಮ್ಮಿಟ್​-2022 ಕಾರ್ಯಕ್ರಮವನ್ನು ಉದ್ಘಾಟಿಸಲು ಪ್ರಧಾನಿ ಮೋದಿಗೆ ಆಹ್ವಾನಿಸಲಾಗಿದೆ ಎಂದು  ಬೆಂಗಳೂರು ಟೆಕ್ ಸಮ್ಮಿಟ್ 2022 ರ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಐಟಿ-ಬಿಟಿ ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ನವೆಂಬರ್​ನಲ್ಲಿ 25ನೇ ಬೆಂಗಳೂರು ಟೆಕ್​ ಸಮ್ಮಿಟ್​-2022 ಆಯೋಜನೆ; 50 ದೇಶಗಳು, 500ಕ್ಕೂ ಸ್ಟಾರ್ಟಪ್​​​ಗಳು ಭಾಗಿ
ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ
Follow us on

ಬೆಂಗಳೂರು:  ನವೆಂಬರ್​ನಲ್ಲಿ ನಡೆಯಲಿರುವ 25ನೇ ಬೆಂಗಳೂರು ಟೆಕ್​ ಸಮ್ಮಿಟ್​-2022 (Bangalore Tech Summit -2022)  ಕಾರ್ಯಕ್ರಮವನ್ನು ಉದ್ಘಾಟಿಸಲು ಪ್ರಧಾನಿ ಮೋದಿಗೆ (PM Modi) ಆಹ್ವಾನಿಸಲಾಗಿದೆ ಎಂದು  ಬೆಂಗಳೂರು ಟೆಕ್ ಸಮ್ಮಿಟ್ 2022 ರ ಪೂರ್ವಭಾವಿ ಸುದ್ದಿಗೋಷ್ಠಿಯಲ್ಲಿ ಐಟಿ-ಬಿಟಿ ಸಚಿವ ಅಶ್ವತ್ಥ್ (Ashwath Narayan) ನಾರಾಯಣ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ನವೆಂಬರ್​ 16ರಿಂದ 18ರವರೆಗೆ ಟೆಕ್​ ಸಮ್ಮಿಟ್ ನಡೆಯಲಿದೆ. ಈ ಬಾರಿ 50 ದೇಶಗಳು, 500ಕ್ಕೂ ಸ್ಟಾರ್ಟಪ್​​​ಗಳು ಭಾಗಿಯಾಗಲಿವೆ. ಹಲವು ‌ಕ್ಷೇತ್ರದಲ್ಲಿ‌ ಕರ್ನಾಟಕದ ಜನ ಸಾಧನೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ನಮ್ಮ ಪ್ರತಿಭೆಗಳ ಸಾಧನೆ ಅನಾವರಣ ಆಗಲಿದೆ ಮತ್ತು 25ನೇ ವರ್ಷದ ಸಮ್ಮಿಟ್ ಆದ್ದರಿಂದ ದೊಡ್ಡದಾಗಿ ವಿಶೇಷವಾಗಿರಲಿದೆ ಎಂದು ಹೇಳಿದ್ದಾರೆ.

Published On - 6:46 pm, Wed, 8 June 22