ರಾಜ್ಯದಲ್ಲಿ ಇಂದು 328 ಜನರಿಗೆ ಕೊರೊನಾ ಸೋಂಕು ದೃಢ; ಯಾವ್ಯಾವ ಜಿಲ್ಲೆಯಲ್ಲೆಷ್ಟು?

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 05, 2024 | 8:00 PM

ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7,205 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 328 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿಯೇ 163 ಜನರಲ್ಲಿ ಕೊರೊನಾ ಸೋಂಕು(Corona Virus) ಬೆಳಕಿಗೆ ಬಂದಿದ್ದು, 409 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ರಾಜ್ಯದಲ್ಲಿ ಇಂದು 328 ಜನರಿಗೆ ಕೊರೊನಾ ಸೋಂಕು ದೃಢ; ಯಾವ್ಯಾವ ಜಿಲ್ಲೆಯಲ್ಲೆಷ್ಟು?
ಕೊರೊನಾ ಸೋಂಕು ದೃಢ
Follow us on

ಬೆಂಗಳೂರು, ಜ.05: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 7,205 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ಅದರಲ್ಲಿ 328 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿಯೇ 163 ಜನರಲ್ಲಿ ಕೊರೊನಾ ಸೋಂಕು(Corona Virus) ಬೆಳಕಿಗೆ ಬಂದಿದ್ದು, 409 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು 1,159  ಸಕ್ರಿಯ ಕೇಸ್​ಗಳಿವೆ. ಇನ್ನು ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 4.55 ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಯಾವ್ಯಾವ ಜಲ್ಲೆಯಲ್ಲೆಷ್ಟು?

ರಾಜ್ಯದ ಕೊರೊನಾ ವೈರಸ್​ ಹರಡುತ್ತಿದ್ದು, ಬೆಂಗಳೂರಿನಲ್ಲಿಯೇ ಇಂದು 163 ಜನರಿಗೆ ಕೊರೊನಾ ಸೋಂಕು ಬೆಳಕಿಗೆ ಬಂದಿದೆ. ಇನ್ನುಳಿದಂತೆ ಬಾಗಲಕೋಟೆ 4, ಬಳ್ಳಾರಿ 9, ಬೆಂಗಳೂರು ಗ್ರಾಮಾಂತರ 18, ಚಾಮರಾಜನಗರ 5, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 7, ಚಿತ್ರದುರ್ಗ 5, ದಕ್ಷಿಣ ಕನ್ನಡ 8, ದಾವಣಗೆರೆ 3, ಧಾರವಾಡ 2, ಗದಗ 1, ಹಾಸನ 12, ಹಾವೇರಿ 1, ಕಲಬುರಗಿ 4, ಕೋಲಾರ 1, ಮಂಡ್ಯ 7, ಮೈಸೂರು 26, ರಾಯಚೂರು 4, ರಾಮನಗರ 3
ಶಿವಮೊಗ್ಗ 6, ತುಮಕೂರು 15, ಉಡುಪಿ 1, ಉತ್ತರ ಕನ್ನಡ 6, ವಿಜಯನಗರದಲ್ಲಿ 7 ಪ್ರಕರಣಗಳು ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇದನ್ನೂ ಓದಿ:ಜ.06 ರಂದು ಕೊರೋನಾ ಹೆಲ್ಪ್​ಲೈನ್ ಲೋಕಾರ್ಪಣೆ: ಸಚಿವ ದಿನೇಶ್ ಗುಂಡೂರಾವ್

ನಾಳೆ ಕೊರೋನಾ ಹೆಲ್ಪ್​ಲೈನ್ ಲೋಕಾರ್ಪಣೆ

ನಾಳೆ(ಜ.06) ಕೊರೊನಾ ಹೆಲ್ಪ್​ಲೈನ್​ನ್ನು ಲೋಕಾರ್ಪಣೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಈಗ ಎಲ್ಲಾ ವಯಸ್ಸಾಗಿರುವವರಿಗೂ ಟೆಸ್ಟಿಂಗ್, ಅದರಲ್ಲೂ ವಯಸ್ಸಾಗಿ ಅನಾರೋಗ್ಯದಿಂದ ಇರುವವರು ಸ್ವತಃ ಬಂದು ಟೆಸ್ಟಿಂಗ್ ಮಾಡಿಸಬೇಕು. ಹೋಂ ಐಸೋಲೇಷನ್ ಆಗಿರುವ ವೃದ್ಧರ ಮೇಲೆ ನಿಗಾ ಇಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:57 pm, Fri, 5 January 24