ಮುಖವೇ ಗೊತ್ತಿಲ್ಲದ ಯೋಗಿಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡಿದ್ದ ಎನ್​ಎಸ್​ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ

ಮುಖವೇ ಗೊತ್ತಿಲ್ಲದ ಯೋಗಿಯೊಂದಿಗೆ ಗೌಪ್ಯ ಮಾಹಿತಿ ಹಂಚಿಕೊಂಡಿದ್ದ ಎನ್​ಎಸ್​ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಬಂಧನ
ಚಿತ್ರಾ ರಾಮಕೃಷ್ಣ

Chitra Ramkrishna: 2013ಎಲ್ಲಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದ ಚಿತ್ರಾ ರಾಮಕೃಷ್ಣ 2014ರಿಂದ 2016ರವರೆಗೆ ಎನ್​ಎಸ್​ಇಯ ಅನೇಕ ಗೌಪ್ಯ ಮಾಹಿತಿಯನ್ನು ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಹಂಚಿಕೊಂಡಿದ್ದಾರೆ ಎಂದು ಸೆಬಿ ಹೇಳಿತ್ತು.

TV9kannada Web Team

| Edited By: Apurva Kumar Balegere

Mar 07, 2022 | 9:50 AM

ನ್ಯಾಶನಲ್​ ಸ್ಟಾಕ್​ ಎಕ್ಸ್​​ಚೇಂಜ್​  (NSE)ಮಾಜಿ ಸಿಇಒ ಚಿತ್ರಾ ರಾಮಕೃಷ್ಣ (Chitra Ramkrishna) ಭಾನುವಾರ ಸಿಬಿಐ (ಕೇಂದ್ರೀಯ ತನಿಖಾ ದಳ) ಬಂಧಿಸಿದೆ. ಚಿತ್ರಾ ರಾಮಕೃಷ್ಣರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೋರ್ಟ್​ ತಿರಸ್ಕರಿಸಿದ ಬಳಿಕ ಸಿಬಿಐ ಅವರನ್ನು ವಶಕ್ಕೆ ಪಡೆದಿದೆ. ಫೆ.25ರಂದು ಮಾಜಿ ಸಿಇಒ ಆನಂದ್​ ಸುಬ್ರಹ್ಮಣಿಯನ್​ರನ್ನು ಸಿಬಿಐ ಬಂಧನ ಮಾಡಿತ್ತು. ಇದೊಂದು ವಿಚಿತ್ರ ಪ್ರಕರಣ. 2013ರಿಂದ 2016ರವರೆಗೆ ಎನ್​ಎಸ್​ಇ ಸಿಇಒ ಮತ್ತು ಮ್ಯಾನೇಜಿಂಗ್​ ಡೈರೆಕ್ಟರ್​ ಆಗಿದ್ದ ಚಿತ್ರಾ, ಹಿಮಾಲಯದಲ್ಲಿರುವ ಒಬ್ಬ ಯೋಗಿಯವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಎನ್​ಎಸ್​ಇಗೆ ಸಂಬಂಧಿಸಿದ ಹಲವು ಗೌಪ್ಯ ವಿಚಾರಗಳನ್ನು ಅವರೊಂದಿಗೆ ಹಂಚಿಕೊಂಡಿದ್ದರು. ಆದರೆ ಆ ಯೋಗಿ ಯಾರು, ಅವರ ಮುಖ ಹೇಗಿದೆ ಎಂಬುದು ಸ್ವತಃ ಚಿತ್ರಾರಿಗೂ ಗೊತ್ತಿರಲಿಲ್ಲ.  ಆ ಅಪರಿಚಿತ ಯೋಗಿ ಆದೇಶದ ಮೇರೆಗೇ ಆನಂದ್​ರನ್ನು ಚಿತ್ರಾ ಎನ್​ಎಸ್​ಇಗೆ ನೇಮಕ ಮಾಡಿಕೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಆ ಯೋಗಿ ಬೇರೆ ಯಾರೂ ಅಲ್ಲ, ಆನಂದ್​ ಸುಬ್ರಹ್ಮಣಿಯನ್​ ಅವರೇ ಯೋಗಿಯಂತೆ ನಟಿಸಿದ್ದರು ಎಂಬುದು ಸಿಬಿಐ ಅನುಮಾನ.

