Retail Inflation: ಭಾರತದ ಚಿಲ್ಲರೆ ಹಣದುಬ್ಬರ ದರ ಫೆಬ್ರವರಿಯಲ್ಲಿ ಶೇಕಡಾ 6.07ಕ್ಕೆ ಏರಿಕೆ

ಭಾರತದ ಗ್ರಾಹಕ ದರ ಸೂಚ್ಯಂಕ ಆಧಾರಿತ ರೀಟೇಲ್ ಹಣದುಬ್ಬರ ದರವು 2022ನೇ ಇಸವಿಯ ಫೆಬ್ರವರಿ ತಿಂಗಳಿಗೆ ಶೇ 6.07ರಷ್ಟಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Retail Inflation: ಭಾರತದ ಚಿಲ್ಲರೆ ಹಣದುಬ್ಬರ ದರ ಫೆಬ್ರವರಿಯಲ್ಲಿ ಶೇಕಡಾ 6.07ಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
TV9kannada Web Team

| Edited By: Srinivas Mata

Mar 14, 2022 | 9:32 PM

ಭಾರತದ ಚಿಲ್ಲರೆ ಹಣದುಬ್ಬರ (Retail Inflation) ದರವು ಹಿಂದಿನ ತಿಂಗಳಿನ (2022ರ ಜನವರಿ) ಶೇ 6.01ರಿಂದ ಫೆಬ್ರವರಿಯಲ್ಲಿ ಶೇಕಡಾ 6.07ಕ್ಕೆ ಸ್ವಲ್ಪ ಏರಿಕೆಯಾಗಿದೆ ಎಂದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯವು ಮಾರ್ಚ್ 14ರಂದು ಬಿಡುಗಡೆ ಮಾಡಿದ ಅಂಕಿಅಂಶಗಳು ತೋರಿಸಿವೆ. ಗ್ರಾಹಕ ಬೆಲೆ ಸೂಚ್ಯಂಕ (CPI) ಆಧರಿಸಿದ ಹಣದುಬ್ಬರವು 2021ರ ಫೆಬ್ರವರಿಯಲ್ಲಿ ಶೇಕಡಾ 5.03ರಷ್ಟಿತ್ತು. ಆ ತಿಂಗಳ ಸಿಪಿಐ ಹಣದುಬ್ಬರವು ಒಮ್ಮತದ ಅಂದಾಜಿನ ಮೇಲಿದೆ. ರಾಯಿಟರ್ಸ್ ಸಮೀಕ್ಷೆಯ ಪ್ರಕಾರ, ಚಿಲ್ಲರೆ ಹಣದುಬ್ಬರವು ಶೇಕಡಾ 5.93ಕ್ಕೆ ಇಳಿಯಬಹುದು ಎಂದು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದರು. 2022ರ ಮೊದಲ ತ್ರೈಮಾಸಿಕದಲ್ಲಿ ಸಿಪಿಐ ಹಣದುಬ್ಬರ ಸರಾಸರಿ ಶೇ 5.7 ಎಂದು ಫೆಬ್ರವರಿಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಹೇಳಿದೆ. ಕಳೆದ ತಿಂಗಳು ಪ್ರತಿಕೂಲವಾದ ಮೂಲ ಪರಿಣಾಮದ ಹೊರತಾಗಿಯೂ ಹಣದುಬ್ಬರವು ಎಂಟು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ್ದು, ಇದು ಅನುಕ್ರಮ ಬೆಲೆಯ ಚಲನೆಯನ್ನು ಸೂಚಿಸುತ್ತದೆ.

ಜನವರಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಸಿಪಿಐ ಸಾಮಾನ್ಯ ಸೂಚ್ಯಂಕವು ಶೇ 0.2 ಹೆಚ್ಚಾಗಿದ್ದು, ಕಳೆದ ತಿಂಗಳು ಬೆಲೆಯ ಒತ್ತಡಗಳು ಏರಿದೆ ಎಂದು ದೃಢಪಡಿಸುತ್ತದೆ. ಜನವರಿಯಲ್ಲಿ ಸಿಪಿಐ ಹಣದುಬ್ಬರವು ಪ್ರತಿಕೂಲವಾದ ಮೂಲ ಪರಿಣಾಮದ ಹಿನ್ನೆಲೆಯಲ್ಲಿ ಶೇ 6.01ಕ್ಕೆ ಏರಿದೆ. ಅನುಕ್ರಮ ಬೆಲೆಯ ಒತ್ತಡಗಳು ಆಹಾರೇತರ ವಸ್ತುಗಳಲ್ಲಿ ಹೆಚ್ಚಾಗಿ ಗೋಚರಿಸುತ್ತವೆ. ಜನವರಿಗೆ ಹೋಲಿಸಿದರೆ ಸಿಪಿಐ ಶೇ 0.2 ಕಡಿಮೆಯಾಗಿದೆ. ಬಟ್ಟೆ ಮತ್ತು ಪಾದರಕ್ಷೆಗಳು, ವಸತಿ, ಇಂಧನ ಮತ್ತು ವಿದ್ಯುತ್ ಹಾಗೂ ವಿವಿಧ ಗುಂಪುಗಳ ಸೂಚ್ಯಂಕಗಳು ಹಿಂದಿನ ತಿಂಗಳಿಗೆ ಹೋಲಿಸಿದರೆ ಫೆಬ್ರವರಿಯಲ್ಲಿ ಶೇ 0.4ರಿಂದ 0.9ರಷ್ಟು ಹೆಚ್ಚಾಗಿದೆ.

ಪ್ರಮುಖ ಕ್ಷೇತ್ರಗಳ ಹಣದುಬ್ಬರವು ಏರಿಳಿತಗಳ ಆಹಾರ ಮತ್ತು ಇಂಧನ ಘಟಕಗಳನ್ನು ಹೊರತುಪಡಿಸಿ ಆಧಾರವಾಗಿರುವ ಹಣದುಬ್ಬರದ ಅಳತೆ. ಆದರೂ ಲೆಕ್ಕಾಚಾರಗಳ ಪ್ರಕಾರ, ಸತತ ಮೂರನೇ ತಿಂಗಳಿಗೆ ಶೇ 6ರಷ್ಟು ಸ್ಥಿರವಾಗಿದೆ ಫೆಬ್ರವರಿಯಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆ ಎಂದರೆ ಮಾರ್ಚ್ ರೀಡಿಂಗ್ ಕನಿಷ್ಠ ಶೇ 5.1ಕ್ಕೆ ಇಳಿಯದ ಹೊರತು ಹಣದುಬ್ಬರವು ಜನವರಿ-ಮಾರ್ಚ್ 2022ಕ್ಕೆ ಆರ್​ಬಿಐನ ಮುನ್ಸೂಚನೆ ಶೇ 5.7 ಮೀರುತ್ತದೆ.

ಫೆಬ್ರವರಿ ಹಣದುಬ್ಬರ ದರ ಹೀಗಿದೆ: ಸಿಪಿಐ- ಶೇ 6.07 ಆಹಾರ ಸೂಚ್ಯಂಕ- ಶೇ 5.85 ಕಾಳುಗಳು- ಶೇ 3.95 ಮಾಂಸ, ಮೀನು- ಶೇ 7.45 ತೈಲ, ವನಸ್ಪತಿ- ಶೇ 16.44 ತರಕಾರಿ- ಶೇ 6.13 ಬೇಳೆ- ಶೇ 3.02 ಬಟ್ಟೆ, ಪಾದರಕ್ಷೆಗಳು- ಶೇ 8.86 ವಸತಿ- ಶೇ 3.57 ಇಂಧನ, ವಿದ್ಯುತ್- ಶೇ 8.73 ಇತರ- ಶೇ 6.52

ಫೆಬ್ರವರಿ ತಿಂಗಳಲ್ಲಿ ಹಣದುಬ್ಬರ ಪ್ರಮಾಣ ಹೆಚ್ಚಾಗಿದೆ ಅಂದಲ್ಲಿ 2022ರ ಜನವರಿಯಿಂದ ಮಾರ್ಚ್​ ಮಧ್ಯೆ ಆರ್​ಬಿಐ ಅಂದಾಜು ಶೇ 5.7ಕ್ಕಿಂತ ಜಾಸ್ತಿ ಆಗಬಹುದು. ಆದರೆ ಹೀಗಾಗಬಾರದು ಅಂತಾದಲ್ಲಿ ಕನಿಷ್ಠ ಶೇ 5.1ಕ್ಕೆ ಕುಸಿಯಬೇಕಾಗುತ್ತದೆ.

ಇದನ್ನೂ ಓದಿ: WPI: ಸಗಟು ಬೆಲೆ ಸೂಚ್ಯಂಕ ಆಧಾರಿತ ಹಣದುಬ್ಬರ ಫೆಬ್ರವರಿಯಲ್ಲಿ ಶೇ 13.11ಕ್ಕೆ ಏರಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada