Aadhaar- PAN Linking: ಆಧಾರ್ ಜತೆ ಪ್ಯಾನ್​ ಕಾರ್ಡ್​ ಮಾರ್ಚ್​ 31ರೊಳಗೆ ಜೋಡಣೆ ಆಗದಿದ್ದಲ್ಲಿ ಹೆಚ್ಚಿನ ಟಿಡಿಎಸ್​

ಮಾರ್ಚ್ 31, 2022ರೊಳಗೆ ಪ್ಯಾನ್ ಕಾರ್ಡ್​ನೊಂದಿಗೆ ಆಧಾರ್ ಜತೆಗೆ ಜೋಡಣೆ ಆಗಿಲ್ಲ ಎಂದಾದಲ್ಲಿ ಹೆಚ್ಚಿನ ಟಿಡಿಎಸ್​ ಪಾವತಿ ಮಾಡಬೇಕಾಗುತ್ತದೆ. ಆ ಬಗ್ಗೆ ಮಾಹಿತಿ ಇಲ್ಲಿದೆ

Aadhaar- PAN Linking: ಆಧಾರ್ ಜತೆ ಪ್ಯಾನ್​ ಕಾರ್ಡ್​ ಮಾರ್ಚ್​ 31ರೊಳಗೆ ಜೋಡಣೆ ಆಗದಿದ್ದಲ್ಲಿ ಹೆಚ್ಚಿನ ಟಿಡಿಎಸ್​
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Mar 14, 2022 | 8:07 PM

ನಿಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (Permanent Account Number) ಅಥವಾ ಪ್ಯಾನ್ ಅನ್ನು ಆಧಾರ್​ ಜೊತೆಗೆ ಜೋಡಣೆ ಮಾಡಿಲ್ಲ ಅಂತಾದಲ್ಲಿ ಮುಂದಿನ ತಿಂಗಳಿಂದ ಹೆಚ್ಚಿನ ಟಿಡಿಎಸ್​ (ಟ್ಯಾಕ್ಸ್​ ಡಿಡಕ್ಟಡ್​ ಅಟ್ ಸೋರ್ಸ್) ಕಟ್ಟಬೇಕಾಗುತ್ತದೆ. ಆಧಾರ್ ಸಂಖ್ಯೆ ಜತೆಗೆ ಪ್ಯಾನ್ ಜೋಡಣೆ ಮಾಡುವುದಕ್ಕೆ ಕೊನೆ ದಿನಾಂಕವನ್ನು ಮಾರ್ಚ್ 31, 2022ಕ್ಕೆ ವಿಸ್ತರಣೆ ಮಾಡಲಾಗಿದೆ. ಈ ಗಡುವಿನೊಳಗಾಗಿ ಎರಡನ್ನೂ ಜೋಡಣೆ ಮಾಡದಿದ್ದಲ್ಲಿ ನಿಮ್ಮ ಡೆಬಿಟ್ ಹಾಗೂ ಕ್ರೆಡಿಟ್​ ಕಾರ್ಡ್ ಪಾವತಿ, ಆನ್​ಲೈನ್ ವಹಿವಾಟುಗಳು, ಎಟಿಎಂಗಳಿಂದ ನಗದು ವಿಥ್​ಡ್ರಾಗಳು ಇತ್ಯಾದಿಗಳ ಮೇಲೆ ಪರಿಣಾಮ ಬೀರಲಿದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 139ಎಎ ಪ್ರಕಾರ, ಜುಲೈ 1, 2017ಕ್ಕೆ ಪ್ಯಾನ್ ಹೊಂದಿರುವ ಮತ್ತು ಆಧಾರ್​ ಪಡೆಯುವುದಕ್ಕೆ ಅರ್ಹರಾದ ಪ್ರತಿಯೊಬ್ಬರು ಎರಡನ್ನೂ ಜೋಡಣೆ ಮಾಡಬೇಕು.

ಕಳೆದ ಮೂರು ವರ್ಷದಲ್ಲಿ ಕೇಂದ್ರೀಯ ನೇರ ತೆರಿಗೆ ಮಂಡಳಿ (CBDT) ಪ್ಯಾನ್ ಹಾಗೂ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆ ಮಾಡುವುದರ ಗಡುವು ಹಲವು ಸಲ ವಿಸ್ತರಣೆ ಮಾಡಿದೆ. ನಿಗದಿತ ದಿನಾಂಕದ ಒಳಗಾಗಿ ಪ್ಯಾನ್​ ಕಾರ್ಡ್ ಜತೆಗೆ ಆಧಾರ್ ಜೋಡಣೆ ಆಗದಿದ್ದಲ್ಲಿ ಪ್ಯಾನ್ ಕಾರ್ಯ ನಿರ್ವಹಿಸುವುದಿಲ್ಲ. ಸೆಕ್ಷನ್ 114ಎಎ(3) ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ ಹೀಗಾಗುತ್ತದೆ. ಯಾರು ಹೊಸದಾಗಿ ಪ್ಯಾನ್​ ಕಾರ್ಡ್​ ಅಪ್ಲೈ ಮಾಡುತ್ತಿರುವರೋ ಅವರು ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 139ಎಎ ಅಡಿಯಲ್ಲಿ ಆಧಾರ್ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ.​

