AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PAN- Aadhaar Linking: ಪ್ಯಾನ್-ಆಧಾರ್ ಜೋಡಣೆ ಗಡುವು; ನೀವು ತಿಳಿದಿರಬೇಕಾದ 7 ಪ್ರಮುಖ FAQಗಳು

ಅಂತಿಮ ಗಡುವಿಗೂ ಮುನ್ನ ಪ್ಯಾನ್​ನೊಂದಿಗೆ ಆಧಾರ್ ಜೋಡಣೆ ಮಾಡಬೇಕಾಗುತ್ತದೆ. ಅದನ್ನು ಮಾಡುವುದು ಹೇಗೆ ಎಂಬುದರ ವಿವರ ಇಲ್ಲಿದೆ.

PAN- Aadhaar Linking: ಪ್ಯಾನ್-ಆಧಾರ್ ಜೋಡಣೆ ಗಡುವು; ನೀವು ತಿಳಿದಿರಬೇಕಾದ 7 ಪ್ರಮುಖ FAQಗಳು
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Mar 29, 2022 | 1:41 PM

Share

ಪ್ಯಾನ್ (PAN- Permanent Account Number) ಅನ್ನು ಆಧಾರ್‌ನೊಂದಿಗೆ (Aadhaar) ಜೋಡಣೆ ಮಾಡುವುದಕ್ಕೆ ಕೊನೆ ದಿನಾಂಕ ಮಾರ್ಚ್ 31, 2022. ಈ ಎರಡೂ ದಾಖಲೆಗಳನ್ನು ಗಡುವಿನೊಳಗೆ ಜೋಡಣೆ ಮಾಡದಿದ್ದಲ್ಲಿ ಅದರ ಹಲವು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಉದಾಹರಣೆಗೆ, ಮಾರ್ಚ್ 31ರೊಳಗೆ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡದಿದ್ದಲ್ಲಿ ಮೊದಲು ನಿಮ್ಮ ಪ್ಯಾನ್ ನಿಷ್ಕ್ರಿಯ ಆಗುತ್ತದೆ. ಹಾಗೆ ಒಮ್ಮೆ ಪ್ಯಾನ್ ನಿಷ್ಕ್ರಿಯಗೊಂಡಲ್ಲಿ ಬ್ಯಾಂಕ್ ಖಾತೆ ತೆರೆಯುವುದು, ಷೇರುಗಳಲ್ಲಿ ಹೂಡಿಕೆ ಮಾಡುವುದು, ಮ್ಯೂಚುವಲ್ ಫಂಡ್‌ಗಳು ಇತ್ಯಾದಿಗಳಂತಹ ವಿವಿಧ ಹಣಕಾಸು ವಹಿವಾಟುಗಳನ್ನು ನಡೆಸಲು ಸಾಧ್ಯ ಆಗುವುದಿಲ್ಲ. ಅಥವಾ ಪ್ಯಾನ್ ಅನ್ನು ಉಲ್ಲೇಖಿಸುವುದು ಎಲ್ಲೆಲ್ಲಿ ಕಡ್ಡಾಯ ಆಗಿದೆಯೋ ಉದಾಹರಣೆಗೆ ಸಂಬಳ, ಬಡ್ಡಿಯಿಂದ ಬರುವ ಆದಾಯದಲ್ಲಿನ ಕಡಿತ ಇತ್ಯಾದಿಗಳಿಗೆ ಅಗತ್ಯ.

