ಬೆಂಗಳೂರಿನಲ್ಲಿ ಹೊಸ ಅಭಿಯಾನ; ಮಸೀದಿಯಲ್ಲಿ ಆಜಾನ್ ಕೂಗುವ ಹೊತ್ತಿಗೆ ದೇವಾಲಯಗಳಲ್ಲಿ ದೇವರ ನಾಮ ಪಠಿಸಲು ತೀರ್ಮಾನ

ಮೊದಲು ಯಲಹಂಕದ ಆಂಜನೇಯ ದೇವಸ್ಥಾನದಲ್ಲಿ ಈ ಅಭಿಯಾನ ಆರಂಭವಾಗಲಿದೆ. ನಾಳೆ ಬೆಳಿಗ್ಗೆ ಐದು ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ. ನಂತರ ರಾಜ್ಯಾದ್ಯಂತ ಈ ಅಭಿಯಾನ ಮಾಡಲು ಚಿಂತನೆ ಮಾಡಲಾಗಿದೆ ಎಂದು ಭರತ್ ಶೆಟ್ಟಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹೊಸ ಅಭಿಯಾನ; ಮಸೀದಿಯಲ್ಲಿ ಆಜಾನ್ ಕೂಗುವ ಹೊತ್ತಿಗೆ ದೇವಾಲಯಗಳಲ್ಲಿ ದೇವರ ನಾಮ ಪಠಿಸಲು ತೀರ್ಮಾನ
ಸಾಂದರ್ಭಿಕ ಚಿತ್ರ
Follow us
| Updated By: sandhya thejappa

Updated on:Apr 04, 2022 | 11:34 AM

ಬೆಂಗಳೂರು: ರಾಜ್ಯದಲ್ಲಿ ಹಲಾಲ್ ಕಟ್ (Halal Cut), ಜಟ್ಕಾ ಕಟ್ (Jatka Cut) ವಿವಾದ ಜೋರಾಗಿದೆ. ಹಿಂದೂ ಸಂಘಟನೆಗಳು ಹಲಾಲ್ ಕಟ್ ಮಾಂಸವನ್ನು ಬಳಸದಂತೆ ಮನವಿ ಮಾಡಿವೆ. ಈ ನಡುವೆ ರಾಜ್ಯದಲ್ಲಿ ಇನ್ನೊಂದು ಹೊಸ ಅಭಿಯಾನ ಶುರು ಮಾಡಲು ಹಿಂದೂ ಕನ್ನಡಿಗರು ಸಂಘಟನೆ ಯೋಜನೆ ರೂಪಿಸಿದೆ. ಮುಸ್ಲಿಂ ಸಮುದಾಯದವರು ನಮಾಜ್ ಮಾಡಿ, ಅಲ್ಲಾ ಹು ಅಕ್ಬರ್ ಅಂತಾ ಕೂಗುವ ವೇಳೆಗೆ ದೇವಾಲಯಗಳಲ್ಲಿ ಓ ನಮಃ ಶಿವಾಯ, ಜೈ ಶ್ರೀರಾಮ್ ಅಂತ ಕೂಗಿಸಲು ನಿರ್ಧಾರ ಮಾಡಲಾಗಿದೆ ಅಂತ ಟಿವಿ9 ಗೆ ಮಾಹಿತಿ ನೀಡಿದ ಹಿಂದೂ ಕನ್ನಡಿಗರು ಸಂಘಟನೆಯ ಮುಖಂಡ ಭರತ್ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಮೊದಲು ಯಲಹಂಕದ ಆಂಜನೇಯ ದೇವಸ್ಥಾನದಲ್ಲಿ ಈ ಅಭಿಯಾನ ಆರಂಭವಾಗಲಿದೆ. ನಾಳೆ ಬೆಳಿಗ್ಗೆ ಐದು ಗಂಟೆಗೆ ಕಾರ್ಯಕ್ರಮ ಆರಂಭವಾಗುತ್ತದೆ. ನಂತರ ರಾಜ್ಯಾದ್ಯಂತ ಈ ಅಭಿಯಾನ ಮಾಡಲು ಚಿಂತನೆ ಮಾಡಲಾಗಿದೆ ಎಂದು ಭರತ್ ಶೆಟ್ಟಿ ಹೇಳಿದ್ದಾರೆ.

