ಅಧಿಕಾರಿಗಳ ಮಾತಿಗೂ ಕೇರ್ ಮಾಡದೇ ಕದ್ದು ಬಾಲ್ಯ ವಿವಾಹ; ತಾಳಿ ಕಳಚಿ ಪರೀಕ್ಷೆಗೆ ಕಳುಹಿಸಿದ ಪೋಷಕರು
ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ನಗರದ ಎಂ.ಎಸ್.ಕೆ.ಮಿಲ್ನ ಮೌಲಾಲಿ ಕಟ್ಟಿಯಲ್ಲಿ ಘಟನೆ ಸಂಭವಿಸಿದ್ದು, ನಗರದ ಸಮತಾ ಕಾಲೋನಿ ನಿವಾಸಿಯಾದ ಸೋಹೆಲ್ ಹುಸೇನ್ (20) ಕೊಲೆಯಾದ ದುರ್ದೈವಿ.
ಮಂಡ್ಯ: ಬಾಲ್ಯ ವಿವಾಹ (Child Marriage) ಮಾಡಿದ್ರು, ತಾಳಿ ಕಳಚಿ ಪರೀಕ್ಷೆಗೆ ಕಳುಹಿಸಿರುವಂತಹ ಘಟನೆ ನಡೆದಿದೆ. ಜಿಲ್ಲೆಯ ಗ್ರಾಮವೊಂದರಲ್ಲಿ ಘಟನೆ ನಡೆದಿದ್ದು, ಮಾರ್ಚ್ 27 ರಂದು ಮನೆಯಲ್ಲೇ ಗುಟ್ಟಾಗಿ SSLC ಬಾಲಕಿಗೆ ಮದುವೆ ಮಾಡಲಾಗಿದೆ. ಕೆ.ಆರ್.ಪೇಟೆ ತಾಲೂಕಿನ ಸಂಬಂಧಿ ಯುವಕನೊಂದಿಗೆ ಮದುವೆ ಮಾಡಲಾಗಿದ್ದು, 28ರಂದು ತಾಳಿ, ಕಾಲುಂಗುರ ಬಿಚ್ಚಿಸಿಕೊಂಡು ಪರೀಕ್ಷೆ ಬರೆಯಲು ಪೋಷಕರು ಕಳುಹಿಸಿದ್ದಾರೆ. ಪರೀಕ್ಷೆ ಬರೆಯಲು ಹೋದಾಗ ಸ್ನೇಹಿತೆಯರ ಜೊತೆ ಮದುವೆ ಬಗ್ಗೆ ಹೇಳಿಕೊಂಡಿದ್ದ ಸಂತ್ರಸ್ತೆ, ಮಾಹಿತಿ ಬಹಿರಂಗಗೊಂಡ ಬಳಿಕ ಅಧಿಕಾರಿಗಳಿಂದ ಬಾಲಕಿ ರಕ್ಷಣೆ ಮಾಡಲಾಗಿದೆ. ಸದ್ಯ ಮಂಡ್ಯದ ಬಾಲ ಮಂದಿರದಲ್ಲಿರುವ ಸಂತ್ರಸ್ತ ಬಾಲಕಿ ಇದ್ದು, ಬಾಲ್ಯ ವಿವಾಹ ಮಾಡಿದವರ ವಿರುದ್ಧ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಂದ ಪೊಲೀಸರಿಗೆ ದೂರು ನೀಡಲಾಗಿದೆ. ಮದುವೆ ನಿಶ್ಚಯವಾಗಿದ್ದಾಗಲೇ ಅಧಿಕಾರಿಗಳು ಎಚ್ಚರಿಕೆ ನೀಡಿದ್ದು, ಬಾಲ್ಯ ವಿವಾಹ ಮಾಡುತ್ತಿರುವ ಬಗ್ಗೆ ಕಂಪ್ಲೇಂಟ್ ಬಂದ ಹಿನ್ನೆಲೆಯಲ್ಲಿ ಮಾರ್ಚ್ 18 ಮತ್ತು 25 ರಂದು ಬಾಲಕಿಯ ಮನೆಗೆ ಭೇಟಿ ನೀಡಿ ಅಧಿಕಾರಿಗಳು ವಾರ್ನಿಂಗ್ ಮಾಡಿದ್ದರು. ಅಧಿಕಾರಿಗಳು ಎಚ್ಚರಿಕೆ ಹಾಗೂ ಬುದ್ದಿ ಮಾತಿಗೂ ಕೇರ್ ಮಾಡದೇ 27ರಂದು ಕದ್ದು ವಿವಾಹ ಮಾಡಲಾಗಿದೆ.
ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಕೊಲೆ:
ಕಲಬುರಗಿ: ಮಾರಕಾಸ್ತ್ರದಿಂದ ಇರಿದು ಯುವಕನ ಬರ್ಬರ ಕೊಲೆ ಮಾಡಿರುವಂತಹ ಘಟನೆ ನಡೆದಿದೆ. ನಗರದ ಎಂ.ಎಸ್.ಕೆ.ಮಿಲ್ನ ಮೌಲಾಲಿ ಕಟ್ಟಿಯಲ್ಲಿ ಘಟನೆ ಸಂಭವಿಸಿದ್ದು, ನಗರದ ಸಮತಾ ಕಾಲೋನಿ ನಿವಾಸಿಯಾದ ಸೋಹೆಲ್ ಹುಸೇನ್ (20) ಕೊಲೆಯಾದ ದುರ್ದೈವಿ. ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಸೋಹೆಲ್, ಕಳೆದ ರಾತ್ರಿ ಊಟಕ್ಕೆಂದು ಹೋಟೆಲ್ಗೆ ಹೋಗಿದ್ದ. ಹೋಟೆಲ್ ಬಳಿಯೇ ಮಾರಕಾಸ್ತ್ರದಿಂದ ಇರಿದು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲಾ. ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶೂ ಒಳಗಡೆ ಅವಿತು ಕುಳಿತ ನಾಗರಹಾವು:
ಎಲೆಕ್ಟ್ರಾನಿಕ್ ಸಿಟಿ: ಶೂ ಒಳಗಡೆ ವಿಷ ಸರ್ಪ ಅವಿತಿದ್ದು, ಶೂ ಹಾಕೋ ವೇಳೆ ಮನೆ ಮಾಲಿಕ ಜಸ್ಟ್ ಮಿಸ್ ಆಗಿದ್ದಾರೆ. ಮೂರು ಅಂತಸ್ತು ಏರಿ ನಾಲ್ಕಡಿ ನಾಗರಹಾವು ಶೂ ಒಳಗೆ ನುಗ್ಗಿದೆ. ಬಾಗಿಲ ಹೊರಗಡೆ ಬಿಡಲಾಗಿದ್ದ ಶೂಸ್ನಲ್ಲಿ ನುಗಿದ್ದು, ಕೆಲಸಕ್ಕೆ ಹೋಗಲು ಶೂ ಹಾಕಲು ಮುಂದಾಗಿದ್ದಾರೆ. ಕಾಲಿಗೆ ಶೂ ತಾಕಿದಾಗ ನಾಗರ ಹಾವು ಬುಸುಗುಟ್ಟಿದೆ. ತಕ್ಷಣ ಶೂ ಬಿಟ್ಟು ಮನೆ ಮಾಲಿಕ ನಾಗರಾಜ್ ಓಡಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಕಮ್ಮಸಂದ್ರದಲ್ಲಿ ಘಟನೆ ನಡೆದಿದ್ದು, ಉರಗ ಪ್ರೇಮಿ ಕಾರ್ತಿಕ್ ನಿಂದ ಹಾವು ರಕ್ಷಣೆ ಮಾಡಲಾಗಿದೆ. ಶೂನಿಂದ ಹಾವು ಹೊರ ತೆಗೆದ ಕಾರ್ತಿಕ್, ನಂತರ ಮನೆ ಸದಸ್ಯರು ಸಮಾಧಾನ ಗೊಂಡಿದ್ದಾರೆ. ಹಾವು ನುಗ್ಗಿದ್ದ ಶೂ ಹಾಕದೇ ಚಪ್ಪಲಿ ಹಾಕಿಕೊಂಡು ನಾಗರಾಜ್ ಕೆಲಸಕ್ಕೆ ತೆರಳಿದ್ದಾರೆ.