ಒಂದು ವೇಳೆ ಪ್ಯಾನ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸಿದಲ್ಲಿ ಪ್ಯಾನ್​ ಸಲ್ಲಿಸಿಲ್ಲ ಎಂದು ಪರಿಗಣಿಸಲಾಗುತ್ತದೆ. ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 206ಎಎ(6) ಅಡಿಯಲ್ಲಿ ಯಾರಿಗೆ ಆದಾಯ ತೆರಿಗೆ ವ್ಯಾಪ್ತಿಗೆ ಬರುವ ಆದಾಯ ಇರುತ್ತದೋ ಅಂಥವರು ಕಡ್ಡಾಯವಾಗಿ ಪ್ಯಾನ್ ಕಾರ್ಡ್ ಮಾಹಿತಿ ನೀಡಬೇಕು. ಒಂದು ವೇಳೆ ತೆರಿಗೆ ಪಾವತಿದಾರರು ನೀಡಿದ ಪ್ಯಾನ್ ಸಿಂಧು ಅಲ್ಲ ಎಂದಾದಲ್ಲಿ ಪ್ಯಾನ್ ಮಾಹಿತಿಯನ್ನು ಒದಗಿಸಿಲ್ಲ ಎಂಬಂತೆ ಬಿಂಬಿತ ಆಗುತ್ತದೆ.

ಆದ್ದರಿಂದ ಮಾರ್ಚ್ 31ನೇ ತಾರೀಕಿನೊಳಗೆ ಇರುವ ಗಡುವಿ ಮೀರಿದಲ್ಲಿ ಪ್ಯಾನ್​ ಕಾರ್ಡ್ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುತ್ತದೆ. ಆ ನಂತರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 206ಎಎ ಅಡಿಯಲ್ಲಿ ಶೇ 20ರಷ್ಟು ಟಿಡಿಎಸ್​ ಕಡಿತ ಆಗುತ್ತದೆ. ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ, ಡಿವಿಡೆಂಡ್ ಮತ್ತು ಇತರ ಆದಾಯಗಳಿಗೆ ಹೆಚ್ಚಿನ ಟಿಡಿಎಸ್​ ಆಗುತ್ತದೆ. ಒಂದು ವೇಳೆ ಆಧಾರ್ ಜತೆ ಪ್ಯಾನ್ ಜೋಡಣೆ ಆಗದಿದ್ದಲ್ಲಿ ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಕ್ಕೆ ಶೇ 20ರಷ್ಟು ಟಿಡಿಎಸ್​ ಆಗುತ್ತದೆ. ಉದಾಹರಣೆಗೆ ಬಡ್ಡಿ ಆದಾಯವು 40 ಸಾವಿರ ರೂಪಾಯಿ ದಾಟಿದಲ್ಲಿ ಸೆಕ್ಷನ್ 206ಎಎ ಅಡಿಯಲ್ಲಿ ಶೇ 10ರಷ್ಟು ಟಿಡಿಎಸ್​ ಆಗುತ್ತದೆ, ಅದೇ ಒಂದು ವೇಳೆ ಆಧಾರ್ ಅನ್ನು ಪ್ಯಾನ್ ಜತೆ ಜೋಡಣೆ ಮಾಡಿಲ್ಲ ಅಂತಾದಲ್ಲಿ ಶೇ 20ರಷ್ಟು ಟಿಡಿಎಸ್​ ಆಗುತ್ತದೆ.

ಆದಾಯ ತೆರಿಗೆ ಕಾನೂನು ಅನ್ವಯ ಒಂದು ವೇಳೆ ಪ್ಯಾನ್ ಮಾಹಿತಿ ಒದಗಿಸದೆ ಇದ್ದಲ್ಲಿ ಆದಾಯ ತೆರಿಗೆ ಕಾಯ್ದೆ ಸೆಕ್ಷನ್ 272ಬಿ ಅಡಿಯಲ್ಲಿ 10 ಸಾವಿರ ತೆರಿಗೆ ಬೀಳುತ್ತದೆ. ಪ್ರತಿ ನಿಯಮಾವಳಿ ಪಾಲನೆಯಲ್ಲಿ ತಪ್ಪಿದಾಗಲೂ ದಂಡವನ್ನು ವಿಧಿಸಬಹುದು. ಪ್ರತಿ ಬಾರಿ ಪ್ಯಾನ್ ಒದಗಿಸಲು ವಿಫಲವಾದಾಗಲೂ 10 ಸಾವಿರ ದಂಡ ವಿಧಿಸಬಹುದಾಗಿದೆ. ಆಧಾರ್​ ಜತೆಗೆ ಪ್ಯಾನ್​ ಸಂಖ್ಯೆ ಜೋಡಣೆ ಆಗದಿದ್ದಲ್ಲಿ ಪ್ಯಾನ್​ ಕಾರ್ಯ ನಿರ್ವಹಿಸುವುದನ್ನು ನಿಲ್ಲಿಸುವುದರ ಜತೆಗೆ, ಹೆಚ್ಚಿನ ಟಿಡಿಎಸ್​ ದರ ಹಾಗೂ ಮತ್ತಿತರ ಪರಿಣಾಮಗಳು ಆಗುತ್ತವೆ.

ಇದನ್ನೂ ಓದಿ: ಮಾಹಿತಿ ಹೊಂದಾಣಿಕೆಯಾಗದ ಕಾರಣ ಪ್ಯಾನ್-ಆಧಾರ್ ಲಿಂಕ್ ಆಗುತ್ತಿಲ್ಲವಾ?; ಹೀಗೆ ಮಾಡಿ ನೋಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್