AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Aadhaar Card Update: ನಿಮ್ಮ ಮೊಬೈಲ್ ಫೋನ್ ಸಂಖ್ಯೆ ಆಧಾರ್​ಗೆ ಜೋಡಣೆ ಆಗಿದೆಯಾ? ಅನುಕೂಲಗಳನ್ನು ತಿಳಿಯಿರಿ

ಆಧಾರ್​ ಕಾರ್ಡ್ ಜತೆಗೆ ಮೊಬೈಲ್ ಸಂಖ್ಯೆಯನ್ನು ಜೋಡಣೆ ಮಾಡುವುದು ಅಥವಾ ಅಪ್​ಡೇಟ್ ಮಾಡುವುದು ಹೇಗೆ? ಇಲ್ಲಿದೆ ಹಂತ ಹಂತವಾದ ವಿವರಣೆ.

Aadhaar Card Update: ನಿಮ್ಮ ಮೊಬೈಲ್ ಫೋನ್ ಸಂಖ್ಯೆ ಆಧಾರ್​ಗೆ ಜೋಡಣೆ ಆಗಿದೆಯಾ? ಅನುಕೂಲಗಳನ್ನು ತಿಳಿಯಿರಿ
ಸಾಂದರ್ಭಿಕ ಚಿತ್ರ
TV9 Web
| Updated By: Srinivas Mata|

Updated on: Mar 16, 2022 | 12:10 PM

Share

ಭಾರತೀಯ ನಾಗರಿಕರಿಗೆ ಆಧಾರ್​ ಕಾರ್ಡ್ (Aadhaar Card) ಎಂಬುದು ಬಹಳ ಮುಖ್ಯವಾದದ್ದು. ಹನ್ನೆರಡು ಅಂಕಿಯ ಈ ವಿಶಿಷ್ಟ ಗುರುತಿನ ಕಾರ್ಡ್ ಅನ್ನು ಯುಐಡಿಎಐನಿಂದ ವಿತರಿಸಲಾಗುತ್ತದೆ. ಆಧಾರ್​ನ ಮಹತ್ವ ದಿನೇ ದಿನೇ ಹೆಚ್ಚಾಗುತ್ತಿದ್ದು, ಗುರುತಿನ ಪುರಾವೆ ಎಂಬುದರ ನಂತರ ಆಧಾರ್​ ಕಾರ್ಡ್ ಅನ್ನು ಕೇಳಲಾಗುತ್ತದೆ. ನಾಗರಿಕರ ವಿಳಾಸ ದೃಢೀಕರಣ, ಜನ್ಮ ದಿನಾಂಕ ಮತ್ತಿತರ ವಿಚಾರಗಳಿಗೆ ಇದು ನಂಬಿಕಸ್ತ ಮೂಲ. ಆದ್ದರಿಂದ ಪ್ರತಿಯೊಬ್ಬರು ಆಧಾರ್ ಹೊಂದಿರುವುದು ಕಡ್ಡಾಯ. ಒಂದು ವೇಳೆ ಕಾರ್ಡ್​ ಅನ್ನು ಮೊಬೈಲ್ ಸಂಖ್ಯೆ ಜತೆಗೆ ಜೋಡಣೆ ಮಾಡಿದ್ದಲ್ಲಿ ಸರ್ಕಾರದಿಂದ ನಡೆಯುವ ಪೋರ್ಟಲ್​ಗಳಿಗೆ ಲಾಗ್​ ಇನ್ ಆಗಿ, ಸಂಪರ್ಕ ಪಡೆಯುವುದಕ್ಕೆ ಸಹಾಯ ಆಗುತ್ತದೆ. ಆದ್ದರಿಂದ ಯಾವಾಗಲೂ ಈಚಿನ ಮೊಬೈಲ್ ಸಂಖ್ಯೆಯನ್ನು ಅಪ್​ಡೇಟ್​ ಮಾಡಿರುವುದು ಉತ್ತಮ.

ಆಧಾರ್​ನಲ್ಲಿ ಮೊಬೈಲ್​ ಸಂಖ್ಯೆ ಅಪ್​ಡೇಟ್ ಅಥವಾ ಸೇರ್ಪಡೆ ಹೇಗೆ? ಆಧಾರ್​ನಲ್ಲಿ ಮೊಬೈಲ್ ಸಂಖ್ಯೆ ನೋಂದಣಿ ಮಾಡದಿದ್ದಲ್ಲಿ ಅಥವಾ ಈಗಿನ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡದಿದ್ದಲ್ಲಿ ಹತ್ತಿರದ ಆಧಾರ್​ ಕೇಂದ್ರಕ್ಕೆ ಭೇಟಿ ನೀಡಿ, ಆ ಕೆಲಸ ಮಾಡಬಹುದು. ಈ ಪ್ರಕ್ರಿಯೆಗೆ ಆಧಾರ್ ಕಾರ್ಡ್ ಹೊರತುಪಡಿಸಿ ಇನ್ನೇನು ಬೇಕಾಗಿಲ್ಲ. ಈ ಪ್ರಕ್ರಿಯೆಗೆ ಬಯೋಮೆಟ್ರಿಕ್ ದೃಢೀಕರಣ ಹಾಗೂ ಅಪ್​ಡೇಟ್​ಗೆ ಅರ್ಜಿ ಸಲ್ಲಿಸಬೇಕು.

