ಇಸ್ಲಾಂ ಈ ಜಗತ್ತಿಗೆ ಅಂಟಿದ ಶಾಪ: ಸಂಸದ ಅನಂತಕುಮಾರ ಹೆಗಡೆ ವಿವಾದಾತ್ಮಕ ಪೋಸ್ಟ್
ಮುಸ್ಲಿಂ ನಿಯೋಗವನ್ನು ಪೇಜಾವರಶ್ರೀ ವಾಪಸ್ ಕಳಿಸಿದ್ದಾರೆ. ಪೇಜಾವರ ಶ್ರೀಗಳ ನಡೆಗೆ ಶಿರಸಾಷ್ಟಾಂಗ ಪ್ರಣಾಮಗಳು ಎಂದು ಹೆಗಡೆ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ಕಾರವಾರ: ಇಸ್ಲಾಂ ಈ ಜಗತ್ತಿಗೆ ಅಂಟಿದ ದೊಡ್ಡ ಶಾಪ ಎಂದು ಸಂಸದ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಪೋಸ್ಟ್ ಒಂದನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಮನುಷ್ಯನ ಊಹೆಗೂ ನಿಲುಕದ ಬರ್ಬರತೆ, ಹಿಂಸೆ, ಕ್ರೌರ್ಯ ಮತ್ತು ಭಯೋತ್ಪಾದನೆಯೇ ಇಸ್ಲಾಂನ ಘನ ಇತಿಹಾಸ. ಮುಸ್ಲಿಂ ನಿಯೋಗವನ್ನು ಪೇಜಾವರಶ್ರೀ ವಾಪಸ್ ಕಳಿಸಿದ್ದಾರೆ. ಪೇಜಾವರ ಶ್ರೀಗಳ ನಡೆಗೆ ಶಿರಸಾಷ್ಟಾಂಗ ಪ್ರಣಾಮಗಳು ಎಂದು ಹೆಗಡೆ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಇಂದಿನ ವಿಶ್ವಶಾಂತಿಗೆ ಇಸ್ಲಾಂನ ಪೈಶಾಚಿಕತೆಯೇ ಅತಿದೊಡ್ಡ ಅಪಾಯ ಎಂದು ಹೇಳಿರುವ ಅವರು, ಸೌಹಾರ್ದ ಬಯಸುವವರನ್ನೂ ಎಡಬಿಡಂಗಿಗಳು ಎಂದು ಟೀಕಿಸಿದ್ದಾರೆ. ಇಂಥವರನ್ನು ‘ನಿರ್ವೀರ್ಯತೆ ಅಂತ ಕರೆಯಬೇಕೊ? ಹೇಡಿತನ ಅಂತ ಕರೆಯಬೇಕೊ? ಅಥವಾ ಅವರಿಗೆ ಬಡಿದ ಮಹಾ ಮೂರ್ಖತನದ ರೋಗ ಅಂತ ಹೇಳಬೇಕೊ? ಗೊತ್ತಿಲ್ಲ’ ಎಂದು ಅನಂತಕುಮಾರ ಹೆಗಡೆ ತಮ್ಮ ಪೋಸ್ಟ್ನಲ್ಲಿ ವಿವರಿಸಿದ್ದಾರೆ.
ಪೇಜಾವರ ಶ್ರೀಗಳ ನಡೆಯನ್ನು ‘ಆತ್ಮಾಭಿಮಾನದ ಕೋಲ್ಮಿಂಚು’ ಎಂದು ಶ್ಲಾಘಿಸಿರುವ ಅವರು, ‘ಶ್ರೀಗಳು ಇಸ್ಲಾಂನ ಹುಚ್ಚಾಟಗಳನ್ನು ಬಹಿರಂಗವಾಗಿ ಖಂಡಿಸಿದ್ದಾರೆ. ಯಾವ ಮುಲಾಜೂ ಇಲ್ಲದೆ ಸತ್ಯವನ್ನು ಚಾಟಿಯಿಂದ ಹೊಡೆದ ಹಾಗೆ ಹೇಳಿದ್ದಾರೆ’ ಎಂದಿದ್ದಾರೆ.
‘ಈಗ ಉಂಟಾದ ಸಮಸ್ಯೆ ನೂರಾರು ವರ್ಷಗಳ ದೌರ್ಜನ್ಯದ ಪ್ರತಿಫಲ, ಇದಕ್ಕೆ ಮೂಲ ಕಾರಣ ಯಾರು? ಎಂದು ಶ್ರೀಗಳು ಮುಸ್ಲಿಮರಿಗೆ ಪ್ರಶ್ನೆ ಮಾಡಿದ್ದಾರೆ. ಇಂದಿಗೂ ಸಹ ಗೋಹತ್ಯೆ, ಗೋ ಸಾಗಾಣಿಕೆ ನಿಂತಿಲ್ಲ. ಮೇಲಿಂದ ಮೇಲೆ ಹಿಂದೂಗಳ ಭಾವನೆಗಳನ್ನು ಘಾಸಿ ಮಾಡಲಾಗುತ್ತಿದೆ. ಇದರಿಂದ ಇಡೀ ಹಿಂದೂ ಸಮಾಜ ನೊಂದಿದೆ. ಈಗ ಬಂದು ಸಮಸ್ಯೆ ಬಗೆಹರಿಸಿ ಎಂದರೆ ಅದು ಕೇವಲ ನನ್ನಿಂದ ಮಾತ್ರ ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಮೊದಲು ಇಸ್ಲಾಂ ಸಮಾಜ ಅದು ಮಾಡಿದ ತಪ್ಪನ್ನು ಒಪ್ಪಿ, ಆತ್ಮವಿಮರ್ಶೆ ಮಾಡಿಕೊಳ್ಳಲಿ. ನಂತರ ನೀವು ಮಾತುಕತೆಗೆ ಬನ್ನಿ ಎಂದು ಖಚಿತವಾಗಿ ತಿಳಿಸಿ ಮುಸ್ಲಿಂ ನಿಯೋಗವನ್ನು ವಾಪಸ್ ಕಳಿಸಿದ್ದಾರೆ’ ಎಂದು ಹೇಳಿದ್ದಾರೆ.
‘ಕೃಷ್ಣಭೂಮಿಯಲ್ಲಿ ಮೊಳಗಿದ ಪಾಂಚಚನ್ಯ ನಾಡಿನೆಲ್ಲಡೆ ಪ್ರತಿಧ್ವನಿಗೊಳ್ಳಲಿ ಎಂದು ಆಶಿಸುತ್ತನೆ. ವೀರಶ್ರೀಗಳ ಪಾದಗಳಲ್ಲಿ ನನ್ನ ಭೈರವ ನಮನಗಳು’ ಎಂದು ತಮ್ಮ ಬರಹವನ್ನು ಮುಗಿಸಿದ್ದಾರೆ.
ಇದನ್ನೂ ಓದಿ: ‘ಮುಂದಿನ ರಾಜಕೀಯದ ಬಗ್ಗೆ ಆಸೆ ಇಟ್ಟುಕೊಂಡಿಲ್ಲ’; ವೈರಾಗ್ಯದ ಮಾತುಗಳನ್ನಾಡಿದ ಸಂಸದ ಅನಂತಕುಮಾರ ಹೆಗಡೆ
ಇದನ್ನೂ ಓದಿ: Mask Day ದಿನವೇ ಮಾಸ್ಕ್ ಧರಿಸಲು ಮರೆತ ಸಂಸದ ಅನಂತಕುಮಾರ ಹೆಗಡೆ!