ತೆರಿಗೆ ತಜ್ಞರ ಪ್ರಕಾರ, ಒಮ್ಮೆ ಪ್ಯಾನ್ ನಿಷ್ಕ್ರಿಯಗೊಂಡರೆ ಮತ್ತು ಅದನ್ನು ಎಲ್ಲಿಯಾದರೂ ಉಲ್ಲೇಖಿಸಬೇಕು/ಸಲ್ಲಿಸಬೇಕು ಅಂತಾದಲ್ಲಿ ಆದಾಯ ತೆರಿಗೆ ಕಾಯ್ದೆ, 1961ರ ಅಡಿಯಲ್ಲಿ ದಂಡವನ್ನು ಪಾವತಿಸ ಬೇಕಾಗಬಹುದು. ಸೆಕ್ಷನ್ 272B ಪ್ರಕಾರ, ರೂ. 10,000 ದಂಡವನ್ನು ವಿಧಿಸಬಹುದು. ಆದರೆ ದಂಡವನ್ನು ಪಾವತಿಸುವ ಮೂಲಕ ಗಡುವು ಮುಗಿದ ನಂತರ ನೀವು ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಬಹುದು. ಈ ದಂಡವನ್ನು ಸೆಕ್ಷನ್ 234H ಅಡಿಯಲ್ಲಿ ವಿಧಿಸಲಾಗುತ್ತದೆ. ಸರ್ಕಾರವು ದಂಡದ ಮೊತ್ತವನ್ನು ಇನ್ನೂ ಘೋಷಿಸದಿದ್ದರೂ ಗಡುವಿನ ನಂತರ ಆಧಾರ್‌ನೊಂದಿಗೆ ಪ್ಯಾನ್ ಅನ್ನು ಜೋಡಣೆ ಮಾಡಲು ಗರಿಷ್ಠ ಮೊತ್ತವು ರೂ. 1,000 ಮೀರುವುದಿಲ್ಲ. ದಂಡವನ್ನು ಪಾವತಿಸಿದ ನಂತರ ಮತ್ತು ಜೋಡಣೆ ಮಾಡುವ ಪ್ರಕ್ರಿಯೆಯು ಮುಗಿದ ನಂತರ ಪ್ಯಾನ್ ಮತ್ತೊಮ್ಮೆ ಕಾರ್ಯ ನಿರ್ವಹಿಸುತ್ತದೆ ಮತ್ತು ಹಣಕಾಸಿನ ವಹಿವಾಟುಗಳನ್ನು ನಡೆಸಲು ಬಳಸಬಹುದು.

ಪ್ಯಾನ್ ಅನ್ನು ಆಧಾರ್‌ನೊಂದಿಗೆ ಜೋಡಣೆ ಮಾಡುವ ಕುರಿತು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ 7 ಪ್ರಮುಖ FAQಗಳು ಇಲ್ಲಿವೆ:

1. ಆಧಾರ್ ಮತ್ತು ಪ್ಯಾನ್ ಅನ್ನು ಯಾರು ಜೋಡಣೆ ಮಾಡಬೇಕು? ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139AA, ಜುಲೈ 1, 2017ರಂದು PAN ಅನ್ನು ನಿಗದಿಪಡಿಸಿದ ಮತ್ತು ಆಧಾರ್ ಸಂಖ್ಯೆಯನ್ನು ಪಡೆಯಲು ಅರ್ಹರಾಗಿರುವ ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಧಾರ್ ಸಂಖ್ಯೆಯನ್ನು ನಿಗದಿತವಾಸ ರೂಪ ಮತ್ತು ವಿಧಾನದಲ್ಲಿ ತಿಳಿಸಬೇಕು ಎಂದು ಸೂಚಿಸುತ್ತದೆ. ಅದನ್ನೇ ಬೇರೆ ರೀತಿಯಲ್ಲಿ ಹೇಳುವುದಾದರೆ, ಅಂತಹ ವ್ಯಕ್ತಿಗಳು ತಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ನಿಗದಿತ ದಿನಾಂಕದ ಮೊದಲು ಕಡ್ಡಾಯವಾಗಿ ಜೋಡಣೆ ಮಾಡಬೇಕು.

2. ಯಾರಿಗೆ ಆಧಾರ್-ಪ್ಯಾನ್ ಜೋಡಣೆ ಮಾಡುವುದು ಕಡ್ಡಾಯವಲ್ಲ? ಆಧಾರ್-ಪ್ಯಾನ್ ಜೋಡಣೆ ಮಾಡುವುದು ಸದ್ಯಕ್ಕೆ ಕೆಳಗಿನ ಯಾವುದೇ ವ್ಯಕ್ತಿಗೆ ಅನ್ವಯಿಸುವುದಿಲ್ಲ: ಅ) ಅಸ್ಸಾಂ, ಜಮ್ಮು ಮತ್ತು ಕಾಶ್ಮೀರ ಹಾಗೂ ಮೇಘಾಲಯ ರಾಜ್ಯಗಳಲ್ಲಿ ವಾಸಿಸುತ್ತಿರುವವರಿಗೆ; ಆ) ಆದಾಯ ತೆರಿಗೆ ಕಾಯ್ದೆ, 1961ರ ಪ್ರಕಾರ ಅನಿವಾಸಿ; ಇ) ಹಿಂದಿನ ವರ್ಷದಲ್ಲಿ ಯಾವುದೇ ಸಮಯದಲ್ಲಿ ಎಂಬತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು; ಈ) ಭಾರತದ ಪ್ರಜೆ ಅಲ್ಲದವರು.

