ಶ್ರೀಕಾಂತ್ಗೆ ಜಾಮೀನು: ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದ ಪ್ರತಿಭಟನೆ ಕೈಬಿಟ್ಟ ಬಿಜೆಪಿ
ರಾಮಜನ್ಮಭೂಮಿ ಹೋರಾಟದ ಕೇಸ್ನಲ್ಲಿ ಆರೋಪಿಯಾಗಿರುವ ಕರಸೇವಕ ಆರೋಪಿ ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು ಹಿನ್ನಲೆ ಜ.9 ರಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ(BY vijayendra)ನೇತೃತ್ವದಲ್ಲಿ ನಿಗದಿಯಾಗಿದ್ದ ಪ್ರತಿಭಟನೆಯನ್ನು ರಾಜ್ಯ ಬಿಜೆಪಿ ಘಟಕ ಕೈಬಿಟ್ಟಿದೆ.
ಬೆಂಗಳೂರು, ಜ.05: ರಾಮಜನ್ಮಭೂಮಿ ಹೋರಾಟದ ಕೇಸ್ನಲ್ಲಿ ಆರೋಪಿಯಾಗಿರುವ ಕರಸೇವಕ ಆರೋಪಿ ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ಧ ಜಾಮೀನು ಮಂಜೂರು ಹಿನ್ನಲೆ ಜ.9 ರಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ(BY vijayendra)ನೇತೃತ್ವದಲ್ಲಿ ನಿಗದಿಯಾಗಿದ್ದ ಪ್ರತಿಭಟನೆಯನ್ನು ರಾಜ್ಯ ಬಿಜೆಪಿ ಘಟಕ ಕೈಬಿಟ್ಟಿದೆ. ಶ್ರೀಕಾಂತ್ ಬಿಡುಗಡೆಗೆ ಆಗ್ರಹಿಸಿ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಬಿಜೆಪಿ ನಿರ್ಧರಿಸಿತ್ತು. ಆದರೀಗ ಜಾಮೀನು ಮಂಜೂರಾದ ಹಿನ್ನೆಲೆ ಠಾಣೆಗೆ ಮುತ್ತಿಗೆ ಹಾಕುವುದನ್ನು ರದ್ದುಪಡಿಸಿದೆ.
ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ದ ಜಾಮೀನು
ಹುಬ್ಬಳ್ಳಿಯ ಒಂದನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದಿಂದ ಆರೋಪಿ ಶ್ರೀಕಾಂತ್ ಪೂಜಾರಿಗೆ ಷರತ್ತುಬದ್ದ ಜಾಮೀನು ಮಂಜೂರು ಮಾಡಲಾಗಿದೆ. ಆದರೆ, 1 ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ಬಂದ ನಂತರ ದಾಖಲೆಗಳನ್ನು 5 ಮತ್ತು 3ನೇ ಜೆಎಮ್ಎಫ್‌ಸಿ ನ್ಯಾಯಾಲಕ್ಕೆ ನೀಡಬೇಕು. ಬಳಿಕ ಆ ತೀರ್ಪು ಆದೇಶವನ್ನ ಈ ಎರಡೂ ಕೋರ್ಟ್‌ಗಳಿಗೆ ತಲುಪಿಸಬೇಕು. ನಂತರ ಸಂಜೆ 6 ಗಂಟೆಯೊಳಗೆ ತೀರ್ಪಿನ ಆದೇಶ ಜೈಲು ಅಧಿಕಾರಿಗಳ ಕೈ ಸೇರಬೇಕು. ಸಮಯದ ಅಭಾವದಿಂದ ತೀರ್ಪು ಆದೇಶ ಕೈ ಸೇರುವುದು ತಡವಾದರೆ ಶ್ರೀಕಾಂತಗೆ ಇಂದು ಬಿಡುಗಡೆ ಭಾಗ್ಯವಿಲ್ಲ ಎನ್ನಲಾಗುತ್ತಿದೆ.
ಇದನ್ನೂ ಓದಿ:ಶ್ರೀಕಾಂತ್ ಪೂಜಾರಿ ಬಿಡುಗಡೆ ಮಾಡುವವರೆಗೂ ಬಿಜೆಪಿ ಸುಮ್ಮನಿರಲ್ಲ: ಬಿವೈ ವಿಜಯೇಂದ್ರ
ಷರತ್ತುಗಳೇನು
ಇನ್ನು ಶ್ರೀಕಾಂತ್ ಪೂಜಾರಿಗೆ ವಿಧಿಸಿದ ಷರತ್ತುಗಳು 1) ಇಬ್ಬರು ಜಾಮೀನುದಾರರ ಭದ್ರತೆ ನೀಡಬೇಕು. 2) ಒಂದು ಲಕ್ಷ ರೂಪಾಯಿ 2 ಬಾಂಡ್ ನೀಡಬೇಕು.3) ನ್ಯಾಯಾಲಯದ ಪ್ರತಿ ವಿಚಾರಣೆಗೂ ಹಾಜರಾಗಬೇಕು.4)ನ್ಯಾಯಾಲಯದ ಪರವಾನಿಗೆ ಇಲ್ಲದೇ ನ್ಯಾಯಾಲಯದ ವ್ಯಾಪ್ತಿ ಬಿಟ್ಟು ತೆರಳಬಾರದು.5) ಸಾಕ್ಷ್ಯ ನಾಶಪಡಿಸುವಂತಿಲ್ಲ. 6) ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗುವಂತಿಲ್ಲ. 7) ಒಂದು ವೇಳೆ ಕೋರ್ಟ್ ವ್ಯಾಪ್ತಿ ಬಿಟ್ಟು ಹೋಗುವುದಾದರೆ ಅನುಮತಿ ಕಡ್ಡಾಯ.8) ಪ್ರತಿ ಮುದ್ದಾತ್ತಿಗೂ ಕಡ್ಡಾಯವಾಗಿ ಹಾಜರಿರಬೇಕು.9) ಇನ್ನುಳಿದಂತೆ ಇಬ್ಬರು ವ್ಯಕ್ತಿಗಳಿಂದ ತಲಾ 2 ಲಕ್ಷ ರೂ. ಭದ್ರತಾ ಬಾಂಡ್ ಶೂರಿಟಿ ಕೊಡಲು ಸೂಚನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