ಹತ್ತಿರದ ಆಧಾರ್​ ಕೇಂದ್ರ ಹುಡುಕುವುದು ಹೇಗೆ? mAdhaar ಆ್ಯಪ್​ ಬಳಸಿ ಅಥವಾ uidai.gov.inಗೆ ಭೇಟಿ ನೀಡಿ, ಹತ್ತಿರದ ಆಧಾರ್​ ಕೇಂದ್ರವನ್ನು ಹುಡುಕಬಹುದು. ಅಷ್ಟೇ ಅಲ್ಲ, ಹೆಲ್ಪ್​ಲೈನ್ ಸಂಖ್ಯೆ 1947 ಸಂಖ್ಯೆ ಬಳಸಿ, ಹತ್ತಿರದ ಆಧಾರ್​ ಕೇಂದ್ರವನ್ನು ಹುಡುಕಬಹುದು.

ಆಧಾರ್​ನಲ್ಲಿ ಮೊಬೈಲ್ ಸಂಖ್ಯೆ ಅಪ್​ಡೇಟ್ ಮಾಡುವುದು ಹೇಗೆ? ​ಆಧಾರ್​ನಲ್ಲಿ ಬಳಕೆದಾರರ ಡೇಟಾವನ್ನು ರಕ್ಷಿಸುವ ಸಲುವಾಗಿ ಯುಐಡಿಎಐನಿಂದ ಆಧಾರ್​ ಕಾರ್ಡ್​ನಲ್ಲಿನ ಮೊಬೈಲ್​ ಸಂಖ್ಯೆಯನ್ನು ಆನ್​ಲೈನ್​ನಿಂದ ಅಪ್​ಡೇಟ್​ ಮಾಡುವುದನ್ನು ತಡೆದಿದೆ. ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಮಾತ್ರ ಅಪ್​ಡೇಟ್ ಮಾಡುವುದಕ್ಕೆ ಸಾಧ್ಯ. ಆದ್ದರಿಂದ ಹತ್ತಿರದ ಆಧಾರ್​ ಕೇಂದ್ರಕ್ಕೆ ಭೇಟಿ ನೀಡಬೇಕು ಮತ್ತು ಆಧಾರ್​ ಡೇಟಾಬೇಸ್​ನಲ್ಲಿ ಹೊಸ ಮೊಬೈಲ್​ ನಂಬರ್​ ಅಪ್​ಡೇಟ್​ ಮಾಡುವುದಕ್ಕೆ ಮನವಿ ಸಲ್ಲಿಸುವುದಕ್ಕೆ ಅರ್ಜಿ ಭರ್ತಿ ಮಾಡಬೇಕು. ಜತೆಗೆ 50 ರೂಪಾಯಿ ಶುಲ್ಕ ಪಾವತಿಸಬೇಕು. ಇದಕ್ಕಾಗಿ ಬಯೋಮೆಟ್ರಿಕ್ ದೃಢೀಕರಣವನ್ನು ಮಾಡಬೇಕಾಗುತ್ತದೆ. ಆದರೆ ನಿಮ್ಮ ಮೊಬೈಲ್ ಸಂಖ್ಯೆ ಬದಲಾವಣೆ/ಅಪ್​ಡೇಟ್​ ಮಾಡುವುದಕ್ಕೆ ಅರ್ಜಿ ಡೌನ್​ಲೋಡ್ ಮಾಡಬಹುದು ಹಾಗೂ ಆಧಾರ್​ ಕೇಂದ್ರದಲ್ಲಿ ಸ್ವಲ್ಪ ಸಮಯ ಉಳಿಸಬಹುದು.

ಆ ನಂತರ ವಿಶಿಷ್ಟ ಉಲ್ಲೇಖ ಸಂಖ್ಯೆಯನ್ನು ಒದಗಿಸಲಾಗುತ್ತದೆ. ಅದನ್ನು ಬಳಸಿಕೊಂಡು, mAdhaar ಆ್ಯಪ್​ ಬಳಸಿ ಅಥವಾ uidai.gov.inಗೆ ಭೇಟಿ ನೀಡಿ, ಸ್ಥಿತಿಯನ್ನು ಪರಿಶೀಲಿಸಬಹುದು.

ಒಂದು ವೇಳೆ ಅದಾಗಲೇ ಆಧಾರ್​ ಡೇಟಾಬೇಸ್​ನಲ್ಲಿ ಹೊಸ ಮೊಬೈಲ್ ಸಂಖ್ಯೆ ಸೇರ್ಪಡೆ ಮಾಡಿದಲ್ಲಿ ಟ್ರ್ಯಾಕಿಂಗ್ ಮಾಡುವಾಗಲೇ ತೆರೆಯ ಮೇಲೆ ಈ ಬಗ್ಗೆ ಸಂದೇಶ ಕಾಣಿಸಿಕೊಳ್ಳುತ್ತದೆ.

