ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ ಬಂದಿದೆ?- ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನೆ

ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ ಬಂದಿದೆ?- ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಪ್ರಶ್ನೆ
ಹೆಚ್​ಡಿ ಕುಮಾರಸ್ವಾಮಿ

ರಾಜ್ಯ ಬಿಜೆಪಿ ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ರಾಜ್ಯದಲ್ಲಿರುವುದು ರಿಮೋಟ್ ಸರ್ಕಾರ. ಆರ್ಎಸ್ಎಸ್ ಮೆಚ್ಚಿಸುವುದಕ್ಕೆ ನಡೆಸುತ್ತಿರುವ ಸರ್ಕಾರವಾಗಿದೆ. ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದೆ.

TV9kannada Web Team

| Edited By: sandhya thejappa

Apr 04, 2022 | 12:49 PM


ಬೆಂಗಳೂರು: ರಾಜ್ಯದ ಮಸೀದಿಗಳಲ್ಲಿ ಆಜಾನ್ (Azan) ನಿಷೇಧಕ್ಕೆ ಆಗ್ರಹಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ (HD Kumaraswamy), ಇಷ್ಟು ದಿನ ಇಲ್ಲದ ಆಜಾನ್ ವಿಚಾರ ಈಗ ಏಕೆ ಬಂದಿದೆ? ಇದೇ ರೀತಿ ಮಾಡ್ತಾ ಹೋದರೆ ಬಿಜೆಪಿ ಸರ್ವನಾಶವಾಗುತ್ತೆ. ಇದು ಉತ್ತರ ಪ್ರದೇಶವಲ್ಲ, ಕರ್ನಾಟಕ. ರಾಜ್ಯದಲ್ಲಿ ಸಾಮರಸ್ಯ ಮೂಡಿಸುವ ಕೆಲಸ ಮಾಡಿ. ಡಾ.ಮನಮೋಹನ್ ಸಿಂಗ್ರನ್ನು ಮೌನಿ ಸಿಂಗ್ ಎನ್ನುತ್ತಿದ್ದರು. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಮೌನಿ ಆಗಿದ್ದಾರೆ. ಹಿಜಾಬ್ ವಿಚಾರ ಸರ್ಕಾರ ನಿಯಂತ್ರಿಸಿದ್ದರೆ ಬೆಳೆಯುತ್ತಿರಲಿಲ್ಲ ಎಂದು ಹೇಳಿದರು.

ರಾಜ್ಯ ಬಿಜೆಪಿ ಸರ್ಕಾರ ಸ್ವತಂತ್ರವಾಗಿ ನಡೆಯುತ್ತಿಲ್ಲ. ರಾಜ್ಯದಲ್ಲಿರುವುದು ರಿಮೋಟ್ ಸರ್ಕಾರ. ಆರ್​ಎಸ್​ಎಸ್​ ಮೆಚ್ಚಿಸುವುದಕ್ಕೆ ನಡೆಸುತ್ತಿರುವ ಸರ್ಕಾರವಾಗಿದೆ. ಬಿಜೆಪಿ, ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದೆ. ಆದರೆ ಆಗ ಕೇಂದ್ರದವರಿಗೆ ಅಧಿಕಾರ ಉಳಿಸಿಕೊಳ್ಳೇದು ಬೇಕಿರಲಿಲ್ಲ ಎಂದು ಬೆಂಗಳೂರಿನಲ್ಲಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ

