GST Collection: 2022ರ ಮಾರ್ಚ್‌ನಲ್ಲಿ 1.42 ಲಕ್ಷ ಕೋಟಿ ರೂ. ಸಂಗ್ರಹದ ಮೂಲಕ ಜಿಎಸ್‌ಟಿ ಆದಾಯ ಹೊಸ ದಾಖಲೆ
2022ರ ಮಾರ್ಚ್ ತಿಂಗಳಲ್ಲಿ ಸರ್ಕಾರಕ್ಕೆ ಜಿಎಸ್‌ಟಿ ಆದಾಯವು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 1.42 ಲಕ್ಷ ಕೋಟಿ ರೂಪಾಯಿ ಬಂದಿದೆ ಎಂದು ತಿಳಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ (GST) ಸಂಗ್ರಹವು 2022ರ ಮಾರ್ಚ್‌ನಲ್ಲಿ ಹೊಸ ದಾಖಲೆಯ ಗರಿಷ್ಠ 1.42 ಲಕ್ಷ ಕೋಟಿ ರೂಪಾಯಿಗಳನ್ನು ತಲುಪಿದ್ದು, ಹಿಂದಿನ ತಿಂಗಳಿಗಿಂತ ಶೇ 6.8 ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯವು ಏಪ್ರಿಲ್ 1 ರಂದು ಬಿಡುಗಡೆ ಮಾಡಿದ ಅಂಕಿ- ಅಂಶಗಳು ತೋರಿಸಿವೆ. ಒಟ್ಟು ಕೇಂದ್ರ ಜಿಎಸ್‌ಟಿ 25,830 ಕೋಟಿ ರೂ., ರಾಜ್ಯ ಜಿಎಸ್‌ಟಿ 32,378 ಕೋಟಿ ರೂ., ಇಂಟಿಗ್ರೇಟೆಡ್ ಜಿಎಸ್‌ಟಿ 74,470 ಕೋಟಿ ಮತ್ತು ಪರಿಹಾರ ಸೆಸ್ 9,417 ಕೋಟಿ ರೂ. ಎಂದು ತಿಳಿಸಲಾಗಿದೆ. ಮಾರ್ಚ್‌ನಲ್ಲಿ ಸರ್ಕಾರವು ಇಂಟಿಗ್ರೇಟೆಡ್ ಜಿಎಸ್‌ಟಿಯಿಂದ ಕೇಂದ್ರ ಜಿಎಸ್‌ಟಿಗೆ ರೂ. 29,816 ಕೋಟಿ ಮತ್ತು ರಾಜ್ಯ ಜಿಎಸ್‌ಟಿಗೆ ರೂ. 25,032 ಕೋಟಿ ವಿಲೇವಾರಿ ಮಾಡಿದೆ. “ಅಲ್ಲದೆ, ಕೇಂದ್ರ ಮತ್ತು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು (ಕೇಂದ್ರಾಡಳಿತ ಪ್ರದೇಶಗಳು) ಮmಧ್ಯೆ 50:50 ಅನುಪಾತದಲ್ಲಿ ಈ ತಿಂಗಳಲ್ಲಿ 20,000 ಕೋಟಿ IGST ಯನ್ನು ತಾತ್ಕಾಲಿಕ ಆಧಾರದ ಮೇಲೆ ಕೇಂದ್ರವು ಇತ್ಯರ್ಥ ಮಾಡಿದೆ,” ಎಂದು ಹಣಕಾಸು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ಇದರ ಪರಿಣಾಮವಾಗಿ, ಇತ್ಯರ್ಥದ ನಂತರದ ತಿಂಗಳ ಒಟ್ಟು ಆದಾಯವು ಕೇಂದ್ರಕ್ಕೆ 65,646 ಕೋಟಿ ರೂ. ಮತ್ತು ರಾಜ್ಯ ಜಿಎಸ್‌ಟಿಗೆ 67,410 ಕೋಟಿ ರೂ. ಆಗಿದೆ. “2022ರ ಮಾರ್ಚ್ ಆದಾಯವು ಕಳೆದ ವರ್ಷದ ಅದೇ ತಿಂಗಳ ಜಿಎಸ್‌ಟಿ ಆದಾಯಕ್ಕಿಂತ ಶೇ 15ರಷ್ಟು ಹೆಚ್ಚಾಗಿದೆ ಮತ್ತು 2020ರ ಮಾರ್ಚ್ ಜಿಎಸ್‌ಟಿ ಆದಾಯಕ್ಕಿಂತ ಶೇ 46ರಷ್ಟು ಹೆಚ್ಚಾಗಿದೆ,” ಎಂದು ಹಣಕಾಸು ಸಚಿವಾಲಯ ಹೇಳಿದೆ. “2022ರ ಫೆಬ್ರವರಿಯಲ್ಲಿ ಒಟ್ಟು ಇ-ವೇ ಬಿಲ್‌ಗಳ ಸಂಖ್ಯೆ 6.91 ಕೋಟಿಯಾಗಿದ್ದು, 2022ರ ಜನವರಿಯಲ್ಲಿ ಉತ್ಪತ್ತಿಯಾದ ಇ-ವೇ ಬಿಲ್‌ಗಳಿಗೆ ಹೋಲಿಸಿದರೆ (6.88 ಕೋಟಿ) ಕಡಿಮೆ ದಿನಗಳ ತಿಂಗಳಾಗಿದ್ದರೂ ಇದು ವ್ಯಾಪಾರ ಚಟುವಟಿಕೆಯ ವೇಗದ ಚೇತರಿಕೆಯನ್ನು ಸೂಚಿಸುತ್ತದೆ,” ಎಂದು ಸೇರಿಸಲಾಗಿದೆ.
ಒಟ್ಟು ಜಿಎಸ್‌ಟಿ ಸಂಗ್ರಹದ ಟ್ರೆಂಡ್ ತಿಂಗಳ ಮೊತ್ತ (ರೂ. ಕೋಟಿಯಲ್ಲಿ) ವರ್ಷದಿಂದ ವರ್ಷಕ್ಕೆ ಆದ ಬದಲಾವಣೆ ಮಾರ್ಚ್ 2022: 1,42,095- ಶೇ 15 ಫೆಬ್ರವರಿ 2022: 1,33,026- ಶೇ 18 ಜನವರಿ 2022: 1,40,986- ಶೇ 18 ಡಿಸೆಂಬರ್ 2021: 1,29,780- ಶೇ 13 ನವೆಂಬರ್ 2021: 1,31,526- ಶೇ 25 ಅಕ್ಟೋಬರ್ 2021: 1,30,127- ಶೇ 24 ಸೆಪ್ಟೆಂಬರ್ 2021: 1,17,010- ಶೇ 23 ಆಗಸ್ಟ್ 2021: 1,12,020- ಶೇ 30 ಜುಲೈ 2021: 1,16,393- ಶೇ 33 ಜೂನ್ 2021: 92,800- ಶೇ 2
ಇದು ಸತತ ಒಂಬತ್ತನೇ ತಿಂಗಳು ಒಟ್ಟು ಜಿಎಸ್‌ಟಿ ಸಂಗ್ರಹ ಪ್ರಮಾಣ ರೂ. 1 ಲಕ್ಷ ಕೋಟಿಯ ಗಡಿ ದಾಟಿದೆ. ಹಣಕಾಸು ವರ್ಚ 2022ರಲ್ಲಿ ಒಟ್ಟಾರೆಯಾಗಿ ಜಿಎಸ್‌ಟಿ ಸಂಗ್ರಹ 14.83 ಲಕ್ಷ ಕೋಟಿ ರೂಪಾಯಿಗಳಾಗಿದ್ದು, ಹಣಕಾಸು ವರ್ಷ 2021ರಲ್ಲಿ 11.37 ಲಕ್ಷ ಕೋಟಿ ರೂಪಾಯಿಗಳಿಗಿಂತ ಶೇ 30ರಷ್ಟು ಹೆಚ್ಚಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಇದನ್ನೂ ಓದಿ: GST Filing: ಜಿಎಸ್‌ಟಿ ಮರುಪಾವತಿಗೆ ಕ್ಲೇಮ್ ಮಾಡುವುದಕ್ಕೆ ತೆರಿಗೆದಾರರ ಆಧಾರ್ ದೃಢೀಕರಣ ಕಡ್ಡಾಯಗೊಳಿಸಿದ ಸಿಬಿಐಸಿ