ರಾಜಕೀಯ ನಾಯಕರಿಗೆ ಚಿನ್ನ ಬೇಕೆಂದು ವ್ಯಾಪಾರಿಗೆ 3 ಕೆಜಿ ಚಿನ್ನ ಮತ್ತು 80 ಲಕ್ಷ ರೂ. ವಂಚನೆ ಆರೋಪ; ಪ್ರಕರಣ ದಾಖಲು
ಚುನಾವಣೆಯಲ್ಲಿ ರಾಜಕೀಯ ನಾಯಕರಿಗೆ ಚಿನ್ನ ಬೇಕೆಂದು ಹೇಳಿ ಕೆಆರ್ ಮಾರ್ಕೆಟ್ ಬಳಿಯ ಚಿನ್ನದ ವ್ಯಾಪಾರಿಗೆ 3 ಕೆಜಿ ಚಿನ್ನ ಮತ್ತು 80 ಲಕ್ಷ ಹಣ ವಂಚನೆ ಮಾಡಿರುವ ಕುರಿತು ಸಿಟಿ ಮಾರ್ಕೆಟ್ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಂಗಳೂರು: ಚುನಾವಣೆಯಲ್ಲಿ ರಾಜಕೀಯ ನಾಯಕರಿಗೆ ಚಿನ್ನ ಬೇಕೆಂದು ಹೇಳಿ ಕೆಆರ್ ಮಾರ್ಕೆಟ್ ಬಳಿಯ ಚಿನ್ನದ ವ್ಯಾಪಾರಿಗೆ 3 ಕೆಜಿ ಚಿನ್ನ ಮತ್ತು 80 ಲಕ್ಷ ಹಣ ವಂಚನೆ ಮಾಡಿರುವ ಕುರಿತು ಸಿಟಿ ಮಾರ್ಕೆಟ್ ಪೋಲಿಸ್ ಠಾಣೆ(City Market Police Station)ಯಲ್ಲಿ ಕೇಸ್ ದಾಖಲಾಗಿದೆ. ವಿಶಾಲ್ ಜೈನ್ ಎಂಬ ಉದ್ಯಮಿಗೆ ವಂಚಿಸಿರುವ ಅರೋಪಿಗಳು. ಅಭಯ್, ಕಿರಣ್, ಸಂಕೇತ್, ನವೀನ್ ಮತ್ತು ಚರಣ್ ಎಂಬ ವ್ಯಕ್ತಿಗಳಿಂದ ವಂಚನೆ ಆರೋಪ ಕೇಳಿಬಂದಿದೆ. ಮೊದಲಿಗೆ ಒಂದು ಕೆಜಿ ಚಿನ್ನ ಬೇಕು ಎಂದು ಪಡೆದಿದ್ದಾರೆ. ಬಳಿಕ ಶಾಂಗ್ರೀಲಾ ಹೋಟೆಲ್ನಲ್ಲಿ ಭೇಟಿ ಮಾಡಿ ರಾಜಕೀಯ ನಾಯಕರ ಪಿಎ ಜೊತೆ ಮಾತನಾಡಿದಂತೆ ಮಾಡಿ, ಮತ್ತೆ ಚಿನ್ನವನ್ನ ಪಡೆದಿದ್ದಾರೆ.
ಹೀಗೆ ಹಂತ ಹಂತವಾಗಿ ಒಟ್ಟು ಮೂರು ಕೆಜಿಗೂ ಅಧಿಕ ಚಿನ್ನ ಪಡೆದಿದ್ದಾರಂತೆ. ಕೊನೆಗೆ ಹಣ ಕೇಳಿದಾಗ, ನಮ್ಮ ಬಳಿ 8 ಕೆಜಿ ಚಿನ್ನದ ಗಟ್ಟಿ ಇದೆ. ಅದನ್ನು ತೆಗೆದುಕೊಂಡು ಉಳಿದ ಹಣ ವಾಪಸ್ಸು ಕೊಡಿ ಎಂದಿದ್ದಾರೆ. ಇದನ್ನು ನಂಬಿ ಎಂಟು ಕೆಜಿ ಪಡೆದು ಐವತ್ತು ಲಕ್ಷ ಹಣ ವಾಪಸ್ಸು ನೀಡಿದ್ದರು. ಬಳಿಕ ಮನೆಗೆ ಬಂದು ನೋಡಿದಾಗ ಅದು ನಕಲಿ ಚಿನ್ನ ಎನ್ನುವುದು ಗೊತ್ತಾಗಿದೆ. ಈ ವಿಚಾರ ಹೇಳಿ ಪ್ರಶ್ನೆ ಉದ್ಯಮಿ ಮಾಡಿದ್ದಾರೆ. ಈ ವೇಳೆ ನಾವು ಕೊಟ್ಟಿದ್ದು ಚಿನ್ನ ನೀವೆ ಕಬ್ಬಿಣ ಇಟ್ಟು, ನಾಟಕ ಮಾಡುತ್ತಿರ ಎಂದು ಬೆದರಿಕೆ ಹಾಕಿದ್ದಾರೆ.
ಇದಾದ ಬಳಿಕ ಕೊನೆಗೆ ರಾಜಕೀಯ ನಾಯಕರ ಹೆಸರು ಹೇಳಿ 30 ಲಕ್ಷ ಹಣ ವಸೂಲಿ ಮಾಡಿದ್ದು, ಈ ಮೂಲಕ ಒಟ್ಟು 3 ಕೆಜಿ ಚಿನ್ನದ ಆಭರಣ ಮತ್ತು 80 ಲಕ್ಷ ಹಣ ವಸೂಲಿ ಮಾಡಿ ವಂಚನೆ ಮಾಡಿದ್ದಾರೆ. ಈ ಘಟನೆ ಸಂಬಂಧ ವಿಶ್ವೇಶ್ವರ ಪುರ ಪೊಲೀಸರ ಮೂಲಕ ರಾಜಿಗೆ ಯತ್ನಿಸಿದ್ದಾರೆ. ಅಲ್ಲಿಯೂ ಚಿನ್ನ ಪಡೆದಿದ್ದಾಗಿ ಒಪ್ಪಿ ನಂತರ ವಾಪಸ್ಸು ನೀಡದೆ ವಂಚಿಸಿದ್ದಾರೆ. ಇನ್ನು ಈ ಎಲ್ಲ ಘಟನೆ ಸಂಬಂಧಿಸಿದಂತೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಈ ಕುರಿತು ಪೊಲೀಸರು ಅರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