Paytm Share Price: ಪೇಟಿಎಂ ಷೇರು ಸಾರ್ವಕಾಲಿಕ ಕನಿಷ್ಠ 672 ರೂಪಾಯಿಗೆ; ಐಪಿಒದಲ್ಲಿ ವಿತರಿಸಿದ್ದು 2150 ರೂ.ಗೆ

ಪೇಟಿಎಂ ಮಾತೃಸಂಸ್ಥೆಯಾದ ಒನ್​97 ಕಮ್ಯುನಿಕೇಷನ್ಸ್​ ಷೇರಿನ ಬೆಲೆಯು ಮಾರ್ಚ್ 14ನೇ ತಾರೀಕಿನ ಸೋಮವಾರದಂದು ಸಾರ್ವಕಾಲಿಕ ಕನಿಷ್ಠ ಮಟ್ಟವಾದ 672 ರುಪಾಯಿ ಮುಟ್ಟಿದೆ. ಈ ಷೇರನ್ನು 2150 ರೂಪಾಯಿಯಂತೆ ವಿತರಿಸಲಾಗಿತ್ತು.

Paytm Share Price: ಪೇಟಿಎಂ ಷೇರು ಸಾರ್ವಕಾಲಿಕ ಕನಿಷ್ಠ 672 ರೂಪಾಯಿಗೆ; ಐಪಿಒದಲ್ಲಿ ವಿತರಿಸಿದ್ದು 2150 ರೂ.ಗೆ
ಸಾಂದರ್ಭಿಕ ಚಿತ್ರ
Follow us
| Updated By: Srinivas Mata

Updated on:Mar 14, 2022 | 2:44 PM

ಪೇಟಿಎಂನ (Paytm) ಮಾತೃಸಂಸ್ಥೆಯಾದ ಒನ್​ 97 ಕಮ್ಯುನಿಕೇಷನ್ಸ್ ಷೇರು ಮಾರ್ಚ್​ 14ನೇ ತಾರೀಕಿನಂದು ನ್ಯಾಷನಲ್​ ಸ್ಟಾಕ್​ ಎಕ್ಸ್​ಚೇಂಜ್​ನಲ್ಲಿ (NSE) ಶೇ 13ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಕುಸಿದು, ವಾರ್ಷಿಕ ಕನಿಷ್ಠ ಮಟ್ಟವಾದ 672 ರೂಪಾಯಿಯನ್ನು ಮುಟ್ಟಿತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಪೇಟಿಎಂಗೆ ಹೊಸ ಗ್ರಾಹಕರನ್ನು ಸೇರ್ಪಡೆ ಮಾಡಿಕೊಳ್ಳದಂತೆ ಹಾಗೂ ಐಟಿ ಆಡಿಟ್​ ಮಾಡಿಸುವಂತೆ ಮಾರ್ಚ್ 11ನೇ ತಾರೀಕಿನಂದು ಸೂಚನೆ ನೀಡಿದೆ. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಷೇರಿನ ಬೆಲೆಯು ಶೇ 10ಕ್ಕಿಂತ ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ. ಅಂದಹಾಗೆ ಒನ್​97 ಕಮ್ಯುನಿಕೇಷನ್ಸ್​ ಷೇರುಗಳನ್ನು ಐಪಿಒದಲ್ಲಿ 2,150 ರೂಪಾಯಿಗೆ ವಿತರಿಸಲಾಗಿತ್ತು. ಇದೀಗ ಅದರ ಬೆಲೆ ಮೂರನೇ ಎರಡು ಭಾಗದಷ್ಟು ನಷ್ಟವಾಗಿದೆ. ಆರ್​ಬಿಐ ಕ್ರಮವು ಕಂಪೆನಿಗೆ ನಿಯಂತ್ರಕರ ಅನಿಶ್ಚಿತತೆ ಜಾಸ್ತಿ ಮಾಡಿದ ಮೇಲೆ ಬ್ರೋಕರೇಜ್​ ಸಂಸ್ಥೆಯಾದ ಮೋರ್ಗನ್ ಸ್ಟ್ಯಾನ್ಲಿಯಿಂದ ಪೇಟಿಎಂ ಅನ್ನು “ಓವರ್​ ವೇಯ್ಟ್​”ನಿಂದ “ಈಕ್ವಲ್ ವೇಯ್ಟ್” ಎಂದು ಡೌನ್​ಗ್ರೇಡ್ ಮಾಡಲಾಗಿದೆ.

