AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೈಕ್​ನಲ್ಲಿ ತ್ರಿಬಲ್ ರೈಡ್; ಅಪಘಾತ ಸಂಭವಿಸಿ SSLC ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ಸಾವು

ಡಾ. ರಾಜೇಂದ್ರ ಪ್ರಸಾದ್ ಹೈಸ್ಕೂಲ್ ವಿದ್ಯಾರ್ಥಿಗಳು ಅಪಘಾತಕ್ಕೆ ಸಿಲುಕಿದ್ದಾರೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಅಮೃತ್ತೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಮೃತರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಬೈಕ್​ನಲ್ಲಿ ತ್ರಿಬಲ್ ರೈಡ್; ಅಪಘಾತ ಸಂಭವಿಸಿ SSLC ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ಸಾವು
ಸಾಂಕೇತಿಕ ಚಿತ್ರ
TV9 Web
| Edited By: |

Updated on:Apr 04, 2022 | 11:15 AM

Share

ತುಮಕೂರು: ಬೈಕ್​ನಲ್ಲಿ ತ್ರಿಬಲ್ ರೈಡ್ ಹೋಗಿ ಅಪಘಾತಕ್ಕೆ ಸಿಲುಕಿ ವಿದ್ಯಾರ್ಥಿ ಸಾವನ್ನಪ್ಪಿದ ದುರ್ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ಜಿನ್ನಾಗರ ಗ್ರಾಮದ ಬಳಿ ಸಂಭವಿಸಿದೆ. ತ್ರಿಬಲ್ ರೈಡ್​ಗೆ ಹತ್ತನೇ ತರಗತಿಯ ಪರೀಕ್ಷೆ ಬರೆಯಲು ತೆರಳುತ್ತಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಒಂದೇ ಬೈಕ್​ನಲ್ಲಿ ಪರೀಕ್ಷೆ ಬರೆಯಲು ಮೂವರು ವಿದ್ಯಾರ್ಥಿಗಳು ತೆರಳುತ್ತಿದ್ದರು. ಈ ವೇಳೆ, ನವೀನ್ (16) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೈಕ್ ನಲ್ಲಿ ಇದ್ದ ಶರತ್, ದರ್ಶನ್​ಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇಂದು (ಏಪ್ರಿಲ್ 4) ನಡೆಯುತ್ತಿದ್ದ ಗಣಿತ ಪರೀಕ್ಷೆ ಬರೆಯಲು ಅಮೃತೂರಿಗೆ ಮೂವರು ವಿದ್ಯಾರ್ಥಿಗಳು ತೆರಳುತ್ತಿದ್ದರು. ಈ ವೇಳೆ, ಬೈಕ್‌ ನಿಯಂತ್ರಣ ತಪ್ಪಿ ಡಿವೈಡರ್​ಗೆ ಡಿಕ್ಕಿಯಾಗಿ ಘಟನೆ ಸಂಭವಿಸಿದೆ. ಡಾ. ರಾಜೇಂದ್ರ ಪ್ರಸಾದ್ ಹೈಸ್ಕೂಲ್ ವಿದ್ಯಾರ್ಥಿಗಳು ಅಪಘಾತಕ್ಕೆ ಸಿಲುಕಿದ್ದಾರೆ. ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಮೃತಪಟ್ಟಿದ್ದಾರೆ. ಅಮೃತ್ತೂರು ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಅಮೃತರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ಇಂದು (ಸೋಮವಾರ) ಎಸ್‌ಎಸ್‌ಎಲ್‌ಸಿ ಗಣಿತ, ಸಮಾಜಶಾಸ್ತ್ರ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರ ವರೆಗೆ ಪರೀಕ್ಷೆ ನಡೆಯಲಿದೆ. ಏಪ್ರಿಲ್ 11ರ ವರೆಗೆ SSLC ಪರೀಕ್ಷೆ ನಡೆಯಲಿದೆ. 8 ಲಕ್ಷದ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. 3,444 ಪರೀಕ್ಷಾ ಕೇಂದ್ರ, 45 ಸಾವಿರಕ್ಕೂ ಅಧಿಕ ಕೊಠಡಿಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಯ ಪ್ರವೇಶ ತೋರಿಸಿದ್ರೆ ಬಸ್​ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲು ಇರಲಿದೆ.

