ಜ.06 ರಂದು ಕೊರೋನಾ ಹೆಲ್ಪ್ಲೈನ್ ಲೋಕಾರ್ಪಣೆ: ಸಚಿವ ದಿನೇಶ್ ಗುಂಡೂರಾವ್
ನಾಳೆ(ಜ.06) ಕೊರೊನಾ ಹೆಲ್ಪ್ಲೈನ್ನ್ನು ಲೋಕಾರ್ಪಣೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao)ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಕರ್ನಾಟಕದಲ್ಲಿ 1240 ಕೊರೋನಾ ಸಕ್ರಿಯ ಪ್ರಕರಣಗಳು ಇದ್ದು, ಸ್ವಲ್ಪ ಪ್ರಮಾಣದಲ್ಲಿ ಕೇಸ್ಗಳು ಬೆಳಕಿಗೆ ಬಂದಿದೆ. ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದು, ಟೆಸ್ಟಿಂಗ್ ಕೂಡ ಅಷ್ಟೇ ಹೆಚ್ಚಳವಾಗಿದೆ. ರೋಗ ಲಕ್ಷಣಗಳು ಇರುವವರ ಮೇಲೆ ಈಗಾಗಲೇ ನಿಗಾವಹಿಸಿ ಟೆಸ್ಟಿಂಗ್ ಮಾಡಲಾಗುತ್ತಿದೆ.
ಬೆಂಗಳೂರು, ಜ.05: ಈಗಾಗಲೇ ರಾಜ್ಯದಲ್ಲಿ ಕೊರೊನಾ(Corona) ಹಾವಳಿ ಶುರುವಾಗಿದ್ದು, ಹಲವರು ಸಾವನ್ನಪ್ಪಿದ್ದಾರೆ. ಈ ಹಿನ್ನಲೆ ನಾಳೆ(ಜ.06) ಕೊರೊನಾ ಹೆಲ್ಪ್ಲೈನ್ನ್ನು ಲೋಕಾರ್ಪಣೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್(Dinesh Gundu Rao)ಹೇಳಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು ‘ಸಧ್ಯ 20 ರಲ್ಲಿ ಒಂದು ಕೇಸ್ಗೆ ಟೆಸ್ಟ್ ಮಾಡುತ್ತಿದ್ದೇವು, ಈಗ ಎಲ್ಲಾ ILI(Influenza like illness) ಸೇರಿ ವಯಸ್ಸಾಗಿರುವವರಿಗೂ ಟೆಸ್ಟಿಂಗ್, ಅದರಲ್ಲೂ ವಯಸ್ಸಾಗಿ ಅನಾರೋಗ್ಯದಿಂದ ಇರುವವರಿಗೆ ಕಡ್ಡಾಯ ಟೆಸ್ಟಿಂಗ್ ಮಾಡಿಸಲೇಬೇಕು. ಹೋಂ ಐಸೋಲೇಷನ್ ಆಗಿರುವ ವೃದ್ಧರ ಮೇಲೆ ನಿಗಾ ಇಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಇನ್ನು ಕರ್ನಾಟಕದಲ್ಲಿ 1240 ಕೊರೋನಾ ಸಕ್ರಿಯ ಪ್ರಕರಣಗಳು ಇದ್ದು, ಸ್ವಲ್ಪ ಪ್ರಮಾಣದಲ್ಲಿ ಕೇಸ್ಗಳು ಬೆಳಕಿಗೆ ಬಂದಿದೆ. ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದು, ಟೆಸ್ಟಿಂಗ್ ಕೂಡ ಅಷ್ಟೇ ಹೆಚ್ಚಳವಾಗಿದೆ. ರೋಗ ಲಕ್ಷಣಗಳು ಇರುವವರ ಮೇಲೆ ಈಗಾಗಲೇ ನಿಗಾವಹಿಸಿ ಟೆಸ್ಟಿಂಗ್ ಮಾಡಲಾಗುತ್ತಿದೆ. ಜೊತೆಗೆ ಪಕ್ಕದ ರಾಜ್ಯ ಕೇರಳದಲ್ಲಿ ಕೊರೊನಾ ಇಳಿಕೆಯಾಗುತ್ತಿದೆ. ಕರ್ನಾಟಕದಲ್ಲಿ ಇಳಿಕೆಯ ಟ್ರೆಂಡ್ ಇನ್ನೂ ಶುರುವಾಗಿಲ್ಲ. ಮುಂದಿನ ದಿನದಲ್ಲಿ ಕಡಿಮೆಯಾಗಬಹುದು. ನಿನ್ನೆ ತಾಂತ್ರಿಕ ಸಲಹಾ ಸಮಿತಿ ಸಭೆ ಮಾಡಿ ಮಾರ್ಗದರ್ಶನ ನೀಡಿದ್ದಾರೆ ಎಂದರು.
ಇದನ್ನೂ ಓದಿ:ಕೊರೊನಾ ಪರೀಕ್ಷೆ ಹೆಚ್ಚಿಸುತ್ತೇವೆ, ನಿರ್ಬಂಧ ಸದ್ಯಕ್ಕಿಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸ್ಪಷ್ಟನೆ
ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಮಾತ್ರ ಮಾಧ್ಯಮಕ್ಕೆ ಮಾತಾನಾಡಬೇಕು ಎಂದು ಸೂಚನೆ
ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷರು ಮಾತ್ರ ಮಾಧ್ಯಮಕ್ಕೆ ಮಾತಾನಾಡಬೇಕು ಸೂಚಿಸಿದ್ದೇವೆ. ಡೆತ್ ಆಡಿಟ್ ಕಮಿಟಿ ಕೂಡ ರಚನೆಯಾಗಿದ್ದು, ಇದಕ್ಕೆ ಡಾ. ಶಶಿಭೂಷಣ್ರನ್ನು ಕಮೀಟಿ ಅಧ್ಯಕ್ಷರನ್ನಾಗಿ ಮಾಡಿದ್ದೇವೆ. ಇದುವರೆಗೆ ಒಟ್ಟು 20 ಸಾವು ಆಗಿದೆ. ಅದರಲ್ಲಿ 10 ಸಾವಿನ ಆಡಿಟ್ ರಿಪೋರ್ಟ್ ಬಂದಿದೆ. ಓರ್ವ ಮೃತ ಸೋಂಕಿತನಿಗೆ ಮಾತ್ರ ಕೊರೋನಾದ ತೀವೃ ಗುಣಲಕ್ಷಣಗಳು ಸಾವಿಗೆ ಕಾರಣವಾಗಿತ್ತು. ಉಳಿದ ಮೃತರಿಗೆ ಅನ್ಯ ಕಾಯಿಲೆ ಇತ್ತು. ಎಲ್ಲಾ ಮೃತ ಸೋಂಕಿತರ ಡೆತ್ ಆಡಿಟ್ಗೆ ಸೂಚನೆ ಕೊಟ್ಟಿದ್ದೇವೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