KSRTC ಬಸ್ ಪಾಸ್ ಅವಧಿ ಮುಕ್ತಾಯವಾಗಿದ್ದ ಹಿನ್ನೆಲೆ; ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ನಡುದಾರಿಯಲ್ಲಿ ಬಿಟ್ಟ ಸಿಬ್ಬಂದಿ

ಜಿಲ್ಲಾ‌ ಮಕ್ಕಳ ಸಹಾಯವಾಣಿ ಸಂಯೋಜಕ ಕೇಶವ ತೋಳಬಂದಿಯಿಂದ ವಿದ್ಯಾರ್ಥಿಗಳಿಗೆ ಆಟೋ ವ್ಯವಸ್ಥೆ ಮಾಡಲಾಗಿದೆ. ಆಟೋದಲ್ಲಿ‌ ಆಗಮಿಸಿ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ‌ಹಾಜರಾಗಿದ್ದಾರೆ.

KSRTC ಬಸ್ ಪಾಸ್ ಅವಧಿ ಮುಕ್ತಾಯವಾಗಿದ್ದ ಹಿನ್ನೆಲೆ; ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ನಡುದಾರಿಯಲ್ಲಿ ಬಿಟ್ಟ ಸಿಬ್ಬಂದಿ
ವಿದ್ಯಾರ್ಥಿಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 01, 2022 | 12:09 PM

ವಿಜಯಪುರ: ವಿದ್ಯಾರ್ಥಿಗಳ ಬಸ್ ಪಾಸ್ (Bus Pass) ಅವಧಿ ಮುಕ್ತಾಯವಾಗಿದೆ ಎಂದು ಪರೀಕ್ಷಾರ್ಥಿಗಳನ್ನು‌ ಬಸ್‌ ನಿರ್ವಾಹಕ ನಡು ದಾರಿಯಲ್ಲಿ‌ ಬಸ್‌‌ನಿಂದ ಕೆಳಗಿಳಿಸಿರುವಂತಹ ಘಟನೆ ನಡೆದಿದೆ. ಪಿಯುಸಿ ಪ್ರಥಮ ವರ್ಷದ ಪರೀಕ್ಷೆಗೆ ಹಾಜರಾಗಲು ಆಗಮಿಸುತ್ತಿದ್ದ ವಿದ್ಯಾರ್ಥಿಗಳನ್ನು ನಡು‌ ರಸ್ತೆಯಲ್ಲಿ ಇಳಿಸಲಾಗಿದೆ. ವಿಜಯಪುರ ಜಿಲ್ಲೆ ಬಸವಬಾಗೇವಾಡಿ ತಾಲೂಕಿನ‌ ಉತ್ನಾಳ್ ಕ್ರಾಸ್ ಬಳಿ ಘಟನೆ ನಡೆದಿದ್ದು, ಕೆಎ 28 ಎಫ್ 2422 ನಂಬರ್​ನ ಸರ್ಕಾರಿ ಬಸ್ ಇದಾಗಿದೆ. ಮುದ್ದೇಬಿಹಾಳ ಪಟ್ಟಣದಿಂದ ವಿಜಯಪುರಕ್ಕೆ ಆಗಮಿಸುತ್ತಿದ್ದ ಸರ್ಕಾರಿ ‌ಬಸ್, ಮನಗೂಳಿಯಲ್ಲಿ ಬಸ್ ಹತ್ತಿದ್ದ ಏಳು ಪ್ರಥಮ ಪಿಯುಸಿ ಪರೀಕ್ಷಾರ್ಥಿಗಳು. ವಿದ್ಯಾರ್ಥಿಗಳ ಬಸ್ ಪಾಸ್ ಅವಧಿ ಮುಕ್ತಾಯವಾಗಿದೆ‌ ಎಂದು ಬಸ್‌ನಿಂದ ಕಂಡಕ್ಟರ್ ಕೆಳಗಿಳಿಸಿದ್ದಾರೆ. ನಡುರಸ್ತೆಯಲ್ಲಿ ಇಳಿಸಿದ ಕಾರಣ ಮಕ್ಕಳ ಸಹಾಯವಾಣಿಗೆ ವಿದ್ಯಾರ್ಥಿಗಳು ಕರೆ ಮಾಡಿದ್ದು, ಜಿಲ್ಲಾ‌ ಮಕ್ಕಳ ಸಹಾಯವಾಣಿ ಸಂಯೋಜಕ ಕೇಶವ ತೋಳಬಂದಿಯಿಂದ ವಿದ್ಯಾರ್ಥಿಗಳಿಗೆ ಆಟೋ ವ್ಯವಸ್ಥೆ ಮಾಡಲಾಗಿದೆ. ಆಟೋದಲ್ಲಿ‌ ಆಗಮಿಸಿ ಪಿಯುಸಿ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ‌ಹಾಜರಾಗಿದ್ದಾರೆ. ಬಸ್‌ ನಿರ್ವಾಹಕನ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯ ಕೂಡ ಮಾಡಲಾಗಿದೆ.

ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಬ್ ಇನ್ಸ್ ಪೆಕ್ಟರ್​​ ಮತ್ತು ಪಾದಚಾರಿ ಸಾವು:

ಬೆಂಗಳೂರು: ರಾತ್ರಿ ಗಸ್ತಿನಲ್ಲಿದ್ದ ಸಿಆರ್ ಪಿಎಫ್ ಸಬ್ ಇನ್ಸ್ ಪೆಕ್ಟರ್​​ಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ನಗರದ ಯಲಹಂಕದಲ್ಲಿ ಕಳೆದ ತಿಂಗಳ ೩೦ನೇ ತಾರೀಖು ಘಟನೆ ನಡೆದಿದೆ. ಘಟನೆಗೆ ಕಾರಣವಾದ ಬೇಜವಾಬ್ದಾರಿ ಬೈಕ್ ಚಾಲಕ ವಿದೇಶಿ ವಿದ್ಯಾರ್ಥಿ ಸಹ ಸಾವನ್ನಪ್ಪಿದ್ದಾನೆ. ಘಟನೆಯ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿಆರ್ ಪಿಎಫ್ ಸಬ್ ಇನ್ಸ್ ಪೆಕ್ಟರ್ ಸ್ವಾಮಿಗೌಡ(೫೪), ವಿದೇಶಿ ವಿದ್ಯಾರ್ಥಿ ಅಮ್ಮರ್ ಸುಲೇಹಾ(೨೨) ಮೃತ ವ್ಯಕ್ತಿಗಳು. ಮಧ್ಯರಾತ್ರಿ ೧೧:೩೦ರ ಸುಮಾರಿಗೆ ಬೈಕ್​ನಲ್ಲಿ ತೆರಳುತಿದ್ದ ವಿದೇಶಿ ಪ್ರಜೆ, ಯಮನ್ ದೇಶದ ಅಮ್ಮರ್ ಬೈಕ್ ನಲ್ಲಿ ಬರುತಿದ್ದ. ಈ ವೇಳೆ ಗಸ್ತು ತಿರುಗುತಿದ್ದ ಸಬ್ ಇನ್ಸ್ ಪೆಕ್ಟರ್ ಸ್ವಾಮಿಗೌಡ. ಕ್ಯಾಂಪಸ್​ನ ಪೂರ್ವ ಪ್ರವೇಶ ದ್ವಾರದ ಎದುರು ನಡೆದುಕೊಂಡು ಹೊಗುತಿದ್ದರು. ಈ ವೇಳೆ ವೇಗವಾಗಿ ಬಂದ ಬೈಕ್ ಚಾಲಕ ನಿಯಂತ್ರಣ ಕಳೆದು ಕೊಂಡಿದ್ದಾನೆ. ಬಳಿಕ ಸಬ್ ಇನ್ಸ್ ಪೆಕ್ಟರ್​ಗೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಪಾದಚಾರಿಗಳಿಗಿಬ್ಬರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಿ ಯತ್ನಿಸಿದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:

ಅಧಿಕಾರಿಗಳ ಮಾತಿಗೂ ಕೇರ್ ಮಾಡದೇ ಕದ್ದು ಬಾಲ್ಯ ವಿವಾಹ; ತಾಳಿ ಕಳಚಿ ಪರೀಕ್ಷೆಗೆ ಕಳುಹಿಸಿದ ಪೋಷಕರು