AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN-Aadhaar Linking: ಪ್ಯಾನ್- ಆಧಾರ್ ಜೋಡಣೆ ಆಗಿಲ್ಲವೆ? ಚಿಂತೆ ಮಾಡಬೇಡಿ, ಇನ್ನೂ ಒಂದು ಅವಕಾಶವಿದೆ

ಪ್ಯಾನ್-ಆಧಾರ್ ಜೋಡಣೆಯನ್ನು ಮಾರ್ಚ್ 31, 2022ರೊಳಗೆ ಮಾಡಿಲ್ಲವೆ? ಹಾಗಿದ್ದರೆ ಮಾರ್ಚ್ 31, 2023ರ ತನಕ ಅವಕಾಶ ಇದೆ. ಆದರೆ ವಿಳಂಬ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

PAN-Aadhaar Linking: ಪ್ಯಾನ್- ಆಧಾರ್ ಜೋಡಣೆ ಆಗಿಲ್ಲವೆ? ಚಿಂತೆ ಮಾಡಬೇಡಿ, ಇನ್ನೂ ಒಂದು ಅವಕಾಶವಿದೆ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Apr 01, 2022 | 11:16 AM

Share

ಪ್ಯಾನ್ (PAN) ಹಾಗೂ ಆಧಾರ್ ಜೋಡಣೆ ಮಾರ್ಚ್ 31, 2022ರೊಳಗೆ ಆಗದಿದ್ದಲ್ಲಿ ಮುಂದೆ ಪ್ಯಾನ್ ಕಾರ್ಯ ನಿರ್ವಹಿಸಲ್ಲ ಎಂದು ಆತಂಕದಲ್ಲಿ ಇದ್ದವರಿಗೆ ಕೊಂಚ ಮಟ್ಟಿಗೆ ನಿರಾಳ ಆಗುವಂಥ ಸುದ್ದಿ ಇಲ್ಲಿದೆ. ಏಪ್ರಿಲ್ 1, 2022ರಿಂದಲೇ ಪ್ಯಾನ್ ಕಾರ್ಯ ನಿರ್ವಹಣೆಯೇನೂ ನಿಲ್ಲಿಸಲ್ಲ. ಅದನ್ನೇ ಬಳಸಿ ಮಾರ್ಚ್ 31, 2023ರ ತನಕ ಹಣಕಾಸು ವಹಿವಾಟುಗಳನ್ನು ನಡೆಸಬಹುದು. ಒಂದು ವೇಳೆ ಆ ಗಡುವು ವಿಸ್ತರಣೆಯಾಗಿ ಮತ್ತೂ ಮುಂದಕ್ಕೆ ಹೋದರೂ ಅಚ್ಚರಿ ಇಲ್ಲ. ಆದರೆ ಈ ಹಿಂದೆಲ್ಲ ಆದಂತೆ ಅವಧಿ ವಿಸ್ತರಣೆ ಮಾತ್ರ ಆಗುವುದಷ್ಟೇ ಅಲ್ಲ, ಈ ವಿಸ್ತರಣೆ ಅವಧಿಯೊಳಗೆ ಜೋಡಣೆ ಮಾಡುವುದಕ್ಕೆ ಅವಕಾಶ ಸಿಗಬೇಕು ಅಂದರೆ ಶುಲ್ಕವನ್ನೂ ಪಾವತಿಸಬೇಕು. ಮಾರ್ಚ್ 30, 2022ರಂದು ಕೇಂದ್ರ ನೇರ ತೆರಿಗೆ ಮಂಡಳಿ ನೀಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಯಾವುದೇ ಪರಿಣಾಮಗಳು ಆಗದಂತೆ ಆಧಾರ್​ ಜತೆಗೆ ಪ್ಯಾನ್ ಜೋಡಣೆ ಮಾಡುವುದಕ್ಕೆ ಮಾರ್ಚ್ 31, 2023ರ ತನಕ ಒಂದು ಅವಕಾಶ ನೀಡಲಾಗುತ್ತದೆ.

ಆದಾಯ ತೆರಿಗೆ ನಿಯಮ, 1962ಕ್ಕೆ ತಂದ ತಿದ್ದುಪಡಿ ನಿಯಮಾವಳಿ ಪ್ರಕಾರ, ಪ್ಯಾನ್- ಆಧಾರ್ ಜೋಡಣೆ ಕಡ್ಡಾಯವಾಗಿದೆ. ಜುಲೈ 1, 2017ಕ್ಕೆ ಅನ್ವಯ ಆಗುವಂತೆ ಯಾರಿಗೆಲ್ಲ ಪ್ಯಾನ್ ವಿತರಿಸಲಾಗಿದೆ ಅವರೆಲ್ಲ ಆಧಾರ್ ಪಡೆಯುವುದಕ್ಕೆ ಅರ್ಹರು. ಅಂಥವರೆಲ್ಲರೂ ಪ್ಯಾನ್ ಅನ್ನು ಆಧಾರ್ ಜತೆಗೆ ಜೋಡಣೆ ಮಾಡಿ, ತಮ್ಮ ಪ್ಯಾನ್ ಸಂಖ್ಯೆ ಕಾರ್ಯ ನಿರ್ವಹಿಸುವುದನ್ನು ಖಾತ್ರಿ ಮಾಡಿಕೊಳ್ಳಬೇಕು ಮತ್ತು ಯಾವ ಪ್ರಕ್ರಿಯೆಗಳಲ್ಲಿ ಪ್ಯಾನ್​ ಅಗತ್ಯ ಇರುತ್ತದೋ ಅದು ನಿಲ್ಲುವುದಿಲ್ಲ. ಮೊದಲೇ ತಿಳಿಸಿದಂತೆ ಪ್ಯಾನ್- ಆಧಾರ್ ಜೋಡಣೆಯನ್ನು ಮಾರ್ಚ್ 31, 2022ರ ಮಧ್ಯರಾತ್ರಿಯೊಳಗೆ ಮಾಡಿ ಮುಗಿಸಿರದಿದ್ದಲ್ಲಿ ತೆರಿಗೆ ಪಾವತಿದಾರರು ಹಣಕಾಸು ವರ್ಷದ (2022-23) ಮೊದಲ ಮೂರು ತಿಂಗಳಲ್ಲಿ 500 ರೂಪಾಯಿ ವಿಳಂಬ ಶುಲ್ಕ ಪಾವತಿಸಬೇಕಾಗುತ್ತದೆ. ಅದು ಏಪ್ರಿಲ್ 1, 2022ರಿಂದ ಜೂನ್ 30ರ ತನಕ. ಇನ್ನೂ ವಿಳಂಬ ಮಾಡಿದಲ್ಲಿ, ಜುಲೈ 1, 2022ರಿಂದ ಮಾರ್ಚ್ 31, 2023ರ ಮಧ್ಯೆ ಜೋಡಣೆ ಮಾಡಿದಲ್ಲಿ ಅದಕ್ಕಾಗಿ ವಿಳಂಬ ಶುಲ್ಕ 1000 ರೂಪಾಯಿ ಪಾವತಿಸಬೇಕು.

