Maggi ಇನ್ನು ದುಬಾರಿ; HUL, ನೆಸ್ಲೆಯಿಂದ ಮ್ಯಾಗಿ, ಕಾಫಿ, ಟೀ ಬೆಲೆ ಹೆಚ್ಚಳ

ನೆಸ್ಲೆ ಇಂಡಿಯಾ ಮ್ಯಾಗಿ ಬೆಲೆಯನ್ನು ಶೇ.9ರಿಂದ 16ರಷ್ಟು ಹೆಚ್ಚಿಸಿದೆ. ಹೆಚ್​ಯುಎಲ್ ಬ್ರೂ ಕಾಫಿಯ ಬೆಲೆಯನ್ನು ಶೇ. 3ರಿಂದ 7ರಷ್ಟು ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್​ನ ಬೆಲೆಯನ್ನು ಶೇ. 3ರಿಂದ 4ರಷ್ಟು ಹೆಚ್ಚಿಸಿದೆ.

Maggi ಇನ್ನು ದುಬಾರಿ; HUL, ನೆಸ್ಲೆಯಿಂದ ಮ್ಯಾಗಿ, ಕಾಫಿ, ಟೀ ಬೆಲೆ ಹೆಚ್ಚಳ
ಮ್ಯಾಗಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Mar 14, 2022 | 5:34 PM

ನವದೆಹಲಿ: ನೀವು ಮ್ಯಾಗಿ (Maggi) ಪ್ರಿಯರಾ? ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮ್ಯಾಗಿ ಬಹಳ ಪ್ರಿಯವಾದ ತಿಂಡಿ. ಫಟಾಫಟ್ ಎಂದು ತಯಾರಿಸಬಹುದಾದ ಮ್ಯಾಗಿಯನ್ನು ನಾನಾ ರೀತಿಯಲ್ಲಿ ಕೂಡ ಮಾಡಬಹುದು. ಹಾಗೇ, ಎರಡೇ ನಿಮಿಷದಲ್ಲಿ ಕೂಡ ಮ್ಯಾಗಿಯನ್ನು ಸಿದ್ಧಪಡಿಸಬಹುದು. ಬಿಸಿ ಬಿಸಿಯಾದ ಮ್ಯಾಗಿ ಜೊತೆ ಅಷ್ಟೇ ಬಿಸಿಯಾದ ಒಂದು ಕಪ್ ಕಾಫಿ (Coffee) ಅಥವಾ ಟೀ (Tea) ಇದ್ದರೆ ಅದರ ಮಜವೇ ಬೇರೆ. ಆದರೆ, ಇನ್ನು ಸದ್ಯದಲ್ಲೇ ಮ್ಯಾಗಿ, ಕಾಫಿ, ಟೀ ಬೆಲೆ ಹೆಚ್ಚಳವಾಗಲಿದೆ ಎಂಬ ಶಾಕಿಂಗ್ ನ್ಯೂಸ್ ಒಂದು ಹೊರಬಿದ್ದಿದೆ. ಇದ್ದಕ್ಕಿದ್ದಂತೆ ಈ ವಸ್ತುಗಳ ಬೆಲೆ ಹೆಚ್ಚಳವಾಗಲು ಕಾರಣವೇನೆಂಬ ಬಗ್ಗೆ ಮಾಹಿತಿ ಇಲ್ಲಿದೆ.

ಈಗಾಗಲೇ ದಿನನಿತ್ಯದ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿರುವುದರಿಂದ ಜನಸಾಮಾನ್ಯರು ಕಂಗೆಟ್ಟಿದ್ದಾರೆ. ಮ್ಯಾಗಿ, ಕಾಫಿ, ಟೀ (ಚಹಾ) ಬೆಲೆ ಕೂಡ ಹೆಚ್ಚಳವಾಗಲಿದೆ. ಹಿಂದೂಸ್ತಾನ್ ಯೂನಿಲಿವರ್ (ಹೆಚ್​ಯುಎಲ್) ಮತ್ತು ನೆಸ್ಲೆ ತಮ್ಮ ಅನೇಕ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿವೆ. ಇದರಿಂದಾಗಿ ಮ್ಯಾಗಿ, ಕಾಫಿ, ಟೀ ಪುಡಿಯ ಬೆಲೆಯೂ ಶೇ. 9ರಿಂದ 16ರಷ್ಟು ಹೆಚ್ಚಳವಾಗಲಿದೆ. ನೆಸ್ಲೆಯ ಹಾಲಿನ ಪುಡಿ ಮತ್ತು ಕಾಫಿ ಪುಡಿಯ ಬೆಲೆ ಕೂಡ ಏರಿಕೆಯಾಗಲಿದೆ.

