ಬೆಂಗಳೂರು, ಅಕ್ಟೋಬರ್ 5: ಹಿಂಗಾರು ಮಳೆಯೂ (Karnataka rains) ಕಡಿಮೆಯಾಗಲಿದ್ದು, ಕರ್ನಾಟಕ ರಾಜ್ಯವು ಪ್ರಸಕ್ತ ಸಾಲಿನಲ್ಲಿ ಬಹುತೇಕ ಬರಗಾಲ ಎದುರಿಸುತ್ತಿದೆ. ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು (Revenue Minister Krishna Byregowda) ರಾಜ್ಯದಲ್ಲಿ ಬರಗಾಲದ (Drought) ಹಾಲಿ ಸ್ಥಿತಿ ಮತ್ತು ಅದಕ್ಕೆ ಹಾಲಿ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವ ನೀತಿ ನಿರ್ಧಾರಗಳ ಬಗ್ಗೆ ವಿಧಾನಸೌಧದಲ್ಲಿಂದು ಸುದ್ದಿಗಾರರ ಎದುರು ಮಾಹಿತಿ ಹಂಚಿಕೊಂಡರು.
ಕರ್ನಾಟಕದಲ್ಲಿ ಶೇಕಡಾ 28ರಷ್ಟು ಮಳೆ ಕೊರತೆಯಾಗಿದೆ. ಕೇಂದ್ರ ಕೇಳಿದ ಎಲ್ಲಾ ಅಂಕಿ ಅಂಶಗಳನ್ನು ನಾವು ಕೊಟ್ಟಿದ್ದೇವೆ. ವರದಿ ಬಗ್ಗೆ ಕೇಂದ್ರದ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸರ್ಕಾರದ ಬಳಿ 4,800 ಕೋಟಿ ಪರಿಹಾರ ಕೇಳಿದ್ದೇವೆ. ಮಾರ್ಗಸೂಚಿ ಪ್ರಕಾರ ಇಷ್ಟೇ ಪರಿಹಾರ ಕೇಳಲು ಆಗುವುದು. ನಮಗಿಂತ ಬೇರೆ ರಾಜ್ಯಗಳಲ್ಲೂ ಅಧಿಕ ಮಳೆ ಕೊರತೆ ಆಗಿದೆ. ಆದ್ರೆ ನಾವು ಮಾತ್ರ ಬರಪೀಡಿತ ತಾಲೂಕು ಘೋಷಣೆ ಮಾಡಿದ್ದು
ಕೇಂದ್ರ ಸರ್ಕಾರ ನಮ್ಮ ಮನವಿಗೆ ಸ್ಪಂದಿಸುವ ವಿಶ್ವಾಸ ಇದೆ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಈ ಬಾರಿ ರಾಜ್ಯದಲ್ಲಿ ನಮಗೆ ಆಹಾರ ಕೊರತೆ ಆಗುತ್ತೆ. ಯಾವುದು ಎಷ್ಟು ಅಂತ ಲೆಕ್ಕ ಹಾಕುತ್ತಿದ್ದೇವೆ. ಹಿಂಗಾರು ಕೂಡ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ. ರಾಜ್ಯದಲ್ಲಿ ೨೮ % ಮಳೆ ಕೊರತೆಯಾಗಿದೆ. ನಾವು ಕೊಟ್ಟ ಬರದ ವರದಿ ಬಗ್ಗೆ ಕೇಂದ್ರ ಅಧಿಕಾರಿಗಳು ಗುಡ್ ಅಂದಿದ್ದಾರೆ. ಅವರು ಕೇಳಿದ ಎಲ್ಲ ಅಂಕಿ ಅಂಶಗಳನ್ನು ನಾವು ಕೊಟ್ಟಿದ್ದೇವೆ. ಮಳೆ ಅಳತೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಚೆನ್ನಾಗಿದೆ. ನಿಖರವಾದ ಅಂಕಿಅಂಶಗಳನ್ನು ನಾವು ಕೊಟ್ಟಿದ್ದೇವೆ. ನ್ಯಾಯೂತವಾಗಿ ಕೇಂದ್ರ ಸರ್ಕಾರ ಸ್ಪಂದಿಸುವ ಕೆಲಸ ಕೇಂದ್ರ ಮಾಡುತ್ತೆ. ನಮ್ಮ ಮನವಿಗೆ ಸ್ಪಂದನೆ ಮಾಡ್ತಾರೆ ಎಂಬ ಭರವಸೆ ಇದೆ ಅವರು ವಿಶ್ವಾಸ ವ್ಯಕ್ತಪಡಿಸಿದರು.