AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IIM-A: ವಿವಾದ ಸುಳಿಯಲ್ಲಿ ಐಐಎಂ-ಎ ಲೋಗೋ ಬದಲಾವಣೆಯ ಪ್ರಸ್ತಾವ; ಏನಿದು ಎರಡೆರಡು ಲೋಗೋ ವಿಚಾರ?

ಐಐಎಂ-ಅಹಮದಾಬಾದ್ ಶಿಕ್ಷಣ ಸಂಸ್ಥೆಯ ಲಾಂಛನ ಬದಲಾವಣೆ ವಿಚಾರವು ಈಗ ವಿವಾದವಾಗಿ ಮಾರ್ಪಟ್ಟಿದೆ. ಏನಿದು ವಿವಾದ, ಏಕಾಗಿ ಈ ಸ್ವರೂಪ ಪಡೆದಿದೆ ಎಂಬ ಮಾಹಿತಿ ಇಲ್ಲಿದೆ.

IIM-A: ವಿವಾದ ಸುಳಿಯಲ್ಲಿ ಐಐಎಂ-ಎ ಲೋಗೋ ಬದಲಾವಣೆಯ ಪ್ರಸ್ತಾವ; ಏನಿದು ಎರಡೆರಡು ಲೋಗೋ ವಿಚಾರ?
ಸಂಗ್ರಹ ಚಿತ್ರ
TV9 Web
| Edited By: |

Updated on: Apr 01, 2022 | 5:52 PM

Share

ಐಐಎಂ-ಎ (ಅಹ್ಮದಾಬಾದ್) ನಿರ್ಧಾರವೊಂದು ಈಗ ವಿವಾದಕ್ಕೆ (Controversy) ಎಡೆ ಮಾಡಿಕೊಟ್ಟಿದೆ. ಇಷ್ಟು ಸಮಯ ಈ ಸಂಸ್ಥೆಯ ಲಾಂಛನ ಸಂಸ್ಕೃತ ಶ್ಲೋಕವಾದ “ವಿದ್ಯಾವಿನಿಯೋಗದ್​ವಿಕಾಸ” ಎಂಬುದನ್ನು ಒಳಗೊಂಡಿತ್ತು. ಹೀಗಂದರೆ, ಜ್ಞಾನದ ವಿತರಣೆ ಹಾಗೂ ಅನ್ವಯಿಸುವ ಮೂಲಕ ಅಭಿವೃದ್ಧಿ ಎಂದರ್ಥ. ಇದೀಗ ಸಂಸ್ಥೆಯು ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಈಗಿರುವ ಲೋಗೋವನ್ನು ಎರಡು ಹೊಸ ಲೋಗೋ ಜತೆಗೆ ಬದಲಿಸುವುದಕ್ಕೆ ಮುಂದಾಗಿದೆ. ಅಂತಾರಾಷ್ಟ್ರೀಯ ಮಟ್ಟದ ವೀಕ್ಷಕರಿಗಾಗಿ ಒಂದು, ದೇಶೀ ವೀಕ್ಷಕರಿಗಾಗಿ ಒಂದು ಲೋಗೋ ಎಂದು ತೀರ್ಮಾನಿಸಲಾಗಿದೆ. ಈ ಐತಿಹಾಸಿಕ ಲೋಗೋ ಬದಲಿಸುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ಭಾರೀ ವಿರೋಧ ಕೇಳಿಬರುತ್ತಿದೆ. ಈ ಬಗ್ಗೆ ಐಐಎಂ-ಎ ತನ್ನ ವೆಬ್​ಸೈಟ್​ನಲ್ಲಿ ಹೇಳಿಕೆ ಸಹ ನೀಡಿದೆ. ಹಳೆಯ  ಲಾಂಛನವನ್ನು ವಿರೂಪ ಮಾಡುವುದಿಲ್ಲ. ಪ್ರಸ್ತಾವಿತ ಲಾಂಛನವು ಮೂಲದ್ದರ ಪರಂಪರೆಯನ್ನು ಮುಂದುವರಿಸುತ್ತದೆ. ಸಂಸ್ಕೃತ ಶ್ಲೋಕವನ್ನು (ವಿದ್ಯಾವಿನಿಯೋಗದ್​ವಿಕಾಸ) ಹಾಗೇ ಉಳಿಸಿಕೊಳ್ಳಲಿದೆ. ಬಣ್ಣವನ್ನು ಸುಧಾರಿಸಲಾಗುವುದು ಹಾಗೂ ಅಕ್ಷರಗಳನ್ನು ಆಧುನಿಕಗೊಳಿಸಲಾಗುವುದು ಎಂದು ಸಂಸ್ಥೆಯಿಂದ ಹೇಳಲಾಗಿದೆ. ಇದೇ ಹೇಳಿಕೆಯಲ್ಲಿ ಮತ್ತೂ ಮುಂದುವರಿದು, ಈ ವರ್ಷದ ಜೂನ್​ನಲ್ಲಿ ವಾರ್ಷಿಕ ರಜಾ ನಂತರ ಲೋಗೋ ಅನಾವರಣಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

