GetCETGo: ಜೆಇಇ, ನೀಟ್, ಸಿಇಟಿಗಳಿಗೆ ಉಚಿತ ನೆರವು ನೀಡುವ ‘ಗೆಟ್ ಸೆಟ್ ಗೋ’ಗೆ ಚಾಲನೆ: ಪ್ರಯೋಜನ ಪಡೆಯೋದು ಹೇಗೆ?

Dr CN Ashwathnarayan: ಜೆಇಇ (JEE), ನೀಟ್ (NEET), ಸಿಇಟಿ (CET)ಯಂತಹ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲಿರುವ ಇಂಜಿನಿಯರಿಂಗ್, ವೈದ್ಯಕೀಯ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ನೆರವು ನೀಡುವ 3ನೇ ವರ್ಷದ #GetCETgo (ಗೆಟ್​​ಸೆಟ್​ಗೋ) ಆನ್ಲೈನ್ ಕಾರ್ಯಕ್ರಮಕ್ಕೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಚಾಲನೆ ನೀಡಿದ್ದಾರೆ. ಏನಿದು ಕಾರ್ಯಕ್ರಮ? ಇಲ್ಲಿದೆ ಮಾಹಿತಿ.

GetCETGo: ಜೆಇಇ, ನೀಟ್, ಸಿಇಟಿಗಳಿಗೆ ಉಚಿತ ನೆರವು ನೀಡುವ ‘ಗೆಟ್ ಸೆಟ್ ಗೋ’ಗೆ ಚಾಲನೆ: ಪ್ರಯೋಜನ ಪಡೆಯೋದು ಹೇಗೆ?
‘ಗೆಟ್​ಸೆಟ್​ಗೋ’ಗೆ ಚಾಲನೆ ನೀಡಿದ ಸಚಿವ ಡಾ.ಸಿ.ಎನ್​.ಅಶ್ವತ್ಥನಾರಾಯಣ್ (ಬಲ ಚಿತ್ರ)​
Follow us
TV9 Web
| Updated By: shivaprasad.hs

Updated on: Mar 31, 2022 | 3:14 PM

ಜೆಇಇ (JEE), ನೀಟ್ (NEET), ಸಿಇಟಿ (CET)ಯಂತಹ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಲಿರುವ ಇಂಜಿನಿಯರಿಂಗ್, ವೈದ್ಯಕೀಯ ಆಸಕ್ತ ವಿದ್ಯಾರ್ಥಿಗಳಿಗೆ ಉಚಿತ ನೆರವು ನೀಡುವ 3ನೇ ವರ್ಷದ #GetCETgo (ಗೆಟ್​​ಸೆಟ್​ಗೋ) ಆನ್ಲೈನ್ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಗಿದೆ. ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳು `ಡಿಜಿಲರ್ನ್’ ಎಡುಟೆಕ್ ಸಂಸ್ಥೆಯ ಜತೆಗೂಡಿ ರೂಪಿಸಿರುವ ಈ ವಿದ್ಯಾರ್ಥಿಸ್ನೇಹಿ ಉಪಕ್ರಮದ ಲಾಭವು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಥಮ ಪಿಯುಸಿಯಿಂದಲೇ ಸಿಗುವಂತೆ ಮಾಡಲಾಗುವುದು. ಈ ಸಂಬಂಧ ಕಂಪನಿಯೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದಿದ್ದಾರೆ. getcetgo.in ಜಾಲತಾಣದ ಜತೆ ಆ್ಯಪ್ ಮೂಲಕವೂ ಈ ಪ್ರಯೋಜನ ಪಡೆಯಬಹುದಾಗಿದ್ದು, ಗೂಗಲ್ ಪ್ಲೇಸ್ಟೋರಿನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು ಹಾಗೂ ಯೂಟ್ಯೂಬ್ ಮೂಲಕವೂ ಇದರ ವಿಡಿಯೋಗಳನ್ನು ವೀಕ್ಷಿಸಬಹುದು.

ಗೆಟ್​​ಸೆಟ್​ಗೋ ಬಗ್ಗೆ ಡಾ.ಸಿ.ಎನ್.ಅಶ್ವತ್ಥನಾರಾಯಣ ಟ್ವೀಟ್:

ಏನಿದು ಗೆಟ್​ಸೆಟ್​ಗೋ?