ಒಂದು ಸಲ ಮನವಿ ಪ್ರೊಸೆಸ್ ಆದ ಮೇಲೆ ಹೊಸದಾಗಿ ನೋಂದಣಿ ಆದ ಮೊಬೈಲ್ ಸಂಖ್ಯೆಯು ಮತ್ತಿತರ ಮಾಹಿತಿಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ.

ಸರ್ಕಾರ ಮತ್ತು ಸರ್ಕಾರೇತರ ಸೇವೆಗಳಿಗೆ, ಸಬ್ಸಿಡಿ ಅನುಕೂಲಗಳು, ಪೆನ್ಷನ್, ವಿದ್ಯಾರ್ಥಿ ವೇತನ, ಸಾಮಾಜಿಕ ಅನುಕೂಲಗಳು, ಬ್ಯಾಂಕಿಂಗ್​ ಸೇವೆಗಳು, ಇನ್ಷೂರೆನ್ಸ್ ಸೇವೆಗಳು, ತೆರಿಗೆ ಸೇವೆಗಳು, ಶಿಕ್ಷಣ, ಉದ್ಯೋಗ, ಹೆಲ್ತ್​ಕೇರ್​ ಮುಂತಾದವಕ್ಕೆ ಆಧಾರ್​ ಸಕ್ರಿಯಗೊಳ್ಳುವುದು ಮುಖ್ಯವಾಗುತ್ತದೆ. ಆದ್ದರಿಂದ ಸಿಐಡಿಆರ್​ನಲ್ಲಿ ಸಂಗ್ರಹ ಆಗಿರುವ ನಿವಾಸಿಯ ಡೇಟಾ ನಿಖರವಾಗಿ ಮತ್ತು ಅಪ್​ಡೇಟ್ ಆಗಿದೆಯಾ ಎಂಬುದನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದು ಯುಐಡಿಎಐ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Masked Aadhaar Card: ಮಾಸ್ಕ್ ಆದ ಫೋಟೋ ಇರುವ ಆಧಾರ್ ಕಾರ್ಡ್ ಡೌನ್​ಲೋಡ್ ಹೇಗೆ? ಇಲ್ಲಿದೆ ವಿವರ

ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಅಂಥ ಅಭಿಮಾನಿಗಳಿಗೆ ಸ್ಟಾರ್ ನಟರು ಬುದ್ಧಿ ಹೇಳಬೇಕು: ರಾಕ್​ಲೈನ್ ವೆಂಕಟೇಶ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಆಂಗ್ಲರಿಗೆ ಉಚಿತವಾಗಿ ತನ್ನ ವಿಕೆಟ್ ನೀಡಿದ ಶುಭ್​ಮನ್ ಗಿಲ್
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಪೊಲೀಸರ ಎದುರಲ್ಲೇ ನಟ ಪ್ರಥಮ್ ಮುಖಕ್ಕೆ ಮಸಿ; ವಿಡಿಯೋ ಇಲ್ಲಿದೆ ನೋಡಿ
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ಐಶ್ವರ್ಯ ರೈ ಹೇಗೆ ಸಹಿಸ್ಕೊಳ್ತಾಳೋ? ಟ್ರೋಲ್ ಆದ ಜಯಾ ಬಚ್ಚನ್
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ನಾನು ದರ್ಶನ್ ಪರ, ಪ್ರಥಮ್​ದು ತುಸು ಹೆಚ್ಚಾಯ್ತು: ಧ್ರುವ ಸರ್ಜಾ
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್​​ ವಿಷ : ತಪ್ಪಿದ ಅನಾಹುತ!
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ನನಗೂ ಕಹಿ ಅನುಭವ ಆಗಿತ್ತು: ಅಭಿಮಾನಿಗಳ ಅತಿರೇಕದ ಬಗ್ಗೆ ಯೋಗಿ ಮಾತು
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ಮತಗಳ್ಳತನ ಬಗ್ಗೆ ರಾಹುಲ್ ಗಾಂಧಿ ಬಳಿ ಎಲ್ಲಾ ದಾಖಲೆಗಳಿವೆ: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
ದೊಡ್ಡಬಳ್ಳಾಪುರ: ಕಾರು ಚಾಲಕನ ಮೇಲೆ ಟೋಲ್​ ಸಿಬ್ಬಂದಿ ಮಾರಣಾಂತಿಕ ಹಲ್ಲೆ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ
W,W,W,W,W,W: ಇಂಗ್ಲೆಂಡ್​ನಲ್ಲಿ ಯುಜ್ವೇಂದ್ರ ಚಹಲ್ ಸ್ಪಿನ್ ಮೋಡಿ