ಶಿವಾನಂದ ಸರ್ಕಲ್ ಸ್ಟೀಲ್ ಫ್ಲೈಒವರ್ ವಿವಾದದ ಬಳಿಕ ಜೆಸಿ ರಸ್ತೆಯಲ್ಲಿ ಸ್ಟೀಲ್ ಬ್ರಿಡ್ಜ್ ಮಾಡಲು ಬಿಬಿಎಂಪಿ ಸಿದ್ಧತೆ
ಸಾಕಷ್ಟು ವಿವಾದಗಳಿಂದಲೇ ನಿರ್ಮಾಣವಾದ ಶಿವನಂದ ಸ್ಟೀಲ್ ಬ್ರಿಡ್ಜ್ ಇದೀಗಾ ಮತ್ತೆ ಮುನ್ನೆಲೆಗೆ ಬಂದಿದೆ. ಶಿವನಂದ ಸ್ಟೀಲ್ ಬ್ರಿಡ್ಜ್ ನಂತೆಯೇ ಜೆಸಿ ರಸ್ತೆಯಿಂದ ಟೌನ್ ಹಾಲ್ವರೆಗೂ ಅಲ್ಲಿಂದ ಕಸ್ತುರುಬಾ ರೋಡ್ ವರೆಗೂ ಸ್ಟೀಲ್ ಬ್ರಿಡ್ಜ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ.
ಬೆಂಗಳೂರು, ಅ.05: ಭಾರಿ ವಿವಾದಗಳಿಂದಲೇ ನಿರ್ಮಾಣವಾಗಿದ್ದ ಶಿವಾನಂದ ಸ್ಟೀಲ್ ಬ್ರಿಡ್ಜ್ ನಂತೆಯೇ (Shivananda Steel Bridge) ನಗರದ ಜೆಸಿ ರಸ್ತೆಯಲ್ಲಿ ಸ್ಟೀಲ್ ಬ್ರಿಡ್ಜ್ (Steel Bridge) ಮಾಡಲು ಬಿಬಿಎಂಪಿ (BBMP) ಸಜ್ಜಾಗಿದೆ. ಬೆಂಗಳೂರಿನ ಶಿವನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಕಷ್ಟು ವಿವಾದಗಳಿಂದಲೇ ನಿರ್ಮಾಣವಾದ ಶಿವನಂದ ಸ್ಟೀಲ್ ಬ್ರಿಡ್ಜ್ ಇದೀಗಾ ಮತ್ತೆ ಮುನ್ನೆಲೆಗೆ ಬಂದಿದೆ. ಶಿವನಂದ ಸ್ಟೀಲ್ ಬ್ರಿಡ್ಜ್ ನಂತೆಯೇ ಜೆಸಿ ರಸ್ತೆಯಿಂದ ಟೌನ್ ಹಾಲ್ವರೆಗೂ ಅಲ್ಲಿಂದ ಕಸ್ತುರುಬಾ ರೋಡ್ ವರೆಗೂ ಸ್ಟೀಲ್ ಬ್ರಿಡ್ಜ್ ಮಾಡಲು ಪ್ಲಾನ್ ಮಾಡಲಾಗುತ್ತಿದೆ.
ಹೌದು, ಈ ಸ್ಟೀಲ್ ಬ್ರಿಡ್ಜ್ ಮಾಡುವುದಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಮುಂದಿನ ತಿಂಗಳಿನಿಂದ ಇದರ ಕಾಮಾಗರಿ ಆರಂಭವಾಗುವ ಸಾಧ್ಯತೆ ಇದೆ. ಇನ್ನು ಈ ಸ್ಟೀಲ್ ಬ್ರಿಡ್ಜ್ ಮಾಡಲು ಬಿಜೆಪಿ ಸರ್ಕಾರದ ಅವಧಿಯಲ್ಲಿ ನಗರೋತ್ಥಾನ ಅನುದಾನದಲ್ಲಿ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಇದೀಗಾ ಸ್ಟೀಲ್ ಎಲಿವೆಟೆಡ್ ಕಾರಿಡಾರ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸಹ ಅಸ್ತು ಎಂದಿದ್ದಾರಂತೆ. ಸಧ್ಯ ಮಿನರ್ವ ಸರ್ಕಲ್‌ನಿಂದ ಜೆ.ಸಿ ರಸ್ತೆ ಮಾರ್ಗವಾಗಿ ಹಡ್ಸನ್ ಸರ್ಕಲ್ ವರೆಗೂ ಈ ಕಾರಿಡಾರ್ ನಿರ್ಮಾಣವಾಗಲಿದ್ದು, ಈ ಯೋಜನೆಗೆ 213 ಕೋಟಿ ಅನುದಾನ ಮೀಸಲಿಡಲಾಗಿದೆ. ಇನ್ನು ಎಲಿವೇಟೆಡೆಡ್ ಒಟ್ಟು ನಾಲ್ಕು ಪಥದ ಫ್ಲೈಒವರ್ ಇದಾಗಿದ್ದು, ಮಿನರ್ವ ಸರ್ಕಲ್, ಎಲ್ಐಸಿ ಆಫೀಸ್, ಹಲಸೂರು ಗೇಟ್ ಸ್ಟೇಷನ್, ಶಿವಾಜಿ ಹಾಗೆ ಭಾರತ್ ಟಾಕೀಸ್ ಬಳಿ ಸಿಗ್ನಲ್ ಮುಕ್ತವಾಗಲಿದೆ. ವಿವಿ ಪುರ ಹಾಗೂ ಆರ್.ವಿ ರೋಡ್ ನಲ್ಲಿ ಮೇಲೇರಿ ಕೆಜಿ ರಸ್ತೆಯಲ್ಲಿ ಇಳಿಯಬಹುದಾಗಿದ್ದು, ಟ್ರಾಫಿಕ್ ಗೆ ಕಡಿವಾಣ ಹಾಕಲು ಈ ಯೋಜನೆ ರೂಪಿಸಲಾಗಿದ್ಯಂತೆ.
ಇನ್ನು, ಸಿಟಿಯಲ್ಲಿ ಇನ್ನೊಂದು ಸ್ಟೀಲ್ ಬ್ರಿಡ್ಜ್ ಮಾಡುತ್ತಿದ್ದಾರೆ ಅಂತ ಗೊತ್ತಾಗುತ್ತಿದ್ದಂತೆ ಜನರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಸ್ಟೀಲ್ ಬ್ರಿಡ್ಜ್ ಕುರಿತಾಗಿ ಈಗಾಗಲೆ ಸಾಕಷ್ಟು ವಿವಾದಗಳಾಗಿವೆ. ಬ್ರಿಡ್ಜ್ ನಿರ್ಮಾಣದ ಬಳಿಕವೂ ಅವೈಜ್ಞಾನಿಕ ಕಾಮಾಗಾರಿ ಅಂತ ಕಮೆಂಟ್ಸ್ ಗಳು ಬಂದಿವೆ. ಈ ಸಂದರ್ಭದಲ್ಲಿ ಮತ್ತೊಂದು ಸ್ಟೀಲ್ ಬ್ರಿಡ್ಜ್ ಮಾಡುವ ಅಗತ್ಯತೆ ಇತ್ತಾ ಎಂದು ಸಾಮಾಜಿಕ ಕಾರ್ಯಕರ್ತರು ಸರ್ಕಾರಕ್ಕೆ ಪ್ರಶ್ನಿಸುತ್ತಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