ಸಂಸ್ಥೆಯ ಅಸ್ತಿತ್ವದಲ್ಲಿರುವ ಲೋಗೋವನ್ನು ದೇಶೀಯ ಮತ್ತು ಅಂತಾರಾಷ್ಟ್ರೀಯ ವೀಕ್ಷಕರಿಗೆ ಎರಡು ಹೊಸ ಲೋಗೋಗಳೊಂದಿಗೆ ಬದಲಾಯಿಸುವ ನಿರ್ಧಾರವನ್ನು ಐಐಎಂ-ಎ ನಿರ್ದೇಶಕ ಎರೋಲ್ ಡಿಸೋಜಾ ಸ್ವತಃ ಪ್ರಾರಂಭಿಸಿದಾಗ ಈ ವಿವಾದವು ಉತ್ತುಂಗಕ್ಕೇರಿತು. ಸಂಸ್ಥೆಯ ಅಧ್ಯಾಪಕರು ಲಾಂಛನ ಬದಲಾವಣೆಯ ಕುರಿತು ವಿಷಯ ಪ್ರಸ್ತಾಪಿಸಿ, ಆಡಳಿತ ಮಂಡಳಿಯು ಅಧ್ಯಾಪಕರೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ ಎಂದು ಪ್ರತಿಪಾದಿಸಿದರು. ಅಹಮದಾಬಾದ್‌ನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ (IIM-A) ಸುಮಾರು 48 ಪ್ರಾಧ್ಯಾಪಕರು ಲೋಗೋ ಬದಲಾವಣೆಯನ್ನು ವಿರೋಧಿಸಿ ಆಡಳಿತ ಮಂಡಳಿಗೆ ಪತ್ರ ಬರೆದಿದ್ದಾರೆ.

ಐಐಎಂ-ಎ ಮಾಜಿ ನಿರ್ದೇಶಕ ಬಕುಲ್ ಧೋಲಾಕಿಯಾ ಕೂಡ ಈ ಕ್ರಮವನ್ನು ಖಂಡಿಸಿದ್ದಾರೆ. ಲೋಗೋವು ಸಂಸ್ಕೃತ ಪದ್ಯವನ್ನು ಒಳಗೊಂಡಿದೆ ‘ವಿದ್ಯಾ ವಿನಿಯೋಗದ್​ವಿಕಾಸ’ ಅಂದರೆ ಜ್ಞಾನದ ವಿತರಣೆ ಅಥವಾ ಅನ್ವಯದ ಮೂಲಕ ಅಭಿವೃದ್ಧಿ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್-ಅಹಮದಾಬಾದ್ (IIM-A) ತನ್ನ ಅಸ್ತಿತ್ವದಲ್ಲಿರುವ ಲೋಗೋವನ್ನು ಎರಡು ಹೊಸದರೊಂದಿಗೆ ಬದಲಾಯಿಸಲು ಯೋಜಿಸುತ್ತಿದೆ, ಒಂದು ಅಂತಾರಾಷ್ಟ್ರೀಯ ವೀಕ್ಷಕರಿಗೆ ಮತ್ತು ಇನ್ನೊಂದು ದೇಶೀಯಕ್ಕಾಗಿ. ಹೊಸ ಲೋಗೋಗಳಲ್ಲಿ, ಮಸೀದಿಯ ಗ್ರಿಲ್‌ನ ಅನಿಸಿಕೆ ಇರುತ್ತದೆ, ಆದರೆ, ಇದು ಕಡಿಮೆ ಪ್ರಾಮುಖ್ಯವನ್ನು ಹೊಂದಿದೆ. ‘ವಿದ್ಯಾ ವಿನಿಯೋಗದ್​ವಿಕಾಸ’ ಎಂಬ ಸಂಸ್ಕೃತ ಶ್ಲೋಕವು ಅಂತಾರಾಷ್ಟ್ರೀಯ ಲೋಗೋದಲ್ಲಿ ಮಾತ್ರ ಇದೆ. ಐಐಎಂ-ಎ ಮಾಜಿ ನಿರ್ದೇಶಕರಾದ ಬಕುಲ್ ಧೋಲಾಕಿಯಾ ಈ ಕ್ರಮವನ್ನು ಖಂಡಿಸಿದ್ದಾರೆ ಮತ್ತು ಬದಲಾವಣೆಯ ಕುರಿತು ಆಡಳಿತ ಮಂಡಳಿಯು ಅಧ್ಯಾಪಕ ಸದಸ್ಯರೊಂದಿಗೆ ಏಕೆ ಯಾವುದೇ ಸಮಾಲೋಚನೆ ನಡೆಸಲಿಲ್ಲ ಎಂದು ಕೇಳಿದ್ದಾರೆ.

1961ರಲ್ಲಿ ಸಂಸ್ಥೆಯನ್ನು ಸ್ಥಾಪಿಸಿದ ನಂತರ ಐಐಎಂ-ಎ ಸಂಸ್ಥಾಪಕ ವಿಕ್ರಮ್ ಸಾರಾಭಾಯ್ ಅವರು ಅಂತಾರಾಷ್ಟ್ರೀಯ ದೃಷ್ಟಿಯನ್ನು ಪಡೆಯುವ ಕಲ್ಪನೆಯಿಂದ ಇದನ್ನು ರೂಪಿಸಿದರು. ಆದರೆ ಹಲವು ಲೋಗೋಗಳು ಸಂಸ್ಥೆಯ ಬ್ರ್ಯಾಂಡ್​ ಮೌಲ್ಯವನ್ನು ಕರಗುವಂತೆ ಮಾಡುತ್ತದೆ ಮತ್ತು ಐಐಎಂ-ಎ ಪ್ರಬಲ ಬ್ರಾಂಡ್ ಅನ್ನು ದುರ್ಬಲಗೊಳಿಸುತ್ತದೆ.

ಇದನ್ನೂ ಓದಿ: ದ್ವೇಷ ತುಂಬಿದ ಧ್ವನಿಗಳಿಗೆ ನಿಮ್ಮ ಮೌನ ಪ್ರೋತ್ಸಾಹ ನೀಡುತ್ತಿದೆ: ಪ್ರಧಾನಿ ಮೋದಿಗೆ ಪತ್ರ ಬರೆದ ಐಐಎಂ ವಿದ್ಯಾರ್ಥಿಗಳು, ಅಧ್ಯಾಪಕರು