ಶ್ರೀರಾಮ ಸೇನೆಯಿಂದ ಲೌಡ್ ಸ್ಪೀಕರ್ ಅಭಿಯಾನ: ಆರು ತಿಂಗಳ ಹಿಂದೆ ನಮ್ಮ ಸಂಘಟನೆಯೂ ಮೈಕ್ ಬಗ್ಗೆ ಮನವಿ ಮಾಡಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಆಧಾರದ ಮೇಲೆ ನಡೆದುಕೊಳ್ಳಲು ಕೇಳಿದ್ದೆವು. ಬೆಳಿಗ್ಗೆ 5ಕ್ಕೆ ಲೌಡ್ ಸ್ಪೀಕರ್ ಹಾಕುವುದನ್ನು ತಡೆಯಲು ಮನವಿ ಮಾಡಿದ್ದೆವು. ಮೊದಲು ತಹಶೀಲ್ದಾರ್​ಗೆ ಮನವಿ ಕೊಟ್ಟಿದ್ದೆವು. ಆದರೆ ಎಲ್ಲಿಯೂ ತಹಶೀಲ್ದಾರ್ ಕ್ರಮ ಕೈಗೊಳ್ಳಲಿಲ್ಲ. ಧ್ವನಿ ಮಾಲಿನ್ಯ ಆಗುತ್ತಿದೆ ಅಂತಾ ಮಾಲಿನ್ಯ ನಿಯಂತ್ರಣ ಮಂಡಳಿಗೂ ಮನವಿ ಮಾಡಿದ್ದೆವು. ಆದರೂ ಪ್ರಯೋಜನವಾಗಲಿಲ್ಲ. ಈಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಕೊನೆಯ ಎಚ್ಚರಿಕೆಯಾಗಿ ಮನವಿ ಕೊಡುತ್ತೇವೆ. ಕೋರ್ಟ್ ಆದೇಶ ಪಾಲಿಸಲು ಮುಸ್ಲಿಂ ಸಮಾಜಕ್ಕೆ ಸರ್ಕಾರ ಹೇಳಬೇಕು. ಅವರ ಪ್ರಾರ್ಥನೆಗೆ ನಮ್ಮ ವಿರೋಧ ಇಲ್ಲ. ಆದರೆ ಧ್ವನಿವರ್ಧಕ ಬಳಕೆಗೆ ವಿರೋಧ ಇದೆ. ಇದರಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ. ಕೋರ್ಟ್ ಆದೇಶವಿದ್ದರೂ ಪಾಲಿಸುತ್ತಿಲ್ಲ. ಇದರಿಂದ ಲಕ್ಷಾಂತರ ಜನರಿಗೆ ತೊಂದರೆಯಾಗಿದೆ ಎಂದು ಧಾರವಾಡ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

ದೇವಸ್ಥಾನಗಳಲ್ಲಿ ಪ್ರತಿದಿನ 5 ಗಂಟೆಗೆ ರಾಮಭಜನೆ ಹಾಕುತ್ತೇವೆ. ಸರ್ಕಾರಕ್ಕೆ ಮಸೀದಿಗಳ ಆಜಾನ್ ನಿಲ್ಲಿಸುವ ತಾಕತ್ ಇಲ್ಲ. ಆಜಾನ್ ನಿಲ್ಲಿಸದಿದ್ರೆ ದೇವಾಲಯಗಳಲ್ಲಿ ಸ್ಪೀಕರ್‌ ಹಾಕ್ತೇವೆ. ರಾಮ ಭಜನೆ, ಶಿವನಾಮ, ಓಂಕಾರಗಳನ್ನೂ ಹಾಕುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ

ಬೈಕ್​ನಲ್ಲಿ ತ್ರಿಬಲ್ ರೈಡ್; ಅಪಘಾತ ಸಂಭವಿಸಿ SSLC ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ಸಾವು

Ravindra Jadeja: ಸೋಲಿನ ಬಳಿಕ ದುಃಖದಿಂದ ಆತ ತಂಡದಲ್ಲಿ ಇರಬೇಕಿತ್ತು ಎಂದ ಜಡೇಜಾ: ಯಾರು ಗೊತ್ತೇ?

Published On - 11:26 am, Mon, 4 April 22

ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ನಾಗವಲ್ಲಿ ಮಿಂಚು ರಾಧಿಕಾ ಕಣ್ಣಲ್ಲಿ ಕಾಣಿಸಿತು: ರಮೇಶ್ ಅರವಿಂದ್
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಬಿಹಾರದಲ್ಲಿ ಪ್ರವಾಹ ಭೀತಿ; ನೂರಾರು ಹಳ್ಳಿಗಳಿಗೆ ನುಗ್ಗಿದ ಗಂಗಾ ನದಿ ನೀರು
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಹಾಡಹಗಲೇ ಮೆಡಿಕಲ್ ಶಾಪ್​ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ಇದ್ದಕ್ಕಿದ್ದಂತೆ ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ 6 ಅಡಿ ಉದ್ದದ ಹಾವು ಪ್ರತ್ಯ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ರಾಮನಗರದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿಗೆ ಕೌಂಟರ್ ಕೊಟ್ಟ ಡಿಕೆಶಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಫ್ಲೈಓವರ್ ಪಿಲ್ಲರ್ ಮೇಲೆ ಸಿಲುಕಿದ ಯುವತಿ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬೀದರ್​​ನ ಐತಿಹಾಸಿಕ ಕೋಟೆ ಆವರಣದಲ್ಲಿ ಏರ್ ಶೋ ಪ್ರದರ್ಶನ
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