ಬೆಂಗಳೂರಿನ ಹಿಂದವೀ ಮೀಟ್ ಮಾರ್ಟ್​ಗಳಲ್ಲಿ ನಿನ್ನೆ ಒಂದೇ ದಿನ 43 ಲಕ್ಷ ರೂಪಾಯಿ ವ್ಯಾಪಾರ; ಕೆಲ ಮಾಹಿತಿ ಇಲ್ಲಿದೆ

| Updated By: sandhya thejappa

Updated on: Apr 04, 2022 | 12:08 PM

ಉಳ್ಳಾಲ ಮತ್ತು ಜ್ಞಾನಭಾರತಿ ಹಿಂದವೀ ಮೀಟ್ ಮಾರ್ಟ್​ನಲ್ಲಿ ಸುಮಾರು 3,000 ಕೆಜಿ ಮಟನ್ 950 ಕೆಜಿ ಚಿಕನ್ ಮಾರಟವಾಗಿದ್ದು, ಅಂದಾಜು 21 ಲಕ್ಷದ 71 ಸಾವಿರ ರುಪಾಯಿ ವ್ಯಾಪಾರ ಆಗಿದೆ.

ಬೆಂಗಳೂರಿನ ಹಿಂದವೀ ಮೀಟ್ ಮಾರ್ಟ್​ಗಳಲ್ಲಿ ನಿನ್ನೆ ಒಂದೇ ದಿನ 43 ಲಕ್ಷ ರೂಪಾಯಿ ವ್ಯಾಪಾರ; ಕೆಲ ಮಾಹಿತಿ ಇಲ್ಲಿದೆ
ಹಿಂದವೀ ಮೀಟ್ ಮಾರ್ಟ್
Follow us on

ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ (Halal Cut) ಮಾಂಸ ಖರೀದಿಸದಂತೆ ಹಿಂದೂ ಸಂಘಟನೆಗಳು ಮನವಿ ಮಾಡಿವೆ. ಹಲಾಲ್ ಬಾಯ್ಕಾಟ್ (Halal Boycott) ಅಭಿಯಾನದ ಹಿನ್ನೆಲೆ ನಿನ್ನೆ (ಏಪ್ರಿಲ್ 3) ಹಿಂದವೀ ಮಾರ್ಟ್​ಗಳಲ್ಲಿ ಭರ್ಜರಿ ವ್ಯಾಪಾರ ನಡೆದಿದೆ. ಈ ಮೂಲಕ ಹಲಾಲ್ ಬಾಯ್ಕಾಟ್​ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರಿನ ಹಿಂದವೀ ಮಾರ್ಟ್​ಗಳಲ್ಲಿ ಲಕ್ಷ ಲಕ್ಷ ರೂ. ವ್ಯಾಪಾರ ನಡೆದಿದ್ದು, ಎಂಟು ಹಿಂದವೀ ಮಾರ್ಟ್​ನಿಂದ ಬರೋಬ್ಬರಿ 43 ಲಕ್ಷ ರೂಪಾಯಿ ವ್ಯಾಪಾರ ಆಗಿದೆ. ಇನ್ನು ಬೆಂಗಳೂರಿನ ಜಟ್ಕಾ ಕಟ್ ಅಂಗಡಿಗಳಲ್ಲಿ ನಿನ್ನೆ ಒಂದೇ ದಿನ ಸುಮಾರು 7 ಕೋಟಿ ರೂಪಾಯಿ ವ್ಯಾಪಾರ ಆಗಿದೆ.

ಉಳ್ಳಾಲ ಮತ್ತು ಜ್ಞಾನಭಾರತಿ ಹಿಂದವೀ ಮೀಟ್ ಮಾರ್ಟ್​ನಲ್ಲಿ ಸುಮಾರು 3,000 ಕೆಜಿ ಮಟನ್ 950 ಕೆಜಿ ಚಿಕನ್ ಮಾರಟವಾಗಿದ್ದು, ಅಂದಾಜು 21 ಲಕ್ಷದ 71 ಸಾವಿರ ರುಪಾಯಿ ವ್ಯಾಪಾರ ಆಗಿದೆ. ಕಮ್ಮನಹಳ್ಳಿ ಹಿಂದವೀ ಮೀಟ್ ಮಾರ್ಟ್​ನಲ್ಲಿ 750 ಕೆಜಿ ಮಟನ್, 600 ಕೆಜಿ ಚಿಕನ್ ಸೇಲ್ ಆಗಿದ್ದು, 6 ಲಕ್ಷದ 33 ಸಾವಿರ ರುಪಾಯಿ ಮಾರಾಟವಾಗಿದೆ. ಇನ್ನು ಇಂದಿರಾನಗರದ ಮಾರ್ಟ್​ನಲ್ಲಿ 400 ಕೆಜಿ ಮಟನ್, 500 ಕೆಜಿ ಚಿಕನ್ ಮಾರಾಟವಾಗಿದ್ದು, 3 ಲಕ್ಷದ 70 ಸಾವಿರ ರುಪಾಯಿ ಆದಾಯ ಬಂದಿದೆ.

ಹೊರಮಾವಿನಲ್ಲಿ 300 ಕೆಜಿ ಮಟನ್, 400 ಕೆಜಿ ಚಿಕನ್ ಸೇಲ್ ಆಗಿದೆ. ಇಲ್ಲಿ 2 ಲಕ್ಷದ 82 ಸಾವಿರ ರುಪಾಯಿ ಆದಾಯ ಸಿಕ್ಕಿದೆ ಎಂದು ಅಂದಾಜಿಸಲಾಗಿದೆ. ನಾಗವಾರದಲ್ಲಿ 400 ಕೆಜಿ ಮಟನ್ ಮಾರಾಟವಾಗಿದ್ದು, 2 ಲಕ್ಷದ 80 ಸಾವಿರ ರುಪಾಯಿ ಸಿಕ್ಕಿದೆ. ಬನ್ನೇರುಘಟ್ಟದಲ್ಲಿ 300 ಕೆಜಿ ಮಟನ್ ಮಾರಾಟವಾಗಿದೆ. ಇಲ್ಲಿ 2 ಲಕ್ಷದ ಹತ್ತು ಸಾವಿರ ಆದಾಯ ಬಂದಿದೆ, ನೆಲಗದರನಗಳ್ಳಿಯಲ್ಲಿ 300 ಕೆಜಿ ಮಟನ್, 360 ಕೆಜಿ ಚಿಕನ್ ಸೇಲ್ ಆಗಿದೆ. ಇಲ್ಲಿ 2 ಲಕ್ಷದ 74 ಸಾವಿರ ರುಪಾಯಿ ಮಾರಾಟವಾಗಿದೆ ಎಂದು ಅಂದಾಜಿಲಾಗಿದೆ. ಎಂಟು ಹಿಂದವೀ ಮೀಟ್ ಮಾರ್ಟ್​ನಲ್ಲಿ ನಿನ್ನೆ ಆದ ಅಂದಾಜು ವ್ಯಾಪಾರದ ಮೊತ್ತ 43,20,800 ರೂ. ಎಂದು ತಿಳಿದುಬಂದಿದೆ.

ಇದನ್ನೂ ಓದಿ

ಆಂಧ್ರಪ್ರದೇಶದಲ್ಲಿ ಇಂದಿನಿಂದ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದ 13 ಜಿಲ್ಲೆಗಳು; ಕೊಟ್ಟ ಭರವಸೆಯಂತೆ ನಡೆದುಕೊಂಡ ಸಿಎಂ ಜಗನ್​ರೆಡ್ಡಿ

ತಂದೆ ಸಾವಿನ ನೋವಲ್ಲೂ SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ; ಪರೀಕ್ಷೆ ನಂತರ ತಂದೆಯ ಅಂತ್ಯಕ್ರಿಯೆ