ಆದರೆ, ಈ ವಿನಾಯಿತಿಗಳು ಬದಲಾಗಬಹುದು ಅಥವಾ ನಂತರ ಹಿಂಪಡೆಯಬಹುದು.

3. ಆಧಾರ್ ಮತ್ತು ಪ್ಯಾನ್ ಜೋಡಣೆ ಮಾಡುವುದು ಹೇಗೆ? ನೋಂದಾಯಿತ ಮತ್ತು ನೋಂದಾಯಿಸದ ಬಳಕೆದಾರರು ತಮ್ಮ ಆಧಾರ್ ಮತ್ತು ಪ್ಯಾನ್ ಅನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಲಾಗ್ ಇನ್ ಮಾಡದೆಯೇ ಜೋಡಣೆ ಮಾಡಬಹುದು. ನೀವು ಆಧಾರ್ ಮತ್ತು ಪ್ಯಾನ್ ಅನ್ನು ಜೋಡಣೆ ಮಾಡಲು ಇ-ಫೈಲಿಂಗ್ ಹೋಮ್​ಪೇಜ್​ನಲ್ಲಿ ಇರುವ ಕ್ವಿಕ್ ಲಿಂಕ್​ನ ಲಿಂಕ್ ಆಧಾರ್ ಜೋಡಣೆಗಾಗಿ ಬಳಸಬಹುದು.

4. ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡದಿದ್ದರೆ ಏನಾಗುತ್ತದೆ? ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಆಧಾರ್ ಸಂಖ್ಯೆಯನ್ನು ನಮೂದಿಸುವುದು ಮತ್ತು ಅದನ್ನು ಪ್ಯಾನ್‌ಗೆ ಜೋಡಣೆ ಮಾಡುವುದು ಕಡ್ಡಾಯವಾಗಿದೆ. ಅಂತಿಮ ದಿನದೊಳಗೆ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಜೋಡಣೆ ಮಾಡಲು ವಿಫಲವಾದರೆ ಪ್ಯಾನ್ ನಿಷ್ಕ್ರಿಯ ಆಗುತ್ತದೆ. ಹಾಗೆ ಪ್ಯಾನ್ ನಿಷ್ಕ್ರಿಯಗೊಂಡರೆ ಮತ್ತು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಪ್ಯಾನ್ ಅನ್ನು ಒದಗಿಸುವುದು, ತಿಳಿಸುವುದು ಅಥವಾ ಉಲ್ಲೇಖಿಸುವುದು ಅಗತ್ಯವಿದ್ದಲ್ಲಿ ಒಂದು ವೇಳೆ PAN ಅನ್ನು ಒದಗಿಸಿಲ್ಲ, ತಿಳಿಸಿಲ್ಲ ಅಥವಾ ಉಲ್ಲೇಖಿಸಿಲ್ಲ ಎಂದು ಪರಿಗಣಿಸಲಾಗುತ್ತದೆ (ಈ ರೀತಿ ಪ್ರಕರಣದಲ್ಲಿ).