ನಿರಾಳ ಆಗುವಂಥ ಸಂಗತಿ ಏನೆಂದರೆ, ಪ್ಯಾನ್ ಹಾಗೂ ಆಧಾರ್​ ಜೋಡಣೆ ಮಾಡಿಲ್ಲ ಎಂಬ ಸ್ಥಿತಿಯಲ್ಲಿ ಇರುವ ತೆರಿಗೆ ಪಾವತಿದಾರರಿಗೆ ತಮ್ಮ ಹೂಡಿಕೆ, ಐಟಿಆರ್ ಫೈಲಿಂಗ್, ರೀಫಂಡ್​ಗಳ ಪ್ರೊಸೆಸಿಂಗ್ ಮುಂತಾದವಕ್ಕೆ ಮಾರ್ಚ್ 31, 2023ರ ತನಕ ಏನೂ ಸಮಸ್ಯೆ ಆಗಲ್ಲ. “ಮಾರ್ಚ್ 31, 2023ರ ನಂತರ ಯಾರು ಪ್ಯಾನ್ ಹಾಗೂ ಆಧಾರ್ ಜೋಡಣೆ ಮಾಡಿರುವುದಿಲ್ಲವೋ ಅಂಥವರಿಗೆ ಕಾಯ್ದೆ ಅನ್ವಯ ಪ್ಯಾನ್ ಮಾಹಿತಿ ಒದಗಿಸದ, ನಮೂದಿಸದ ಕಾರಣಕ್ಕೆ ಏನು ಪರಿಣಾಮ ಬೀರಬೇಕೋ ಅದು ಆಗುತ್ತದೆ,” ಸಿಬಿಡಿಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: PAN- Aadhaar Linking: ಪ್ಯಾನ್-ಆಧಾರ್ ಜೋಡಣೆ ಗಡುವು; ನೀವು ತಿಳಿದಿರಬೇಕಾದ 7 ಪ್ರಮುಖ FAQಗಳು

ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ಮುಖಕ್ಕೆ ಮಾಸ್ಕ್, ಕೈಯಲ್ಲಿ ಕೋಲು: ದರೋಡೆಗೆ ಕಳ್ಳರ ಸಂಚು ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ನಟ ಝೈದ್ ಖಾನ್: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಬಿಗ್​​ಬಾಸ್ ವಿನ್ನರ್ ಗಿಲ್ಲಿಗೆ ಸಿಎಂ ಕೇಳಿದ ಪ್ರಶ್ನೆಗಳೇನು: ವಿಡಿಯೋ ನೋಡಿ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಿಯಕರನ ಜೊತೆ ಮಗಳು ಓಡಿಹೋಗಿದ್ದಕ್ಕೆ ಕಿರುಕುಳ: ಪತ್ನಿಯಿಂದಲೇ ಪತಿ ಹತ್ಯೆ
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪ್ರಾಮಾಣಿಕತೆಗೆ ಫಲ:ಸರ್ಕಾರಕ್ಕೆ ನಿಧಿ ಕೊಟ್ಟ ರಿತ್ತಿ ಕುಟುಂಬಕ್ಕೆ ಸೈಟ್​!
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ಪೂರ್ತಿ ಭಾಷಣ ಓದದೇ ನಿರ್ಗಮಿಸಿದ ರಾಜ್ಯಪಾಲರು, ಮುಂದೇನು?
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ದೋಡಾದಲ್ಲಿ ಕಂದಕಕ್ಕೆ ಉರುಳಿದ ಸೇನಾ ವಾಹನ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಮುಸ್ಲಿಂ ಯುವತಿಯೊಂದಿಗೆ ಇದ್ದ ಹಿಂದೂ ಯುವಕರು ಮೇಲೆ ಹಲ್ಲೆ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಶಿವಮೊಗ್ಗ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ
ಬಿಕೆ ಹರಿಪ್ರಸಾದ್ ಬಟ್ಟೆ ಹರಿದರಾ ಬಿಜೆಪಿಗರು? ಅಸಲಿ ಸತ್ಯ ಈ ವಿಡಿಯೋದಲ್ಲಿದೆ