‘ಮುಂದಿನ ರಾಜಕೀಯದ ಬಗ್ಗೆ ಆಸೆ ಇಟ್ಟುಕೊಂಡಿಲ್ಲ’; ವೈರಾಗ್ಯದ ಮಾತುಗಳನ್ನಾಡಿದ ಸಂಸದ ಅನಂತಕುಮಾರ ಹೆಗಡೆ
ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ವೈರಾಗ್ಯದ ಮಾತಗಳನ್ನಾಡಿದ್ದಾರೆ. ಮುಂದಿನ ರಾಜಕೀಯದ ಬಗ್ಗೆ ಆಸೆ ಇಟ್ಟುಕೊಂಡಿಲ್ಲ ಎಂದಿರುವ ಅವರು, ಇಷ್ಟು ದಿನ ರಾಜಕೀಯದಲ್ಲಿ ಇದ್ದದ್ದೇ ಪುಣ್ಯ ಎಂದು ನುಡಿದಿದ್ದಾರೆ.
ಉತ್ತರ ಕನ್ನಡ: ಇಷ್ಟು ದಿನ ರಾಜಕೀಯದಲ್ಲಿ ಇದ್ದದ್ದೇ ನನ್ನ ಪುಣ್ಯ. ಮುಂದಿನ ರಾಜಕೀಯದ ಬಗ್ಗೆ ಆಸೆ ಇಟ್ಟುಕೊಂಡಿಲ್ಲ ಎಂದು ಸಂಸದ ಅನಂತಕುಮಾರ ಹೆಗಡೆ (Ananthkumar Hegde) ವೈರಾಗ್ಯದ ಮಾತುಗಳನ್ನಾಡಿದ್ದಾರೆ. ಗುರುವಾರ ಕುಮಟಾ (Kumta) ತಾಲೂಕಿನ ಕಂದವಳ್ಳಿಯಲ್ಲಿ ನಡೆದ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ವಿವಿಧ ರಸ್ತೆ ಕಾಮಗಾರಿಗಳ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ರಾಜಕಾರಣದಲ್ಲಿ ಹಾಗೇ ಆಗಬೇಕು, ಹೀಗೇ ಆಗಬೇಕು ಎಂದು ಕನಸುಗಳು ಇಲ್ಲ. ಇಷ್ಟು ವರ್ಷ ಪ್ರೀತಿ ವಿಶ್ವಾಸ ತೋರಿಸಿದ್ದೀರಿ. ಅದೇ ದೊಡ್ಡ ಸಂತೋಷ. ನಿಮ್ಮ ಪ್ರೀತಿಗೆ ನಾನು ಇಲ್ಲಿಂದಲೇ ನಿಮ್ಮ ಕಾಲಿಗೆ ನಮಸ್ಕಾರ ಮಾಡುತ್ತೇನೆ ಎಂದು ಸಂಸದರು ಹೇಳಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗೆ ವಿರೋಧ ಬಂದರೂ ಪರವಾಗಿಲ್ಲ. ಜಿಲ್ಲೆಗೆ ಬಂದರು, ನ್ಯಾಷನಲ್ ಹೈವೇ, ಏರ್ಪೋರ್ಟ್, ರೈಲ್ವೆ ಇಂತಹ ಕೆಲಸಗಳೇ ಅನಿವಾರ್ಯವಾಗಿ ಆಗಬೇಕಾಗಿದ್ದು. ಜಿಲ್ಲೆ ಇನ್ನೂ ನೂರು ವರ್ಷ ಅಭಿವೃದ್ಧಿ ದೃಷ್ಟಿಯಿಂದ ಹಿಂದೆ ತಿರುಗಿ ನೋಡಬಾರದು ಎಂದು ಅನಂತಕುಮಾರ ಹೆಗಡೆ ಹೇಳಿದರು.
ನಾವೇನ ರಾಜಕಾರಣದ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿಲ್ಲ. ಇಷ್ಟು ದಿನ ರಾಜರಾಣದಲ್ಲಿ ಇದ್ದದ್ದೇ ಪುಣ್ಯ. ಮುಂದಿನ ಆಸೆ ಇಲ್ಲ ಎಂದು ವೈರಾಗ್ಯದಿಂದ ಸಂಸದ ಅನಂತಕುಮಾರ ಹೆಗಡೆ ನುಡಿದರು. ಜಿಲ್ಲೆಯ ಅಭಿವೃದ್ಧಿ ಬಗ್ಗೆ ಮಾತನಾಡಿದ ಸಂಸದರು, ಉತ್ತರ ಕನ್ನಡ ಇನ್ನು ನೂರು ವರ್ಷಗಳ ಕಾಲ ಹಿಂದಿರುಗಿ ನೋಡಬಾರದು. ಅದಕ್ಕೆ ಪೂರಕವಾದ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದಿದ್ದಾರೆ.
ಅನಂತಕುಮಾರ ಹೆಗಡೆ 2017ರಿಂದ 2019ರ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವರಾಗಿ ಅವರು ಕಾರ್ಯನಿರ್ವಹಿಸಿದ್ದರು.
ಇದನ್ನೂ ಓದಿ:
BMTC bus fire: ಮಕ್ಕಳ ಕೂಟ ಬಳಿ ನಡು ರಸ್ತೆಯಲ್ಲೇ ಧಗಧಗನೆ ಹೊತ್ತಿ ಉರಿದ ಬಿಎಂಟಿಸಿ ಬಸ್
ಒಂದೇ ದಿನ ಬಾಲಿವುಡ್ನಲ್ಲಿ 3 ಸಾವು; ಆಘಾತದ ಸುದ್ದಿ ಕೇಳಿ ಕಂಬನಿ ಮಿಡಿದ ಸೆಲೆಬ್ರಿಟಿಗಳು
Published On - 12:14 pm, Fri, 21 January 22