5. ಆಧಾರ್ ಮತ್ತು ಪ್ಯಾನ್‌ನಲ್ಲಿ ಹೆಸರು/ಫೋನ್ ಸಂಖ್ಯೆ/ಜನ್ಮ ದಿನಾಂಕದಲ್ಲಿ ಹೊಂದಾಣಿಕೆ ಆಗದ ಕಾರಣ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಜೋಡಣೆ ಮಾಡಲು ಸಾಧ್ಯವಾಗಿರುವುದಿಲ್ಲ. ಅಂಥ ಸಂದರ್ಭದಲ್ಲಿ ಏನು ಮಾಡಬೇಕು? ವಿವರಗಳನ್ನು ಪ್ಯಾನ್ ಅಥವಾ ಆಧಾರ್ ಡೇಟಾಬೇಸ್‌ನಲ್ಲಿ ಸರಿಪಡಿಸಿ, ಎರಡರಲ್ಲೂ ಹೊಂದಾಣಿಕೆ ಆಗುವಂಥ ವಿವರಗಳಿರುವಂತೆ ಸರಿಪಡಿಸಬೇಕು. ನಿಮ್ಮ ಪ್ಯಾನ್ ವಿವರಗಳನ್ನು ಇಲ್ಲಿ ಸರಿಪಡಿಸಬಹುದು: TIN-NSDL ವೆಬ್‌ಸೈಟ್, ಅಥವಾ UTIITSLನ PANOnline ಪೋರ್ಟಲ್. UIDAI ವೆಬ್‌ಸೈಟ್‌ನಲ್ಲಿ ಆಧಾರ್ ವಿವರಗಳನ್ನು ಸರಿಪಡಿಸಬಹುದು.

6. ಪ್ಯಾನ್ ಮತ್ತು ಆಧಾರ್ ಅನ್ನು ಮ್ಯಾನ್ಯುಯಲ್/ಆಫ್‌ಲೈನ್‌ ಆಗಿ ಜೋಡಣೆ ಮಾಡಬಹುದೇ? ಹೌದು, ಮಾಡಬಹುದು. ಆಧಾರ್‌ನೊಂದಿಗೆ ನೋಂದಾಯಿಸಲಾದ ಮೊಬೈಲ್‌ನಿಂದ 567678 ಅಥವಾ 56161ರಲ್ಲಿ PAN ಪೂರೈಕೆದಾರರಿಗೆ (NSDL ಅಥವಾ UTIITSL) SMS ಕಳುಹಿಸಬೇಕು. SMSನಲ್ಲಿ ಈ ನಿರ್ದಿಷ್ಟ ಸ್ವರೂಪವನ್ನು ಬಳಸಬೇಕು: UIDPAN <12-ಅಂಕಿಯ ಆಧಾರ್> <10-ಅಂಕಿಯ PAN>. UIDPAN, ಆಧಾರ್ ಸಂಖ್ಯೆ ಮತ್ತು PAN ನಡುವೆ ಅಂತರ ಇದೆ ಎಂದು ಖಚಿತಪಡಿಸಿಕೊಳ್ಳಬೇಕು.

7. PAN ನಿಷ್ಕ್ರಿಯಗೊಂಡರೆ ಏನು ಮಾಡಬೇಕು? ನಿಗದಿತ ದಿನಾಂಕದೊಳಗೆ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಜೋಡಣೆ ಮಾಡದಿದ್ದರೆ ಪ್ಯಾನ್ ನಿಷ್ಕ್ರಿಯವಾಗುತ್ತದೆ. ಪ್ಯಾನ್ ನಿಷ್ಕ್ರಿಯಗೊಂಡರೆ, ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಆಧಾರ್ ಸೇವೆಯ ಲಿಂಕ್ ಬಳಸಬೇಕಾಗುತ್ತದೆ ಮತ್ತು ಆಧಾರ್ ಅನ್ನು ಜೋಡಣೆ ಮಾಡಬೇಕಾಗುತ್ತದೆ. ಜೋಡಣೆ ಮಾಡಿದ ನಂತರ ಪ್ಯಾನ್ ಆಪರೇಟಿವ್ ಆಗುತ್ತದೆ.

ಇದನ್ನೂ ಓದಿ: Aadhaar Card Update: ನಿಮ್ಮ ಮೊಬೈಲ್ ಫೋನ್ ಸಂಖ್ಯೆ ಆಧಾರ್​ಗೆ ಜೋಡಣೆ ಆಗಿದೆಯಾ? ಅನುಕೂಲಗಳನ್ನು ತಿಳಿಯಿರಿ

ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ
ಆಗಸ್ಟ್ ಕೊನೆಯಲ್ಲಿ ಮತ್ತೆ ಟೋಯಿಂಗ್ ಶುರು: ಗೃಹ ಸಚಿವ ಪರಮೇಶ್ವರ್ ಘೋಷಣೆ