ಮೋರ್ಗನ್ ಸ್ಟ್ಯಾನ್ಲಿಯು ದರದ ಗುರಿಯನ್ನು 1425 ರೂಪಾಯಿಯಿಂದ 935 ರುಪಾಯಿಗೆ ಇಳಿಸಲಾಗಿದೆ. ಬ್ರೋಕರೇಜ್ ಸಂಸ್ಥೆಯಾದ ಮಾಕ್ವೇರ್ ಸೆಕ್ಯೂರಿಟೀಸ್ ಇಂಡಿಯಾವು ಈ ಸ್ಟಾಕ್ ಅನ್ನು “ಅಂಡರ್​ಪರ್ಫಾರ್ಮ್” ಎಂದು ಕರೆದಿದ್ದು, ದರದ ಗುರಿಯನ್ನು 700 ರೂಪಾಯಿಗೆ ಇಳಿಸಲಾಗಿದೆ. ಮಾಕ್ವೈರ್ ಹೇಳುವಂತೆ, ಪೇಟಿಎಂ ಪೇಮೆಂಟ್​ ಬ್ಯಾಂಕ್‌ನ ಒಟ್ಟಾರೆ ವ್ಯವಹಾರದ ಮೇಲೆ ಪರಿಣಾಮವು ಗಣನೀಯವಾಗಿರುವುದಿಲ್ಲ. ಏಕೆಂದರೆ ಅದು ಈಗಾಗಲೇ ದೊಡ್ಡ ಸಂಖ್ಯೆಯ ಗ್ರಾಹಕರನ್ನು ಹೊಂದಿದೆ. ಕಂಪೆನಿಯ ವಿರುದ್ಧ ಆರ್​ಬಿಐ ಕ್ರಮವು ಬ್ರ್ಯಾಂಡ್ ಮತ್ತು ಗ್ರಾಹಕರ ನಿಷ್ಠೆಯ ಮೇಲೆ ಗಮನಾರ್ಹ ಪರಿಣಾಮಕ್ಕೆ ಕಾರಣವಾಗುತ್ತದೆ ಎನ್ನಲಾಗಿದೆ.

ಪೇಮೆಂಟ್​ ಬ್ಯಾಂಕ್​ ಆದ ಪೇಟಿಎಂನ ಉತ್ತಮ ಕಾರ್ಯನಿರ್ವಹಣೆಯ ವ್ಯವಹಾರಗಳಲ್ಲಿ ಒಂದಾಗಿದೆ. ಕಂಪೆನಿಯು ಡಿಸೆಂಬರ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಪೇಮೆಂಟ್​ ಮತ್ತು ಹಣಕಾಸು ಸೇವೆಗಳ ಆದಾಯದಲ್ಲಿ ವರ್ಷದಿಂದ ವರ್ಷಕ್ಕೆ ಶೇ 98ರಷ್ಟು ಬೆಳವಣಿಗೆಯನ್ನು ತೋರಿಸಿದೆ. ಗ್ರಾಹಕರಿಗೆ ಪೇಮೆಂಟ್ ಸೇವೆಗಳು ಆದಾಯದಲ್ಲಿ ಶೇ 60ರಷ್ಟು ಜಿಗಿತವನ್ನು ಕಂಡವು. ಆದರೆ ವ್ಯಾಪಾರಿಗಳಿಗೆ ಪೇಮೆಂಟ್ ಸೇವೆಗಳು MDR-ಉಪಕರಣಗಳಿಂದ ಶೇ 117ರಷ್ಟು ಬೆಳೆದವು. ಕಂಪೆನಿಯ ಸಾಲ ನೀಡುವ ಕಾರ್ಯಾಚರಣೆಗಳು ಡಿಸೆಂಬರ್ ತ್ರೈಮಾಸಿಕದಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿವೆ ಮತ್ತು ಸಾಲ ವಿತರಣೆಯು ವರ್ಷಕ್ಕೆ ಶೇ 401ರಷ್ಟು ಏರಿಕೆ ಆಗಿದೆ. ಪೇಟಿಎಂನ ಐಪಿಒ ಹೂಡಿಕೆದಾರರಿಗೆ ಸ್ಟಾಕ್‌ನಲ್ಲಿ ನಿಯಂತ್ರಕ ಅಪಾಯದ ಪ್ರೀಮಿಯಾದಲ್ಲಿನ ಹೆಚ್ಚಳವು ಅದರ ನಷ್ಟವನ್ನು ಕಡಿತಗೊಳಿಸಬಹುದಾದ ಸ್ಕ್ರಿಪ್‌ನಲ್ಲಿ ಅದ್ಭುತವಾದ ಚೇತರಿಕೆ ಸಾಧ್ಯತೆಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.

ಈ ವರದಿ ಸಿದ್ಧವಾಗುವ ಹೊತ್ತಿಗೆ ಒನ್​ 97 ಕಮ್ಯುನಿಕೇಷನ್ಸ್ ಷೇರು ಬೆಲೆಯು 693.25 ಇತ್ತು.

ಇದನ್ನೂ ಓದಿ: Paytm: ಪೇಟಿಎಂ ಮೂರನೇ ತ್ರೈಮಾಸಿಕ ನಷ್ಟ 778 ಕೋಟಿ ರೂಪಾಯಿಗಳಿಗೆ ವಿಸ್ತರಣೆ

Published On - 2:43 pm, Mon, 14 March 22