Chitra Ramakrishna: ಎನ್​ಎಸ್​ಇ ಹಗರಣದ ಪ್ರಮುಖ ಆರೋಪಿ ಚಿತ್ರಾ ರಾಮಕೃಷ್ಣ 14 ದಿನಗಳ ನ್ಯಾಯಾಂಗ ಬಂಧನಕ್ಕೆ

ಎನ್​ಎಸ್​ಇ ಹಗರಣದಲ್ಲಿ ಮಾಜಿ ಎಂ.ಡಿ. ಹಾಗೂ ಸಿಇಒ ಚಿತ್ರಾ ರಾಮಕೃಷ್ಣ ಅವರನ್ನು 14 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಲಾಗಿದೆ.

Chitra Ramakrishna: ಎನ್​ಎಸ್​ಇ ಹಗರಣದ ಪ್ರಮುಖ ಆರೋಪಿ ಚಿತ್ರಾ ರಾಮಕೃಷ್ಣ 14 ದಿನಗಳ ನ್ಯಾಯಾಂಗ ಬಂಧನಕ್ಕೆ
ಚಿತ್ರಾ ರಾಮಕೃಷ್ಣ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Mar 14, 2022 | 5:22 PM

ಭಾರತದ ಅತಿ ದೊಡ್ಡ ಷೇರು ಮಾರುಕಟ್ಟೆಯಲ್ಲಿ ಗಂಭೀರ ಲೋಪ ಎಸಗಿದ್ದಾರೆ ಹಾಗೂ “ಹಿಮಾಲಯನ್ ಯೋಗಿ” ಎಂದು ಕರೆದಿರುವ ವ್ಯಕ್ತಿಯೊಂದಿಗೆ ಗೋಪ್ಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (NSE) ಮಾಜಿ ಮುಖ್ಯಸ್ಥೆ ಚಿತ್ರಾ ರಾಮಕೃಷ್ಣ ಅವರನ್ನು 14 ದಿನಗಳ ಕಾಲ ಜೈಲಿಗೆ ಕಳುಹಿಸಲಾಗಿದೆ. 2013 ರಿಂದ ಎನ್‌ಎಸ್‌ಇ ಮುಖ್ಯಸ್ಥರಾಗಿದ್ದ 59 ವರ್ಷದ ಚಿತ್ರಾ ರಾಮಕೃಷ್ಣ ಅವರನ್ನು ಮಾರುಕಟ್ಟೆ ತಿರುಚಿದ ಹಗರಣ ಎಂದು ಕರೆಯುವುದರಲ್ಲಿ ಕೆಲ ದಿನಗಳ ವಿಚಾರಣೆಯ ನಂತರ, ಫೆಬ್ರವರಿ 24ರಂದು ಕೇಂದ್ರೀಯ ತನಕ ದಳ (CBI) ಬಂಧಿಸಿತ್ತು. ಕೆಲವು ದಲ್ಲಾಳಿಗಳಿಗೆ ವ್ಯಾಪಾರದಲ್ಲಿ ಅನ್ಯಾಯ ಮಾರ್ಗದಲ್ಲಿ ಲಾಭವನ್ನು ಮಾಡಲು ಅವಕಾಶ ಕೊಟ್ಟ ಪ್ರಕರಣವನ್ನು 2018ರಲ್ಲಿ ದಾಖಲಿಸಲಾಗಿದೆ. ಏಜೆನ್ಸಿಯು ಮಾರುಕಟ್ಟೆ ವಿನಿಮಯ ಕೇಂದ್ರಗಳ ಕಂಪ್ಯೂಟರ್ ಸರ್ವರ್‌ಗಳಿಂದ ಸ್ಟಾಕ್ ಬ್ರೋಕರ್‌ಗಳಿಗೆ “ಕೋ- ಲೊಕೇಷನ್ ಸ್ಕ್ಯಾಮ್” ಎಂದು ಕರೆಯುವ ಮಾಹಿತಿ ಸೋರಿಕೆ ಆರೋಪಗಳನ್ನು ತನಿಖೆ ನಡೆಸುತ್ತಿದೆ.