ಗೆಟ್​ಸೆಟ್​ಗೋ ವೇದಿಕೆಯು ಪರಿಣಾಮಕಾರಿ ಕಲಿಕೆಯನ್ನು ವಿದ್ಯಾರ್ಥಿಗಳಿಗೆ ಸುಲಭಗೊಳಿಸಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ. ಸಾಕ್ಷಿಯೆಂಬಂತೆ ಕಳೆದ 2 ವರ್ಷದಲ್ಲಿ 3.50 ಲಕ್ಷಕ್ಕೂ ಹೆಚ್ಚು ಲಾಗಿನ್ ಕಂಡಿದೆ.

ಈ ಜಾಲತಾಣದಲ್ಲಿ ವಿದ್ಯಾರ್ಥಿಗಳು ತಮ್ಮ ಹೆಸರನ್ನು ಒಮ್ಮೆ ನೋಂದಾಯಿಸಿಕೊಂಡರೆ ಓದಿನ ಪುನರ್ಮನನಕ್ಕೆ ನೆರವಾಗುವ ವಿಡಿಯೋ, ಸಾರರೂಪದ ಪಿಪಿಟಿ, ಅಭ್ಯಾಸ ಪ್ರಶ್ನೆ, ಅಧ್ಯಾಯವಾರು ಪರೀಕ್ಷೆ, ಅಣಕು ಪರೀಕ್ಷೆ, ಎಲ್ಲವೂ ಉಚಿತವಾಗಿ ಸಿಗುತ್ತವೆ. ವಿದ್ಯಾರ್ಥಿಗಳು ಇಲ್ಲಿ ಪರೀಕ್ಷೆ ಎದುರಿಸಿ, ತಮ್ಮ ಅಂಕ, ಸ್ಥಾನಗಳನ್ನು ತಿಳಿದುಕೊಳ್ಳಬಹುದಾಗಿದೆ.

ಎರಡು ವರ್ಷಗಳ ಹಿಂದೆ ಕರೋನಾ ಕಾಣಿಸಿಕೊಂಡಾಗ ಈ ಉಪಕ್ರಮ ಆರಂಭಿಸಲಾಯಿತು. ಈಗ ಭೌತಿಕ ತರಗತಿಗಳು ನಡೆಯುತ್ತಿದ್ದರೂ ಈ ನೆರವನ್ನು ವಿಸ್ತರಿಸಲಾಗುತ್ತಿದ್ದು, ಆನ್‌ಲೈನ್ ಕಲಿಕೆ ವರದಾನವಾಗಿದೆ. ಇದರಿಂದಾಗಿ ರಾಜ್ಯದ ಹೆಚ್ಚಿನ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಅಧ್ಯಯನಕ್ಕೆ ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುವುದು ಸಾಧ್ಯವಾಗಿದೆ ಎಂದು ಸಚಿವರು ನುಡಿದಿದ್ದಾರೆ

‘ಗೆಟ್​ ಸೆಟ್ ​ಗೋ’ ಪ್ರಯೋಜನ ಪಡೆಯೋದು ಹೇಗೆ?

ಈ ಉಪಕ್ರಮದ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ಮಾಡಬೇಕಿರುವುದು ಇಷ್ಟೇ. ಗೆಟ್​ ಸೆಟ್ ಗೋ ವೆಬ್​ಸೈಟ್ (getcetgo.in) ಅಥವಾ ಗೂಗಲ್ ಪ್ಲೇಸ್ಟೋರ್​ನಲ್ಲಿ ಆಪ್ ಡೌನ್​ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ಲಾಗ್​ಇನ್ ಆದರೆ ನೀವು ಆನ್​ಲೈನ್​ನಲ್ಲಿ ಉಚಿತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: Indian Navy Recruitment 2022: ಪಿಯುಸಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿದೆ ಉದ್ಯೋಗಾವಕಾಶ

India Post Recruitment 2022: 10ನೇ ತರಗತಿ ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಉದ್ಯೋಗಾವಕಾಶ