ಜಟ್ಕಾ ಕಟ್ ಮಾಡಲು ಹೋಗಿ ವಿಹಿಂಪಾದವರು ಅದೆಲ್ಲಿ ತಲೆ ಕಟ್ ಮಾಡ್ತಾರೆಂಬ ಭಯವಿತ್ತು. ಗುಜರಿ ಅಂಗಡಿಯಲ್ಲಿ ಕೆಲಸ ಮಾಡಲು ವಿಹಿಂಪದವರು ಬರ್ತಾರಾ? ಎಲ್ಲಾದರೂ ಬೆಂಕಿ ಹಚ್ಚುವ ಕೆಲಸ ಇದೆ ಅಂದ್ರೆ ಮಾತ್ರ ಬರುತ್ತಾರೆ. ವಿಹಿಂಪದವರ ಮನಸ್ಸಿನಲ್ಲಿ ನಿಜವಾದ ಹಿಂದುತ್ವವೇ ಇರೋದಾದರೆ. ಬೆಲೆ ಏರಿಕೆಯ ವಿರುದ್ಧ ಹೋರಾಟ ಮಾಡುವುದುಕ್ಕೆ ಬನ್ನಿ. ಅಧಿಕಾರ ಹಿಡಿಯುವುದಕ್ಕೆ ಮಾಡಬಾರದ ಹೇಸಿಗೆ ಕೆಲಸ ಮಾಡಿದ್ದೀರಿ. ನೀವು ಗಾಜಿನ ಮನೆಯಲ್ಲಿ ಇದ್ದೀರಿ, ನಾವು ರೋಡ್​ನಲ್ಲಿದ್ದೇವೆ. ನಾವು ನಿಮಗೆ ಕಲ್ಲು ಹೊಡೆಯಬಹುದು, ಆದ್ರೆ ನಿಮ್ಮಿಂದ ಆಗಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ನಾನು ಗಾಳಿಪಟ, ಲಕ್ಕಿಡಿಪ್ ಸಿಎಂ:
ದೇಗುಲದಲ್ಲಿ ಹಿಂದೂಯೇತರರ ವ್ಯಾಪಾರಕ್ಕೆ ನಿರ್ಬಂಧ ವಿಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಮಾತನಾಡುವುದಿಲ್ಲ. ಧಾರ್ಮಿಕ ದತ್ತಿ ಕಾಯ್ದೆಯನ್ನು ತಂದವರೇ ಕಾಂಗ್ರೆಸ್ ನಾಯಕರು. ಹೀಗಿರಬೇಕಾದರೆ ಇನ್ನೆಲ್ಲಿ ಈ ಬಗ್ಗೆ ಮಾತಾಡುತ್ತಾರೆ. ಜೆಡಿಎಸ್ ಹೋರಾಟದಲ್ಲಿ ಸ್ವಾರ್ಥ ಇಲ್ಲ. ಜನರ ಪೂರ್ಣ ಆಶೀರ್ವಾದ ಸಿಗದಿದ್ದರೂ 2 ಬಾರಿ ಸಿಎಂ ಆಗಿದ್ದೆ. ನಾನು ಗಾಳಿಪಟ, ಲಕ್ಕಿಡಿಪ್ ಸಿಎಂ ಅಂತ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ಈ ಹೇಳಿಕೆಗಿಂತ ದೊಡ್ಡ ಏಪ್ರಿಲ್ ಫೂಲ್ ಯಾವುದೂ ಇಲ್ಲ:
ಮೋದಿ ಬಂದ ಬಳಿಕ ಕೋಮುಗಲಭೆ ನಡೆದಿಲ್ಲವೆಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಹೆಚ್​ಡಿಕೆ  ಪ್ರತಿಕ್ರಿಯೆ ನೀಡಿದ್ದಾರೆ. ಈ ಹೇಳಿಕೆಗಿಂತ ದೊಡ್ಡ ಏಪ್ರಿಲ್ ಫೂಲ್ ಯಾವುದೂ ಇಲ್ಲ ಎಂದರು

ಇದನ್ನೂ ಓದಿ

ಬೆಂಗಳೂರಿನಲ್ಲಿ ಹೊಸ ಅಭಿಯಾನ; ಮಸೀದಿಯಲ್ಲಿ ಆಜಾನ್ ಕೂಗುವ ಹೊತ್ತಿಗೆ ದೇವಾಲಯಗಳಲ್ಲಿ ದೇವರ ನಾಮ ಪಠಿಸಲು ತೀರ್ಮಾನ

ರಷ್ಯಾ ಸುಪರ್ದಿಯಲ್ಲಿದ್ದ ಉಕ್ರೇನ್​ ನಗರಗಳಲ್ಲಿ ನರಮೇಧದ ಸಾಕ್ಷ್ಯ ಪತ್ತೆ: ಸೇಡು ತೀರಿಸುತ್ತೇನೆಂದು ಶಪಥ ಮಾಡಿದ ಝೆಲೆನ್​ಸ್ಕಿ

Follow us on

Related Stories

Most Read Stories

Click on your DTH Provider to Add TV9 Kannada