ಚಿತ್ರಾ ರಾಮಕೃಷ್ಣ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು, ಸಂಸ್ಥೆಯು ತನ್ನ ಕಸ್ಟಡಿಯನ್ನು ಇನ್ನು ಮುಂದೆ ಕೇಳುವಂತಿಲ್ಲ ಎಂದು ಪ್ರತಿಪಾದಿಸಿದ್ದರು. ಆದರೆ ಸಿಬಿಐ ಇದನ್ನು ವಿರೋಧಿಸಿದ್ದು, ಆಕೆ ಪ್ರಭಾವಿ ವ್ಯಕ್ತಿಯಾಗಿದ್ದು, ವಿದೇಶಿ ಭೇಟಿಗಳು ಮತ್ತು ಪ್ರಕರಣದ ಇತರ ಅಂಶಗಳ ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದಿತು. “ಆದ್ದರಿಂದ ನಾವು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಬೇಕೆಂದು ಬಯಸುತ್ತೇವೆ” ಎಂದು ವಾದಿಸಿತು. ನ್ಯಾಯಾಲಯವು ಜೈಲು ಕಸ್ಟಡಿಯನ್ನು ಅನುಮೋದಿಸಿತು ಮತ್ತು ನಂತರ ಆ ಮನೆಯ ಆಹಾರ ಮತ್ತು ಇತರ ಸೌಕರ್ಯಗಳಿಗಾಗಿ ಚಿತ್ರಾ ರಾಮಕೃಷ್ಣ ಸಲ್ಲಿಸಿದ ಕೋರಿಕೆಯನ್ನು ತಿರಸ್ಕರಿಸಿತು.

“ಪ್ರತಿಯೊಬ್ಬ ಕೈದಿಯೂ ಒಂದೇ ಆಗಿದ್ದಾರೆ. ಆದ್ದುದರಿಂದ ಚಿತ್ರಾ ಅವರು ವಿಐಪಿ ಕೈದಿಯಾಗಲು ಸಾಧ್ಯವಿಲ್ಲ. ನಿಯಮಗಳನ್ನು ಬದಲಾಯಿಸಲಾಗುವುದಿಲ್ಲ,” ಎಂದು ನ್ಯಾಯಾಧೀಶ ಸಂಜೀವ್ ಅಗರ್​ವಾಲ್ ಹೇಳಿದರು, ಜೈಲಿನೊಳಗೆ ವಿಶೇಷ ಸೌಲಭ್ಯಗಳಿಗಾಗಿ ಚಿತ್ರಾ ಪರ ವಕೀಲರು ಒತ್ತಾಯಿಸಿದರು. ಆದರೆ, ನ್ಯಾಯಾಲಯವು ಚಿತ್ರಾ ಅವರ ಕೋರಿಕೆ ಪೈಕಿ ಪ್ರಾರ್ಥನಾ ಪುಸ್ತಕಗಳಾದ ಹನುಮಾನ್ ಚಾಲೀಸಾ ಮತ್ತು ಭಗವದ್ಗೀತೆಯ ಪ್ರತಿಯನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿತು.

ದೆಹಲಿ ಮೂಲದ ಸ್ಟಾಕ್ ಬ್ರೋಕರ್ ವಿರುದ್ಧ ಸುಮಾರು ನಾಲ್ಕು ವರ್ಷಗಳ ತನಿಖೆಯ ನಂತರ ಚಿತ್ರಾ ರಾಮಕೃಷ್ಣರನ್ನು ಸಿಬಿಐ ಬಂಧಿಸಿದೆ. ಮಾರುಕಟ್ಟೆ ನಿಯಂತ್ರಕ ಸೆಕ್ಯೂರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (SEBI) ವರದಿಯನ್ನು ಬಿಡುಗಡೆ ಮಾಡಿದ ನಂತರ ಈ ಬಂಧನವು ಎನ್‌ಎಸ್‌ಇಯ ಉನ್ನತ ಮಂಡಳಿಯಿಂದ ಅಧಿಕಾರದ ದುರುಪಯೋಗವನ್ನು ಸೂಚಿಸುತ್ತದೆ. ಚಿತ್ರಾ ರಾಮಕೃಷ್ಣ ಅವರು ಸುಮಾರು 20 ವರ್ಷಗಳ ಕಾಲ ಎಲ್ಲ ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ನಿಗೂಢ “ಹಿಮಾಲಯನ್ ಯೋಗಿ” ಅವರಿಂದ ಮಾರ್ಗದರ್ಶನ ಪಡೆದಿದ್ದಾರೆ ಎಂದು ವರದಿ ಹೇಳಿದೆ. ಆ ನಂತರ “ಯೋಗಿ”ಯೇ ಆನಂದ್ ಸುಬ್ರಮಣಿಯನ್ ಎಂದು ಬಹಿರಂಗಪಡಿಸಲಾಗಿದ್ದು, ಮಾರುಕಟ್ಟೆ ತಿರುಚಿದ ಪ್ರಕರಣದಲ್ಲಿ ವಿನಿಮಯ ಕೇಂದ್ರದ ಮಾಜಿ ಅಧಿಕಾರಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಮುಖವೇ ಗೊತ್ತಿಲ್ಲದ ಯೋಗಿಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡಿದ್ದ ಎನ್​ಎಸ್​ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್