ತಂದೆಯಿಂದಲೇ ಮಗನ ಅಪಹರಣ:
ಮೈಸೂರು: ತಂದೆಯೇ ಮಗನನ್ನು ಅಪಹರಣ ಮಾಡಿದ ಆರೋಪ ಕೇಳಿಬಂದಿದೆ. ಹುಣಸೂರು ನಗರದ ಮಾರುತಿ ಬಡಾವಣೆಯಲ್ಲಿ ಘಟನೆ ನಡೆದಿದ್ದು, ತಂದೆ ಜಾಫರ್ ಷರೀಫ್‌ರಿಂದ ಮಗ ಯಾಸೀನ್ ಅಪಹರಣ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸುಮೇರ ಹಾಗೂ ಜಾಫರ್ ಷರೀಫ್ ದಂಪತಿ ಪುತ್ರ. ನಾಲ್ಕು ವರ್ಷಗಳ ಹಿಂದೆ ವಿಚ್ಚೇದನ ಪಡೆದಿದ್ದ ದಂಪತಿ, ಜಾಫರ್ ಷರೀಫ್ ಬೇರೆ ಇನ್ನೊಂದು ಮದುವೆಯಾಗಿ ಮೈಸೂರಿನಲ್ಲಿ ವಾಸವಿದ್ದರು. ಆದರೆ ನೆನ್ನೆ ಮನೆ ಹತ್ತಿರ ಬಂದು ಮಗ ಯಾಸೀನ್ಗೆ ಚಾಕೊಲೇಟ್ ಕೊಡಿಸುವುದಾಗಿ ಆಮಿಷ ತೋರಿಸಿ ನಂತರ ಕಾರಿನಲ್ಲಿ ಅಪಹರಣ ಮಾಡಿರುವ ಆರೋಪ ಮಾಡಲಾಗಿದೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಆಕಸ್ಮಿಕ ಬೆಂಕಿ ಅವಘಡ:
ಬೆಂಗಳೂರಿನ ಪೇಪರ್ & ಟೇಪ್ ಫ್ಯಾಕ್ಟರಿಯಲ್ಲಿ ಆಕಸ್ಮಿಕ ಅಗ್ನಿ ಸಂಭವಿಸಿದೆ. ಯಲಹಂಕ ನ್ಯೂಟೌನ್ನ ಕೈಗಾರಿಕಾ ಪ್ರದೇಶದಲ್ಲಿರುವ ಫ್ಯಾಕ್ಟರಿಲಿ ಘಟನೆ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ಇದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. 4 ಆಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸಲಾಯಿತು.
ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಆರೋಪಿ ಸೆರೆ:
ನೆಲಮಂಗಲ: ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಬೆಂಗಳೂರಿನ ಬಾಗಲಗುಂಟೆ ಪೊಲೀಸರಿಂದ ಸೆರೆ ಹಿಡಿಯಲಾಗಿದ್ದು, ದಾಸರಹಳ್ಳಿಯ ಧನುಷ್(22)ಬಂಧಿತ ಆರೋಪಿ. 2ಕೆಜಿ ಗಾಂಜಾ, 3ಸಾವಿರ ರೂಪಾಯಿ ನಗದು ಜಪ್ತಿ ಮಾಡಲಾಗಿದೆ. ಶೆಟ್ಟಿಹಳ್ಳಿ ರೈಲ್ವೆ ಗೇಟ್ ಬಳಿ ಬಲೆಗೆ ಅಸಾಮಿ ಧನುಷ್ ಬಿದಿದ್ದಾನೆ. ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ:
PAN-Aadhaar Linking: ಪ್ಯಾನ್- ಆಧಾರ್ ಜೋಡಣೆ ಆಗಿಲ್ಲವೆ? ಚಿಂತೆ ಮಾಡಬೇಡಿ, ಇನ್ನೂ ಒಂದು ಅವಕಾಶವಿದೆ