ಹೆಚ್​ಯುಎಲ್ ಬ್ರೂ ಕಾಫಿಯ ಬೆಲೆಯನ್ನು ಶೇ. 3ರಿಂದ 7ರಷ್ಟು ಮತ್ತು ಬ್ರೂ ಗೋಲ್ಡ್ ಕಾಫಿ ಜಾರ್​ನ ಬೆಲೆಯನ್ನು ಶೇ. 3ರಿಂದ 4ರಷ್ಟು ಹೆಚ್ಚಿಸಿದೆ. ನೆಸ್​ಕೆಫೆ ಕ್ಲಾಸಿಕ್ ಕಾಫಿ ಪುಡಿಯ ಬೆಲೆ ಶೇ. 3.7ರಷ್ಟು ಏರಿಕೆಯಾಗಿದೆ. ಬ್ರೂ ಸಣ್ಣ ಕಾಫಿ ಪ್ಯಾಕೆಟ್​ಗಳ ಬೆಲೆಯೂ ಶೇ.3ರಿಂದ ಶೇ.6.66ಕ್ಕೆ ಏರಿಕೆಯಾಗಿದೆ. ಇದರ ಜೊತೆಗೆ ತಾಜ್ ಮಹಲ್ ಚಹಾದ ಬೆಲೆ ಶೇ.3.7ರಿಂದ ಶೇ.5.8ಕ್ಕೆ ಏರಿಕೆಯಾಗಿದೆ. ಬ್ರೂಕ್ ಬಾಂಡ್​​ನ ಚಹಾ ಪುಡಿಯ ಬೆಲೆಗಳು ಶೇ. 1.5ರಿಂದ 14ಕ್ಕೆ ಏರಿಕೆಯಾಗಿವೆ. ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಕಂಪನಿಗಳು ಕಾಫಿ, ಟೀ ಪುಡಿಯ ಬೆಲೆಯನ್ನು ಹೆಚ್ಚಿಸಿವೆ.

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮ್ಯಾಗಿ ಬೆಲೆ ಕೂಡ ಹೆಚ್ಚಳವಾಗಿದೆ. ನೆಸ್ಲೆ ಇಂಡಿಯಾ ಮ್ಯಾಗಿ ಬೆಲೆಯನ್ನು ಶೇ.9ರಿಂದ 16ರಷ್ಟು ಹೆಚ್ಚಿಸಿದೆ. ನೆಸ್ಲೆ ಕಂಪನಿಯು ಹಾಲು ಮತ್ತು ಕಾಫಿ ಪುಡಿಯ ಬೆಲೆಗಳನ್ನು ಕೂಡ ಹೆಚ್ಚಿಸಿದೆ. ಇಷ್ಟು ದಿನ 70 ಗ್ರಾಂ ಮ್ಯಾಗಿ ಪ್ಯಾಕೆಟ್​ಗೆ 12 ರೂ. ಇದ್ದುದು ಇನ್ನು ಮುಂದೆ 14 ರೂ. ಆಗಲಿದೆ. 140 ಗ್ರಾಂ ಮ್ಯಾಗಿ ಮಸಾಲಾ ನೂಡಲ್ಸ್ ಬೆಲೆ 3 ರೂ. ಹೆಚ್ಚಳವಾಗಲಿದೆ. 560 ಗ್ರಾಂ ಮ್ಯಾಗಿ ಪ್ಯಾಕ್​ಗೆ 96 ರೂ. ಇದ್ದುದು 105 ರೂ. ಆಗಿದೆ ಎಂದು ಸಿಎನ್​ಬಿಸಿ ಟಿವಿ-18 ವರದಿ ಮಾಡಿದೆ.

ಇದನ್ನೂ ಓದಿ: viral news: ವಿಶ್ವದ ಅಗ್ಗದ ಆಮ್ಲೆಟ್ ಮ್ಯಾಗಿಗಿಂತ ಕಡಿಮೆ ಸಮಯದಲ್ಲಿ ತಯಾರಾಗುತ್ತೆ! ಬೆಲೆ ತಿಳಿದರೆ ಶಾಕ್ ಆಗೋದು ಗ್ಯಾರಂಟಿ

Health Tips: ನೀವು ಕಾಫಿ, ಜ್ಯೂಸ್​ ಪ್ರಿಯರಾ?; ಪಾನೀಯ ಸೇವಿಸುವಾಗ ಈ 5 ತಪ್ಪನ್ನು ಎಂದೂ ಮಾಡಬೇಡಿ!

Published On - 5:30 pm, Mon, 14 March 22

ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