ಇತ್ತ ಬೆಂಗಳೂರಿನಲ್ಲಿ ತಂದೆ ಸಾವಿನ ನೋವಿನಲ್ಲೂ SSLC ಪರೀಕ್ಷೆಗೆ ವಿದ್ಯಾರ್ಥಿನಿ ಬಿ. ವೈಷ್ಣವಿ ಎಂಬವರು ಹಾಜರಾಗಿದ್ದಾರೆ. ತಂದೆ ಮೃತಪಟ್ಟಿದ್ದರೂ ಪರೀಕ್ಷೆ ತಪ್ಪಿಸದೆ ಹಾಜರಾಗಿದ್ದಾರೆ. ನಗರದ ಹತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಎಂಬವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೂ ಪರೀಕ್ಷೆಗೆ ಹಾಜರಾಗಿದ್ದಾರೆ. ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್​ನಲ್ಲಿ ಗಣಿತ ಪರೀಕ್ಷೆ ಬರೆದ ನಂತರ ತಂದೆಯ ಅಂತ್ಯ ಸಂಸ್ಕಾರದಲ್ಲಿ ವಿದ್ಯಾರ್ಥಿನಿ ಬಿ. ವೈಷ್ಣವಿ ಭಾಗಿ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಇಂದು (ಏಪ್ರಿಲ್ 4) ಗಣಿತ ಪರೀಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿದ್ದಾರೆ.

ಇದನ್ನೂ ಓದಿ: ತಂದೆ ಸಾವಿನ ನೋವಲ್ಲೂ SSLC ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿನಿ; ಪರೀಕ್ಷೆ ನಂತರ ತಂದೆಯ ಅಂತ್ಯಕ್ರಿಯೆ

ಇದನ್ನೂ ಓದಿ: KSRTC ಬಸ್ ಪಾಸ್ ಅವಧಿ ಮುಕ್ತಾಯವಾಗಿದ್ದ ಹಿನ್ನೆಲೆ; ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ನಡುದಾರಿಯಲ್ಲಿ ಬಿಟ್ಟ ಸಿಬ್ಬಂದಿ

Published On - 11:14 am, Mon, 4 April 22

Follow Us
TV9 Web
TV9 Web

TV9 Kannada

Read More
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ
ತೀವ್ರಗೊಂಡ ಕಬ್ಬು ಬೆಳೆಗಾರರ ಹೋರಾಟ: ಹಿಂಡಲಗಾ ಜೈಲ್ ಭರೋ ಚಳವಳಿ ಆರಂಭ
ಮುರಸು ಚಂಡಮಾರುತದ ಎಫೆಕ್ಟ್​​: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ
ಮುರಸು ಚಂಡಮಾರುತದ ಎಫೆಕ್ಟ್​​: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ದರ ಏರಿಕೆ ಎಫೆಕ್ಟ್​: ನವ ದಂಪತಿಗೆ ಹಾಲು ಮೊಸರು ಗಿಫ್ಟ್
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ
ಹೆಲಿಕಾಪ್ಟರ್​ಗಳಲ್ಲಿ ಎರಡು ಪೈಲಟ್ಗಳು ಕಡ್ಡಾಯ
ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕ್ಯಾಪ್ಟನ್ ಜಗದೀಶ್ ನಿರ್ಧಾರ
ಬಿಗ್ ಬಾಸ್ ಮನೆಯಲ್ಲಿ ಕೋಲಾಹಲಕ್ಕೆ ಕಾರಣವಾದ ಕ್ಯಾಪ್ಟನ್ ಜಗದೀಶ್ ನಿರ್ಧಾರ
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ವಿಎ ಪರೀಕ್ಷೆಯಲ್ಲಿ ಅಕ್ರಮ: ಶಂಕರ್ ಬನ್ನೂರು ವಿರುದ್ಧ ಎಫ್​ಐಆರ್​​
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!
ಸಿಎಂ ಡಿಕೆ ಶಿವಕುಮಾರ್ ಭೇಟಿಗೆ ಆಗಮಿಸಿದ ಸಂಸದ ಬಸವರಾಜ ಬೊಮ್ಮಾಯಿ!
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಅರುಣ್ ಸಾಳುಂಕೆ ಮೃತದೇಹದ ಮುಂದೆ ಬಿಕ್ಕಿ ಬಿಕ್ಕಿ ಅತ್ತ ಮಗಳು
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಕಾಫಿ, ಟೀ ಬೆಲೆ ಹೆಚ್ಚಳ: ಸರ್ಕಾರದ ವಿರುದ್ಧ ಆಕ್ರೋಶ, ಜನ ಏನಂತಾರೆ ನೋಡಿ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ
ಸ್ಟಿಂಗ್ ಆಪರೇಷನ್ ಪ್ರಕರಣ: ಕುಮಾರಸ್ವಾಮಿ ದೆಹಲಿ ನಿವಾಸ ಪರಿಶೀಲನೆ ಸಾಧ್ಯತೆ