ಈ ಪ್ರಕರಣ ಬೆಳಕಿಗೆ ಬಂದಿದ್ದು 2022ರ ಫೆಬ್ರವರಿಯಲ್ಲಿ. ಮಾರುಕಟ್ಟೆ ನಿಯಂತ್ರಕವಾದ ಸೆಕ್ಯೂರಿಟಿಸ್​ ಆ್ಯಂಡ್ ಎಕ್ಸ್​ಚೇಂಜ್​ ಬೋರ್ಡ್​ ಆಫ್​ ಇಂಡಿಯಾ (ಸೆಬಿ-SEBI) ತನಿಖೆಯಲ್ಲಿ ಗೊತ್ತಾಗಿದೆ. ಅತಿದೊಡ್ಡ ಷೇರು ವಿನಿಮಯ ಕೇಂದ್ರವಾದ ಎನ್​ಎಸ್​ಇಯಲ್ಲಿ 2010ರಿಂದ 2015ರ ಅವಧಿಯಲ್ಲಿ  ಹಲವು ಅಕ್ರಮ, ಅನ್ಯಾಯಗಳು ನಡೆದಿವೆ. 2013ಎಲ್ಲಿ ಸಿಇಒ ಆಗಿ ಅಧಿಕಾರ ಸ್ವೀಕರಿಸಿದ್ದ ಚಿತ್ರಾ ರಾಮಕೃಷ್ಣ 2014ರಿಂದ 2016ರವರೆಗೆ ಎನ್​ಎಸ್​ಇಯ ಅನೇಕ ಗೌಪ್ಯ ಮಾಹಿತಿಯನ್ನು ಅಪರಿಚಿತ ವ್ಯಕ್ತಿಯೊಬ್ಬನೊಂದಿಗೆ ಹಂಚಿಕೊಂಡಿದ್ದಾರೆ. ಅವರು ಇ-ಮೇಲ್​ ಮೂಲಕ ಸಂವಹನ ನಡೆಸುತ್ತಿದ್ದುದಕ್ಕೆ ದಾಖಲೆಗಳ ಪುರಾವೆ ಇದೆ ಎಂದೂ ಸೆಬಿ ಹೇಳಿತ್ತು. ಅದರ ಬೆನ್ನಲ್ಲೇ ಚಿತ್ರಾರ ಮುಂಬೈ ಮನೆ ಮೇಲೆ ಆದಾಯ ತೆರಿಗೆ ದಾಳಿಯೂ ಆಗಿತ್ತು.

ಅಂದಹಾಗೇ ಚಿತ್ರಾ ವಿರುದ್ಧ ಸಿಬಿಐ ತನಿಖೆ ಕೈಗೊಂಡಿದ್ದು ಅವರ ಆಡಳಿತ ಅವಧಿಯಲ್ಲಿ ನಡೆದ ಕೋ ಲೊಕೇಶನ್​ ಎಂಬ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟು. ಎನ್‌ಎಸ್‌ಇಯ ಹೈ-ಸ್ಪೀಡ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಅಥವಾ ಆಲ್ಗೋ ಟ್ರೇಡಿಂಗ್ ಮತ್ತು ಕೋ-ಲೊಕೇಶನ್ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿಸಿ, ಕೆಲವು ದಲ್ಲಾಳಿಗಳು ಅನ್ಯಾಯದ ಮಾರ್ಗದಲ್ಲಿ ಬೇರೆಯವರಿಗಿಂದ ಹೆಚ್ಚಿನ ಲಾಭವನ್ನು ಗಳಿಸಿದ ಕೋ-ಲೊಕೇಶನ್ ಹಗರಣದ ತನಿಖೆಯನ್ನು ಸಿಬಿಐ 2017ರಲ್ಲೇ ಕೈಗೆತ್ತಿಕೊಂಡಿದ್ದು, 2018ರಲ್ಲಿ ಎಫ್​ಐಆರ್ ದಾಖಲು ಮಾಡಿತ್ತು. ಅಷ್ಟೇ ಅಲ್ಲ, ಚಿತ್ರಾ ವಿರುದ್ಧ ಲುಕೌಟ್ ನೋಟಿಸ್​ ಕೂಡ ಜಾರಿ ಮಾಡಿತ್ತು.

ಇದನ್ನೂ ಓದಿ: Chitra Ramakrishna: ಅಪರಿಚಿತ ಯೋಗಿ ಇಶಾರೆಯಂತೆ 3 ವರ್ಷ ಎನ್​ಎಸ್​ಇ ಮುನ್ನಡೆಸಿದ ಮಾಜಿ ಸಿಇಒ ಚಿತ್ರಾ ವಿಚಿತ್ರ ಸ್ಟೋರಿ

Follow us on

Related Stories

Most Read Stories

Click on your DTH Provider to Add TV9 Kannada