Saalumarada Thimmakka; ತಿಮ್ಮಕ್ಕರ ಆರೋಗ್ಯ ಸ್ಥಿರವಾಗಿದೆ, ಅವರ ಆರೋಗ್ಯದ ಬಗ್ಗೆ ವರದಿ ಮಾಡುವಾಗ ಸಂವೇದನೆ ಇರಲಿ: ಉಮೇಶ್ ವನಸಿರಿ, ತಿಮ್ಮಕ್ಕ ಮಗ

Saalumarada Thimmakka; ತಿಮ್ಮಕ್ಕರ ಆರೋಗ್ಯ ಸ್ಥಿರವಾಗಿದೆ, ಅವರ ಆರೋಗ್ಯದ ಬಗ್ಗೆ ವರದಿ ಮಾಡುವಾಗ ಸಂವೇದನೆ ಇರಲಿ: ಉಮೇಶ್ ವನಸಿರಿ, ತಿಮ್ಮಕ್ಕ ಮಗ

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 05, 2023 | 6:32 PM

Saalumarada Thimmakka: ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ಕುಟುಂಬಕ್ಕೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದಾರೆ ಅಂತ ಭಾಸವಾಗುತ್ತಿದೆ, ಇದನ್ನು ನಿಲ್ಲಿಸುವಂತೆ ಉಮೇಶ್ ನೋವಿನಿಂದ ಮನವಿ ಮಾಡಿಕೊಂಡರು. ತಿಮ್ಮಕ್ಕನವರಿಗೆ ಉಸಿರಾಟದ ತೊಂದರೆಯಾಗಿದ್ದರಿಂದ ಬೇಲೂರು ಬಳಿಯಿರುವ ಬೆಳ್ಳೂರಿನಿಂದ ಅಂಬ್ಯುಲೆನ್ಸ್ ಒಂದರಲ್ಲಿ ಬೆಂಗಳೂರಿನ ಅಪೊಲ್ಲೋ ಆಸ್ಪತ್ರೆಗೆ ತರಲಾಯಿತು. ಹೃದಯದ ರಕ್ತನಾಳ ಬ್ಲಾಕ್ ಆಗಿದ್ದರಿಂದ ವೈದ್ಯರು ಸ್ಟೆಂಟ್ ಅಳಡಿಸಿದ್ದಾರೆ ಎಂದು ಉಮೇಶ್ ಹೇಳಿದರು.

ಬೆಂಗಳೂರು: ಹೃದ್ರೋಗ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವ 112-ವರ್ಷ ವಯಸ್ಸಿನ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಆರೋಗ್ಯ ಸ್ಥಿರವಾಗಿದೆ ಮತ್ತು ತೀವ್ರ ನಿಗಾ ಘಟಕದಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಮಗ ಉಮೇಶ್ ವನಸಿರಿ ಮಾಧ್ಯಮದ ಪ್ರತಿನಿಧಿಗಳಿಗೆ ತಿಳಿಸಿದರು. ನಗರದ ಅಪೊಲ್ಲೋ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದು ಮಧ್ಯಾಹ್ನ ಅವರಿಗೆ ಗಂಜಿ ಕುಡಿಸಿ ಹೊರಬಂದ ಬಳಿಕ ಉಮೇಶ್ ಸುದ್ದಿಗಾರರೊಂದಿಗೆ ಮಾತಾಡಿದರು. ತಿಮ್ಮಕ್ಕ ಚೇತರಿಸಿಕೊಳ್ಳುತ್ತಿರುವ ಹಂತದಲ್ಲಿ ಕೆಲ ಮಾಧ್ಯಮಗಳು ಶ್ರದ್ಧಾಂಜಲಿಯ ವರದಿಗಳನ್ನು ಪ್ರಸಾರ ಮಾಡಿದ್ದು ಉಮೇಶ್ ಅವರಲ್ಲಿ ತೀವ್ರ ಬೇಸರವನ್ನುಂಟು ಮಾಡಿದೆ. ಅವರು ಕೇವಲ ತಮ್ಮ ಕುಟುಂಬಕ್ಕೆ ಮಾತ್ರ ಅಮ್ಮನಲ್ಲ, ಇಡೀ ವಿಶ್ವ ಅವರನ್ನು ವೃಕ್ಷಮಾತೆ ಎಂದು ಆದರಿಸುತ್ತದೆ. ಕೆಲವರು ಉದ್ದೇಶಪೂರ್ವಕವಾಗಿ ತಮ್ಮ ಕುಟುಂಬಕ್ಕೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದಾರೆ ಅಂತ ಭಾಸವಾಗುತ್ತಿದೆ, ಇದನ್ನು ನಿಲ್ಲಿಸುವಂತೆ ಉಮೇಶ್ ನೋವಿನಿಂದ ಮನವಿ ಮಾಡಿಕೊಂಡರು. ತಿಮ್ಮಕ್ಕನವರಿಗೆ ಉಸಿರಾಟದ ತೊಂದರೆಯಾಗಿದ್ದರಿಂದ ಬೇಲೂರು ಬಳಿಯಿರುವ ಬೆಳ್ಳೂರಿನಿಂದ ಅಂಬ್ಯುಲೆನ್ಸ್ ಒಂದರಲ್ಲಿ ಬೆಂಗಳೂರಿನ ಅಪೊಲ್ಲೋ ಆಸ್ಪತ್ರೆಗೆ ತರಲಾಯಿತು. ಹೃದಯದ ರಕ್ತನಾಳ ಬ್ಲಾಕ್ ಆಗಿದ್ದರಿಂದ ವೈದ್ಯರು ಸ್ಟೆಂಟ್ ಅಳಡಿಸಿದ್ದಾರೆ ಎಂದು ಉಮೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